ಸುಭಾಷಿತ :

Wednesday, April 1 , 2020 1:39 AM

75 ವರ್ಷ ದಾಟಿದ ನಾಯಕರಿಗೂ ಟಿಕೆಟ್ ಬಿಜೆಪಿ ನಿರ್ಧಾರ ?


Saturday, March 9th, 2019 10:40 am

ನವದೆಹಲಿ : ಲೋಕಸಭೆ ಚುನಾವಣೆಯಲ್ಲಿ 75 ವರ್ಷ ದಾಟಿದ ನಾಯಕರಿಗೆ ಟಿಕೆಟ್‌ ನೀಡಬಾರದೆಂಬ ಪ್ರಸ್ತಾವಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ವಿರೋಧ ವ್ಯಕ್ತಪಡಿಸಿದ್ದಾರೆ.

ಈ ನಿಯಮವನ್ನು ಅನ್ವಯಗೊಳಿಸಿದರೆ ಎಲ್‌.ಕೆ. ಆಡ್ವಾಣಿ, ಮುರಳಿ ಮನೋಹರ ಜೋಶಿ ಜೋಷಿ ಮತ್ತು ಕಲ್ರಾಜ್‌ ಮಿಶ್ರಾ, ಸುಮಿತ್ರಾ ಮಹಾಜನ್‌, ಹುಕುಂ ದೇವ್‌ ನಾರಾಯಣ್‌ ಸಿಂಗ್‌ ಯಾದವ್‌, ಬಿ.ಎಸ್‌.ಯಡಿಯೂರಪ್ಪ ಮುಂತಾದ ಹಿರಿಯ ಮುಖಂಡರಿಗೆ ಟಿಕೆಟ್‌ ನಿರಾಕರಿಸಬೇಕಾಗುತ್ತದೆ. ಆದರೆ ಇಂತಹ ಪ್ರಮುಖ ನಾಯಕರನ್ನು ಕೈಬಿಡುವ ಸ್ಥಿತಿಯಲ್ಲಿ ಪಕ್ಷ ಇಲ್ಲ ಎಂದು ಅಮಿತ್‌ ಶಾ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

2014ರ ಚುನಾವಣೆಯಲ್ಲಿ ಗೆಲುವಿನ ಬಳಿಕ 75 ವರ್ಷ ದಾಟಿದ ನಾಯಕರಿಗೆ ಸಂಪುಟದಲ್ಲಿ ಸ್ಥಾನ ನೀಡದಿರುವ ನಿರ್ಧಾರವನ್ನು ಮೋದಿ ತಳೆದಿದ್ದರು.

ಇದೀಗ ಬಿಜೆಪಿಯ ಸಂಸದೀಯ ಮಂಡಳಿ ಕಾರ್ಯತಂತ್ರದ ಬಗ್ಗೆ ಚರ್ಚೆ ನಡೆಯಿತು. ಪ್ರಧಾನಿ ನರೇಂದ್ರ ಮೋದಿ, ಪಕ್ಷದ ಅಧ್ಯಕ್ಷ ಅಮಿತ್‌ ಶಾ, ಸಚಿವರಾದ ಅರುಣ್‌ ಜೇಟ್ಲಿ, ಸುಷ್ಮಾ ಸ್ವರಾಜ್‌ ಹಾಗೂ ಇತರೆ ಹಿರಿಯ ಮುಖಂಡರು ಪಾಲ್ಗೊಂಡಿದ್ದರು.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions