ಸುಭಾಷಿತ :

Tuesday, February 18 , 2020 1:50 PM

ಬಿಗ್ ನ್ಯೂಸ್ : ರಾಜ್ಯ ಬಿಜೆಪಿ ಸರ್ಕಾರದಲ್ಲಿ ಮತ್ತೆ ಮೂವರು ಹೊಸಬರಿಗೆ `DCM’ ಹುದ್ದೆ?


Monday, January 20th, 2020 6:44 am

ಬೆಂಗಳೂರು : ಸಚಿವ ಸಂಪುಟ ವಿಸ್ತರಣೆ ಕುರಿತಂತೆ ರಾಜ್ಯ ಬಿಜೆಪಿಯಲ್ಲಿ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ, ಇದೀಗ ಬಿಜೆಪಿ ಮತ್ತೆ ಮೂವರು ಹೊಸ ಡಿಸಿಎಂಗಳನ್ನು ನೇಮಕ ಮಾಡುವ ಕುರಿತು ಚರ್ಚೆ ನಡೆಸುತ್ತಿದೆ ಎನ್ನಲಾಗಿದೆ.

ರಾಜ್ಯ ಬಿಜೆಪಿಯಲ್ಲಿ ಒಟ್ಟು ನಾಲ್ಕು ಡಿಸಿಎಂಗಳನ್ನು ಸೃಷ್ಟಿ ಮಾಡಿ, ಈಗಿರುವ ಇಬ್ಬರು ಡಿಸಿಎಂಗಳಿಗೆ ಶಾಕ್ ಕೊಟ್ಟು ಮತ್ತೆ ಹೊಸದಾಗಿ ಮೂವರನ್ನು ಡಿಸಿಎಂ ಮಾಡುವ ಪ್ಲಾನ್ ಮಾಡಿದೆ ಎಂದು ಹೇಳಲಾಗುತ್ತಿದೆ.

ಬಿಜೆಪಿ ಹೈಕಮಾಂಡ್ ಒಟ್ಟು ನಾಲ್ಕು ಡಿಸಿಎಂ ಹುದ್ದೆಗಳ ಸೃಷ್ಟಿ ಬಗ್ಗೆ ಚರ್ಚೆ ನಡೆಸಿದೆ ಎನ್ನಲಾಗಿದ್ದು, ಮೂರು ಡಿಸಿಎಂ ಸ್ಥಾನಗಳನ್ನು 4 ಕ್ಕೆ ಏರಿಸಿ ಜಾತಿ ಹಾಗೂ ಪ್ರದೇಶದ ಆಧಾರದ ಮೇಲೆ ಡಿಸಿಎಂ ಸ್ಥಾನ ಘೋಷಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಇನ್ನು ಸದ್ಯ ಡಿಸಿಎಂ ಸ್ಥಾನದಲ್ಲಿರುವ ಗೋವಿಂದ ಕಾರಾಜೋಳ, ಆಶ್ವಥ್ ನಾರಾಯಣ, ಲಕ್ಷ್ಮಣ್ ಸವದಿ ಅವರಲ್ಲಿ ಯಾರಿಗೆ ಡಿಸಿಎಂ ಹುದ್ದೆಯಿಂದ ಕೋಕ್ ನೀಡಲಿದ್ದಾರೆ ಎಂಬುದು ಕಾದು ನೋಬೇಕು.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions