ಮಥುರಾ ಕೃಷ್ಣಜನ್ಮಭೂಮಿ ವಿಚಾರದಲ್ಲಿ ಬಿಜೆಪಿಯಾಗಲೀ, ಕೇಂದ್ರ ಸರ್ಕಾರವಾಗಲೀ ಭಾಗಿಯಾಗಿಲ್ಲ : ಅಮಿತ್ ಶಾ – Kannada News Now


India

ಮಥುರಾ ಕೃಷ್ಣಜನ್ಮಭೂಮಿ ವಿಚಾರದಲ್ಲಿ ಬಿಜೆಪಿಯಾಗಲೀ, ಕೇಂದ್ರ ಸರ್ಕಾರವಾಗಲೀ ಭಾಗಿಯಾಗಿಲ್ಲ : ಅಮಿತ್ ಶಾ

ನವದೆಹಲಿ : ಕೃಷ್ಣ ಜನ್ಮಭೂಮಿ ವಿಚಾರದಲ್ಲಿ ಬಿಜೆಪಿ ಪಕ್ಷವಾಗಲೀ, ಕೇಂದ್ರ ಸರ್ಕಾರವಾಗಲೀ ಭಾಗಿಯಾಗಿಲ್ಲ ಎಂದು ಕೇಂದ್ರ ಸಿವ ಅಮಿತ್ ಶಾ ಹೇಳಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿರುವ ಅಮಿತ್ ಶಾ, ಕೃಷ್ಣ ಜನ್ಮಭೂಮಿಯ ಕಾತ್ರ ಕೇಶವ ದೇವ ದೇಗುಲದ 13 ಎಕೆರೆ ಪ್ರದೇಶದ ಒಳಗೆ ಇರುವ ಮಸೀದಿಯನ್ನು ತೆರವು ಮಾಡಬೇಕು ಎಂದು ಸಲ್ಲಿಕೆಯಾದ ಅರ್ಜಿಯಲ್ಲಿ ಕೇಂದ್ರ ಸರ್ಕಾರವಾಗಲಿ, ಬಿಜೆಪಿಯಾಗಲಿ ಭಾಗಿಯಾಗಿಲ್ಲ. ಹಾಗಾಗಿ ಸಲ್ಲಿಕೆಯಾದ ಅರ್ಜಿಯ ಬಗ್ಗೆ ನಾನು ಮಾತನಾಡುವುದು ಸೂಕ್ತ ಎನಿಸುತ್ತಿಲ್ಲ. ರಾಮಜನ್ಮಭೂಮಿ, ರಾಮಮಂದಿರ ನಿರ್ಮಾಣ ಚಳವಳಿ ನಮ್ಮ ಪಕ್ಷದ ಪ್ರಮುಖ ಕಾರ್ಯಸೂಚಿಯಾಗಿತ್ತು. ಆದರೆ ಮಥುರಾ ಅರ್ಜಿ ನಾವು ಹಾಕಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಮಥುರಾದಲ್ಲಿ 17 ನೇ ಶತಮಾನದಲ್ಲಿ ಔರಂಗಜೇಬನ ಆಡಳಿತದಲ್ಲಿ ಕೃಷ್ಣ ದೇವಾಲಯದ ಒಂದು ಭಾಗವನ್ನು ಒಡೆದು ಈ ಶಾಹಿ ಈದ್ಗಾ ಮಸೀದಿಯನ್ನು ಕಟ್ಟಲಾಗಿದೆ. ಹೀಗಾಗಿ ಮಸೀದಿಯನ್ನು ತೆರವುಗೊಳಿಸಬೇಕು ಎಂದು ಮನವಿ ಮಾಡಿ ಸೆ. 26 ರಂದು ಹಲವು ಸಂಘಟನೆಗಳು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿವೆ.
error: Content is protected !!