ಬೆಂಗಳೂರು: ರಾಜ್ಯಾದ್ಯಂತ ಎಲ್ಲಾ ಟೋಲ್ ದರ ( Toll Rate ) ಏರಿಕೆಯಾಗಿದೆ, ರಸ್ತೆಗಳು ಗುಂಡಿ ಬಿದ್ದಿದ್ದರೂ, ಅಗತ್ಯ ಸೌಕರ್ಯಗಳು ಇಲ್ಲದಿದ್ದರೂ ಜನತೆ ಏರಿದ ಟೋಲ್ ದರ ಕಟ್ಟಲೇಬೇಕು. ಪೆಟ್ರೋಲ್, ಡೀಸೆಲ್‌ಗಳಷ್ಟೇ ದುಬಾರಿಯಲ್ಲ, ಇಂದಿನಿಂದ ಟೋಲ್ ಕೂಡ ದುಬಾರಿ. ಅಚ್ಛೆ ದಿನಗಳ ಹೆಸರು ಹೇಳಿ ದುಬಾರಿ ದಿನಗಳನ್ನು ಕೊಟ್ಟು ಜನರನ್ನು ಫೂಲ್ ಮಾಡಿದೆ ಬಿಜೆಪಿ ( BJP Karnataka ) ಎಂಬುದಾಗಿ ಕರ್ನಾಟಕ ಕಾಂಗ್ರೆಸ್ ( Karnataka Congress ) ಕಿಡಿ ಕಾರಿದೆ.
ರಾಜ್ಯಾದ್ಯಂತ ಎಲ್ಲಾ ಟೋಲ್ ದರ ಏರಿಕೆಯಾಗಿದೆ,
ರಸ್ತೆಗಳು ಗುಂಡಿ ಬಿದ್ದಿದ್ದರೂ, ಅಗತ್ಯ ಸೌಕರ್ಯಗಳು ಇಲ್ಲದಿದ್ದರೂ ಜನತೆ ಏರಿದ ಟೋಲ್ ದರ ಕಟ್ಟಲೇಬೇಕು.ಪೆಟ್ರೋಲ್, ಡೀಸೆಲ್‌ಗಳಷ್ಟೇ ದುಬಾರಿಯಲ್ಲ, ಇಂದಿನಿಂದ ಟೋಲ್ ಕೂಡ ದುಬಾರಿ.
ಅಚ್ಛೆ ದಿನಗಳ ಹೆಸರು ಹೇಳಿ ದುಬಾರಿ ದಿನಗಳನ್ನು ಕೊಟ್ಟು ಜನರನ್ನು ಫೂಲ್ ಮಾಡಿದೆ ಬಿಜೆಪಿ.#BJPFoolsPeople pic.twitter.com/NhWKcc0Kre
— Karnataka Congress (@INCKarnataka) April 1, 2023
ಇಂದು ಈ ಬಗ್ಗೆ ಸರಣಿ ಟ್ವಿಟ್ ( Twitter ) ಮಾಡಿದ್ದು, ಡಿಜಿಟಲ್ ಇಂಡಿಯಾ, ಕ್ಯಾಶ್ ಲೆಸ್ ಇಂಡಿಯಾ ಎನ್ನುವ ಆಕರ್ಷಕ ಪದಗಳಿಂದ ಜನರನ್ನು ಮರುಳು ಮಾಡಿದ ಬಿಜೆಪಿ ಸರ್ಕಾರ ಇದೇ ಏಪ್ರಿಲ್ 1ರಿಂದ ₹2000ಕ್ಕೂ ಹೆಚ್ಚು ಮೊತ್ತದ UPI ವಹಿವಾಟು ನಡೆಸುವ ವ್ಯಾಪಾರಿಗಳಿಗೆ ಸುಂಕದ ಬರೆ ಬೀಳಲಿದೆ. ಇದು ಜನರಿಗೆ ಬಿಜೆಪಿ ಮಾಡಿದ “ಏಪ್ರಿಲ್ ಫೂಲ್” ಎಂದು ವಾಗ್ಧಾಳಿ ನಡೆಸಿದೆ.
ಡಿಜಿಟಲ್ ಇಂಡಿಯಾ, ಕ್ಯಾಶ್ ಲೆಸ್ ಇಂಡಿಯಾ ಎನ್ನುವ ಆಕರ್ಷಕ ಪದಗಳಿಂದ ಜನರನ್ನು ಮರುಳು ಮಾಡಿದ ಬಿಜೆಪಿ ಸರ್ಕಾರ ಇದೇ ಏಪ್ರಿಲ್ 1ರಿಂದ ₹2000ಕ್ಕೂ ಹೆಚ್ಚು ಮೊತ್ತದ UPI ವಹಿವಾಟು ನಡೆಸುವ ವ್ಯಾಪಾರಿಗಳಿಗೆ ಸುಂಕದ ಬರೆ ಬೀಳಲಿದೆ.
ಇದು ಜನರಿಗೆ ಬಿಜೆಪಿ ಮಾಡಿದ "ಏಪ್ರಿಲ್ ಫೂಲ್"#BJPFoolsPeople
— Karnataka Congress (@INCKarnataka) April 1, 2023
ಏಪ್ರಿಲ್ 1ರಂದು ಬಿಜೆಪಿ ಜನರನ್ನು ಮೂರ್ಖರನ್ನಾಗಿಸಿದ ಮತ್ತೊಂದು ನಿದರ್ಶನವೆಂದರೆ ಅಗತ್ಯ ಔಷಧಗಳ ಬೆಲೆ ಏರಿಕೆ. ಜನ ಔಷಧ, ಆಯುಶ್ಮಾನ್ ಭಾರತ ಮುಂತಾದ ಬಣ್ಣ ಬಣ್ಣದ ಆಕರ್ಷಕ ಹೆಸರುಗಳನ್ನು ತೇಲಿಬಿಟ್ಟ ಬಿಜೆಪಿ ಇದೇ ಏಪ್ರಿಲ್ 1ರಿಂದ ಒಳಗೊಳಗೇ ಔಷಧಗಳ ಬೆಲೆ ಏರಿಸಿ ಜನರನ್ನು “ಏಪ್ರಿಲ್ ಫೂಲ್” ಎಂದು ಅಣಕಿಸುತ್ತಿದೆ ಎಂದು ಗುಡುಗಿದೆ.
ಏಪ್ರಿಲ್ 1ರಂದು ಬಿಜೆಪಿ ಜನರನ್ನು ಮೂರ್ಖರನ್ನಾಗಿಸಿದ ಮತ್ತೊಂದು ನಿದರ್ಶನವೆಂದರೆ ಅಗತ್ಯ ಔಷಧಗಳ ಬೆಲೆ ಏರಿಕೆ.
ಜನ ಔಷಧ, ಆಯುಶ್ಮಾನ್ ಭಾರತ ಮುಂತಾದ ಬಣ್ಣ ಬಣ್ಣದ ಆಕರ್ಷಕ ಹೆಸರುಗಳನ್ನು ತೇಲಿಬಿಟ್ಟ ಬಿಜೆಪಿ ಇದೇ ಏಪ್ರಿಲ್ 1ರಿಂದ ಒಳಗೊಳಗೇ ಔಷಧಗಳ ಬೆಲೆ ಏರಿಸಿ ಜನರನ್ನು "ಏಪ್ರಿಲ್ ಫೂಲ್" ಎಂದು ಅಣಕಿಸುತ್ತಿದೆ.#BJPFoolsPeople
— Karnataka Congress (@INCKarnataka) April 1, 2023
ಬೆಳ್ಳಿ ಫೋಟೋ ಹೆಸರಲ್ಲಿ ನಕಲಿ ತಗಡನ್ನು ಉಡುಗೊರೆ ನೀಡಿದೆ ಬಿಜೆಪಿ. ಏಪ್ರಿಲ್ 1ರಂದು ಮಾತ್ರವಲ್ಲ, ವರ್ಷದ 365 ದಿನವೂ ಜನರನ್ನು ಪೂಲ್ ಮಾಡುತ್ತಲೇ ಇರುತ್ತದೆ ಬಿಜೆಪಿ. ಜನರ ಕಿವಿ ಮೇಲೆ ಹೂವು ಇಡುವುದು, ತಲೆ ಮೇಲೆ ಮಕ್ಮಲ್ ಟೋಪಿ ಇಡುವುದು ಬಿಜೆಪಿಗೆ ಕರಗತವಾದ ವಿದ್ಯೆ ಎಂದು ಹೇಳಿದೆ.
ಬೆಳ್ಳಿ ಫೋಟೋ ಹೆಸರಲ್ಲಿ ನಕಲಿ ತಗಡನ್ನು ಉಡುಗೊರೆ ನೀಡಿದೆ @BJP4Karnataka!
ಏಪ್ರಿಲ್ 1ರಂದು ಮಾತ್ರವಲ್ಲ, ವರ್ಷದ 365 ದಿನವೂ ಜನರನ್ನು ಪೂಲ್ ಮಾಡುತ್ತಲೇ ಇರುತ್ತದೆ ಬಿಜೆಪಿ.
ಜನರ ಕಿವಿ ಮೇಲೆ ಹೂವು ಇಡುವುದು, ತಲೆ ಮೇಲೆ ಮಕ್ಮಲ್ ಟೋಪಿ ಇಡುವುದು ಬಿಜೆಪಿಗೆ ಕರಗತವಾದ ವಿದ್ಯೆ.#BJPFoolsPeople pic.twitter.com/slllXWxSVO
— Karnataka Congress (@INCKarnataka) April 1, 2023
ಏಪ್ರಿಲ್ ಒಂದರಿಂದ ಎಲ್ಲಾ ದುಡಿಯುವ ಮಹಿಳೆಯರಿಗೆ, ವಿದ್ಯಾರ್ಥಿನೀಯರಿಗೆ ಉಚಿತ ಬಸ್ ಪಾಸ್ ಎಂಬ ಹೂವನ್ನು ಕಿವಿ ಮೇಲಿಟ್ಟಿದ್ದರು ಬಸವರಾಜ ಬೊಮ್ಮಾಯಿ. “ಏಪ್ರಿಲ್ 1ರಿಂದ” ಎಂದಿದ್ದೇ ಮಹಿಳೆಯರನ್ನು ಮೂರ್ಖರಾಗಿಸುವ ಸಲುವಾಗಿಯೇ ಬಿಜೆಪಿ ? ಏಪ್ರಿಲ್ 1ರಂದೇ ಬಸ್ ಪಾಸ್ ನೀಡದೆ ಮಹಿಳೆಯರಿಗೆ ಏಪ್ರಿಲ್ ಫೂಲ್ ಮಾಡಿದೆ ಸರ್ಕಾರ ಎಂದು ವಾಗ್ಧಾಳಿ ನಡೆಸಿದೆ.
ಏಪ್ರಿಲ್ ಒಂದರಿಂದ ಎಲ್ಲಾ ದುಡಿಯುವ ಮಹಿಳೆಯರಿಗೆ, ವಿದ್ಯಾರ್ಥಿನೀಯರಿಗೆ ಉಚಿತ ಬಸ್ ಪಾಸ್ ಎಂಬ ಹೂವನ್ನು ಕಿವಿ ಮೇಲಿಟ್ಟಿದ್ದರು @BSBommai.
"ಏಪ್ರಿಲ್ 1ರಿಂದ" ಎಂದಿದ್ದೇ ಮಹಿಳೆಯರನ್ನು ಮೂರ್ಖರಾಗಿಸುವ ಸಲುವಾಗಿಯೇ @BJP4Karnataka?
ಏಪ್ರಿಲ್ 1ರಂದೇ ಬಸ್ ಪಾಸ್ ನೀಡದೆ ಮಹಿಳೆಯರಿಗೆ ಏಪ್ರಿಲ್ ಫೂಲ್ ಮಾಡಿದೆ ಸರ್ಕಾರ.#BJPFoolsPeople pic.twitter.com/8bdXHXUZgj
— Karnataka Congress (@INCKarnataka) April 1, 2023
ಅಪರಾಧಿ ಎಂದು ಸಾಬೀತಾಗಿರುವ ಬಿಜೆಪಿ ಶಾಸಕ ನೆಹರೂ ಒಲೆಕಾರ್‌ರನ್ನು ಅನರ್ಹಗೊಳಿಸಿಲ್ಲ ಏಕೆ? ಎಂಬ ಹೈಕೋರ್ಟಿನ ಪ್ರಶ್ನೆಗೆ ಸರ್ಕಾರದ ಬಳಿ ಉತ್ತರವಿದೆಯೇ? ವಿಪಕ್ಷಗಳ ನಾಯಕರ ಮೇಲೆ ನಿಯಮಗಳನ್ನು ಮೀರಿ ಮುಗಿಬೀಳುವ ಬಿಜೆಪಿ ತಮ್ಮದೇ ಪಕ್ಷದ ನಾಯಕರ ಮೇಲೆ ನಿಯಮಗಳನ್ನು ಜಾರಿಗೊಳಿಸುವುದಿಲ್ಲ ಏಕೆ? ಬಿಜೆಪಿಗರು ಕಾನೂನಿಗೆ ಅತೀತರೇ ಬಸವರಾಜ ಬೊಮ್ಮಾಯಿ ಅವರೇ? ಎಂದು ಪ್ರಶ್ನಿಸಿದೆ.
ಅಪರಾಧಿ ಎಂದು ಸಾಬೀತಾಗಿರುವ ಬಿಜೆಪಿ ಶಾಸಕ ನೆಹರೂ ಒಲೆಕಾರ್‌ರನ್ನು ಅನರ್ಹಗೊಳಿಸಿಲ್ಲ ಏಕೆ? ಎಂಬ ಹೈಕೋರ್ಟಿನ ಪ್ರಶ್ನೆಗೆ ಸರ್ಕಾರದ ಬಳಿ ಉತ್ತರವಿದೆಯೇ?
ವಿಪಕ್ಷಗಳ ನಾಯಕರ ಮೇಲೆ ನಿಯಮಗಳನ್ನು ಮೀರಿ ಮುಗಿಬೀಳುವ ಬಿಜೆಪಿ ತಮ್ಮದೇ ಪಕ್ಷದ ನಾಯಕರ ಮೇಲೆ ನಿಯಮಗಳನ್ನು ಜಾರಿಗೊಳಿಸುವುದಿಲ್ಲ ಏಕೆ?
ಬಿಜೆಪಿಗರು ಕಾನೂನಿಗೆ ಅತೀತರೇ @BSBommai ಅವರೇ? pic.twitter.com/lFGxq24TYr
— Karnataka Congress (@INCKarnataka) April 1, 2023