ಮೈಸೂರು: ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ( Ex CM BS Yediyurappa ), ಬಿಜೆಪಿಗೆ ಪರಿಷತ್ ಚುನಾವಣೆಯಲ್ಲಿ ( Karnataka Council Election ) ಬೆಂಬಲಿಸುವಂತೆ ಪೋನ್ ಮಾಡಿ ಕುಮಾರಸ್ವಾಮಿ ( HD Kumaraswamy ) ಕೇಳಿದ್ದಾಗಿ ತಿಳಿಸಿದ್ದರು. ಆದ್ರೇ ಕುಮಾರಸ್ವಾಮಿ ಮಾತ್ರ ಇಂದು ಸುದ್ದಿಗೋಷ್ಠಿಯಲ್ಲಿ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ( JDS Party ) ಜೊತೆಗೆ ಮೈತ್ರಿಯಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. ಇದರ ಬೆನ್ನಲ್ಲೇ ಬಿಜೆಪಿ ಸಂಸದ ಬಿಜೆಪಿಗೆ ಯಾವ ಪಕ್ಷದ ಮೈತ್ರಿಯೂ ಅನಿವಾರ್ಯವಿಲ್ಲ ಎಂಬುದಾಗಿ ಹೇಳುವ ಮೂಲಕ, ಜೆಡಿಎಸ್ ಗೆ ಟಾಂಗ್ ನೀಡಿದ್ದಾರೆ.
BIG BREAKING NEWS: ‘ಪರಿಷತ್ ಚುನಾವಣೆ’ಯಲ್ಲಿ ‘ಬಿಜೆಪಿ ಜತೆ ಜೆಡಿಎಸ್ ಮೈತ್ರಿ’ಯಿಲ್ಲ – ಮಾಜಿ ಸಿಎಂ ಕುಮಾರಸ್ವಾಮಿ
ಇಂದು ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಬಿಜೆಪಿ ಸಂಸದ ವಿ ಶ್ರೀನಿವಾಸ್ ಪ್ರಸಾದ್ ಅವರು, ಅತಿ ಹೆಚ್ಚು ಸ್ಥಾನ ಗಳಿಸಿ ಕೇಂದ್ರದಲ್ಲಿ ಅಧಿಕಾರ ಗಳಿಸಿರುವಂತ ಬಿಜೆಪಿ ಪಕ್ಷಕ್ಕೇ, ಪರಿಷತ್ ಚುನಾವಣೆಯಲ್ಲಿ ಯಾವುದೇ ಪಕ್ಷದ ಮೈತ್ರಿ ಅಗತ್ಯವಿಲ್ಲ. ಕಳೆದ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ – ಜೆಡಿಎಸ್ ಮೈತ್ರಿಯೊಂದಿಗೆ ಎಷ್ಟು ಸ್ಥಾನ ಗಳಿಸಿದೆ ಎಂಬುದು ಗೊತ್ತಿದೆ ಎಂದರು.
ನೀವು ‘ಆನ್ ಲೈನ್’ ಮೂಲಕ ಲೋನ್ ಪಡೆಯೋ ಯೋಚನೆಯಲ್ಲಿ ಇದ್ದೀರಾ.? ಅದಕ್ಕೂ ಮುನ್ನಾ ಈ ಸುದ್ದಿ ಓದಿ.!