ಬಳ್ಳಾರಿ: ರಾಜ್ಯ ರಾಜಕೀಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನಾಯಿ ಮರಿಯ ಕಿತ್ತಾಟ ತಾರಕಕ್ಕೇರಿದೆ. ಸಿದ್ದರಾಮಯ್ಯ ಅವರು ಸಿಎಂ ಬೊಮ್ಮಾಯಿ ಅವರನ್ನು ನಾಯಿ ಮರಿ ಎಂಬುದಾಗಿ ಹೇಳಿದ್ದಕ್ಕೇ, ವಿಪಕ್ಷ ನಾಯಕರ ವಿರುದ್ಧ ಬಿಜೆಪಿ ನಾಯಕರು ಸಿಡೆದ್ದಿದ್ದಾರೆ. ಅಲ್ಲದೇ ಸಿದ್ದರಾಮಯ್ಯನವರು ಇಂತಹ ಕೀಳುಮಟ್ಟದ ಹೇಳಿಕೆ ನೀಡಿದ್ದಕ್ಕೆ ಕ್ಷಮೆ ಯಾಚಿಸಬೇಕು ಎಂಬುದಾಗಿ ಒತ್ತಾಯಿಸಿದ್ದಾರೆ.

ತುಮಕೂರು ಜಿಲ್ಲೆಯ ತುರುವೇಕೆರೆಯಲ್ಲಿ ಇಂದು ಆಯೋಜಿಸಿದ್ದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದಂತ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರೇ ನೀವು ಪ್ರಧಾನಿ ನರೇಂದ್ರ ಮೋದಿಯರ ಮುಂದೆ ನಾಯಿ ಮರಿಗಳ ತರ ಇರುತ್ತೀರಿ. ಗಡಗಡ ಅಂತ ನಡುಗುತ್ತೀರಿ ಎಂಬುದಾಗಿ ಹೇಳಿದ್ದರು.

ಇದಕ್ಕೆ ಬಳ್ಳಾರಿಯಲ್ಲಿ ತಿರುಗೇಟು ನೀಡಿದಂತ ಸಿಎಂ ಬೊಮ್ಮಾಯಿ ಪ್ರಾಣಿಗಳಲ್ಲಿ ಅನೇಕ ಪ್ರಾಣಿಗಳಿದ್ದಾವೆ. ಅವುಗಳು ಒಂದೊಂದು ಒಂದು ಗುಣ ಹೊಂದಿವೆ. ನಾಯಿ ಅತ್ಯಂತ ಪ್ರಾಮಾಣಿಕವಾದಂತ್ತದ್ದು ಆಗಿದೆ. ಮಾಲೀಕನಿಗೆ ನಿಯತ್ತಾಗಿರುತ್ತದೆ. ಸಂಬಂಧಿಕರಿಗೆ ನಿಯತ್ತಾಗಿರುತ್ತದೆ. ಆದ್ರೇ ಕಳ್ಳರು ಬಂದರೆ ಮಾತ್ರ ಮನೆಯ ಒಳಗೆ ಬಿಡೋದಿಲ್ಲ ಎಂದರು.

ಇವತ್ತು ಕರ್ನಾಟಕ ಜನತೆಯ ಸೇವೆ ಮಾಡುತ್ತಿರೋ ನಿಯತ್ತಿನ ನಾಯಿ ನಾನು ಎಂಬುದಾಗಿ ಹೇಳಿಕೊಳ್ಳುವುದಕ್ಕೆ ಇಷ್ಟ ಪಡುತ್ತೇನೆ. ನಾನು ಜನರ ಹಿತ ಕಾಯುವ ನಿಯತ್ತಿನ ನಾಯಿ. ಆದ್ರೇ ಯಾರಾದರೂ ಕಳ್ಳತನ ಮಾಡೋದಕ್ಕೆ ಬಂದರೇ ಒಳಗೆ ಬಿಡದಂತ ನಾಯಿಯಾಗಿದ್ದೇನೆ. ನನಗೆ ಅವಕಾಶ ಅಧಿಕಾರ ಸಿಕ್ಕಿದೆ ಅಂತ ನಾನು ಎಂದು ಕೂಡ ಜನರನ್ನು ತಿನ್ನುವಂತ ತೋಳ ಆಗುವುದಿಲ್ಲ. ತೋಳಗಳಿದ್ದಾವೆ ಕೆಲವು ನಾಯಿ ವೇಶದಲ್ಲಿರುವಂತ ತೋಳಗಳು. ಅದು ಜನರಿಗೆ ಯಾರು ಅಂತ ಗೊತ್ತಿದೆ ಎಂದರು.

BIGG NEWS : ಆಂಧ್ರಪ್ರದೇಶದ ವಿಜಯನಗರಂ ಜಿಲ್ಲೆಯಲ್ಲಿ ಕೊರೊನಾ ಪತ್ತೆ : ಆಸ್ಟ್ರೇಲಿಯಾದಿಂದ ಹಿಂದುರುಗಿದ ಮಹಿಳೆಗೆ ಪಾಸಿಟಿವ್

ರಾಜ್ಯದಲ್ಲೇ ಪ್ರಥಮ: ‘ಪೊಲೀಸ’ರಿಂದಲೇ ನಾಟಕ ಪ್ರದರ್ಶನ, ನಟ ‘ಕಿಚ್ಚ ಸುದೀಪ್’ ಮೆಚ್ಚುಗೆ

BREAKING NEWS : ಕಾಂಗ್ರೆಸ್ ಮಾಜಿ ಅಧ್ಯಕ್ಷೆ ‘ಸೋನಿಯಾ ಗಾಂಧಿ’ ಆರೋಗ್ಯದಲ್ಲಿ ಏರುಪೇರು, ಆಸ್ಪತ್ರೆಗೆ ದಾಖಲು |Sonia Gandhi Hospitalised

Share.
Exit mobile version