ಸುಭಾಷಿತ :

Wednesday, April 8 , 2020 12:39 AM

2019ರ ಲೋಕಸಭಾ ಚುನಾವಣೆಯಲ್ಲಿ ‘ಆನ್‌ಲೈನ್‌ ಜಾಹೀರಾತಿ’ಗೆ ‘ರಾಜಕೀಯ ಪಕ್ಷ’ಗಳು ಖರ್ಚು ಮಾಡಿದ್ದೆಷ್ಟು ಗೊತ್ತಾ.?


Sunday, May 26th, 2019 10:06 am


ಎಲೆಕ್ಷನ್ ಡೆಸ್ಕ್ : ಲೋಕಸಭಾ ಚುನಾವಣೆ 2019 ಮುಕ್ತಾಯಗೊಂಡಿದೆ. ಇನ್ನೇನಿದ್ದರೂ ಮೋದಿ ನೇತೃತ್ವದ ನೂತನ ಸರ್ಕಾರ ಕೇಂದ್ರದಲ್ಲಿ ರಚನೆಗೊಂಡು ಆಡಳಿತ ನಡೆಸುವುದಷ್ಟೇ ಬಾಕಿ ಇದೆ. ಈ ನಡುವೆ ಸಾರ್ವತ್ರಿಕ ಚುನಾವಣೆಯಲ್ಲಿ ವಿವಿಧ ರಾಜಕೀಯ ಪಕ್ಷಗಳು ಆನ್‌ಲೈನ್‌ ಜಾಹೀರಾತಿಗಾಗಿ ಖರ್ಚು ಮಾಡಿದ ವೆಚ್ಚ ಕೇಳಿದರೇ ಶಾಕ್ ಆಗ್ತೀರಿ..

ಹೌದು ಈ ಬಾರಿಯ ಸಾರ್ವತ್ರಿಕ ಚುನಾವಣೆಯಲ್ಲಿ ವಿವಿಧ ರಾಜಕೀಯ ಪಕ್ಷಗಳು ಟಿವಿ ಮತ್ತು ಪತ್ರಿಕಾ ಜಾಹೀರಾತುಗಳ ಜೊತೆಗೆ ಆನ್‌ಲೈನ್‌ ಜಾಹೀರಾತುಗಳಿಗು ಮೊರೆ ಹೋಗಿದ್ದವು. ತಮ್ಮ ಪಕ್ಷದ ಪ್ರಚಾರಕ್ಕಾಗಿ ಫೇಸ್‌ಬುಕ್‌ ಮತ್ತು ಗೂಗಲ್‌ನಲ್ಲಿ ಜಾಹೀರಾತುಗಳನ್ನು ನೀಡಲು ಒಂದೊಂದು ಪಕ್ಷಗಳು ಕೋಟಿ ಗಟ್ಟಲೇ ಹಣವನ್ನು ವ್ಯಹಿಸಿವೆ.

ಒಟ್ಟಾರೆಯಾಗಿ ಆನ್ ಲೈನ್ ನಲ್ಲಿನ ಜಾಹೀರಾತಿಗಾಗಿ 53.86 ಕೋಟಿಯನ್ನು ಖರ್ಚು ಮಾಡಿದ್ದಾವೆ. ಇದರಲ್ಲಿ ಗೂಗಲ್ ಮೂಲಕ ಪ್ರಕಟವಾದ 14 ಸಾವಿರದ 837 ಜಾಹೀರಾತಿಗೆ, 27.36 ಕೋಟಿಯನ್ನು ವೆಚ್ಚ ಮಾಡಿದ್ದಾರೆ.
ಇನ್ನೂ ಫೇಸ್ ಬುಕ್ ನಲ್ಲಿ 1.21 ಲಕ್ಷ ಜಾಹೀರಾತು ನೀಡಿರುವ ರಾಜಕೀಯ ಪಕ್ಷಗಳು, ಇದಕ್ಕಾಗಿ 26.5 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಿದ್ದಾವೆ.

ಆನ್ ಲೈನ್ ಜಾಹೀರಾತಿಗೆ ಯಾವ ಪಕ್ಷ ಎಷ್ಟು ಖರ್ಚು..?
ಈ ಬಗ್ಗೆ ನೋಡುವುದಾದರೇ, ಇದರಲ್ಲಿ ಅತೀ ಹೆಚ್ಚು ಖರ್ಚು ಮಾಡಿದ ಸಿಂಹಪಾಲು ಬಿಜೆಪಿಯದ್ದೇ ಆಗಿದೆ. ಬಿಜೆಪಿ 2 ಸಾವಿರದ 500 ಫೇಸ್ ಬುಕ್ ಜಾಹೀರಾತುಗಳನ್ನು ನೀಡಿದ್ದು, ಇದಕ್ಕಾಗಿ 4.23ಕೋಟಿ ಮೊತ್ತವನ್ನು ಫೇಸ್ ಬುಕ್ ಗೆ ಪಾವತಿಸಿದೆ. ಇದರ ಜೊತೆಗೆ ಗೂಗಲ್ ನಲ್ಲಿ ತಮ್ಮ ಪಕ್ಷದ ಪರ ಪ್ರಚಾರ ಮಾಡುವುದಕ್ಕಾಗಿ 17 ಕೋಟಿಯನ್ನು ಗೂಗಲ್ ಪ್ಲಾಟ್ ಫಾರ್ಮ್ ನಲ್ಲಿ ಬಿಜೆಪಿ ವೆಚ್ಚ ಮಾಡಿದೆ.

ಇನ್ನೂ ಕಾಂಗ್ರೆಸ್ ಪಕ್ಷ 3 ಸಾವಿರದ 686 ಫೇಸ್ ಬುಕ್ ಜಾಹೀರಾತುಗಳನ್ನು ನೀಡಿದ್ದು, ಇದಕ್ಕಾಗಿ 1.46 ಕೋಟಿ ವೆಚ್ಚವನ್ನು ಫೇಸ್ ಬುಕ್ ಗೆ ಪಾವತಿಸಿದೆ. ಇದರ ಜೊತೆಗೆ ಗೂಗಲ್ ಪ್ಲಾಟ್ ಫಾರ್ಮ್ ನಲ್ಲಿ ಜಾಹೀರಾತು ನೀಡಲು ಕಾಂಗ್ರೆಸ್ 2.71 ಕೋಟಿಗಳನ್ನು ವೆಚ್ಚ ಮಾಡಿದೆ.

ಎಎಪಿ ಕೂಡ ಇದೇ ಮಾರ್ಗವನ್ನು ಹಿಡಿದಿದ್ದು, ಎಎಪಿ ಪಕ್ಷ ಫೇಸ್ ಬುಕ್ ನಲ್ಲಿ 176 ಜಾಹೀರಾತುಗಳನ್ನು ನೀಡಲು 13.62 ಲಕ್ಷ ರೂಪಾಯಿಗಳನ್ನು ಪಾವತಿಸಿದೆ. ಇದರ ಜೊತೆಗೆ ಗೂಗಲ್ ಪ್ಲಾಟ್ ಫಾರ್ಮ್ ನಲ್ಲಿ ನೀಡಿದ ಜಾಹೀರಾತಿಗಾಗಿ 2.18 ಕೋಟಿ ರೂಪಾಯಿಯನ್ನು ಖರ್ಚು ಮಾಡಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions