ಶಿವಮೊಗ್ಗ : ನಗರದ ಸಿಡ್ಲಿಪುರ ವರದಿಯಾದ ಅಸಾಮಾನ್ಯ ಪ್ರಕರಣದಲ್ಲಿ, ರೈತನೊಬ್ಬ ತನ್ನ ನಾಲ್ಕು ಹಸುಗಳು ಹಾಲು ಕೊಡುತ್ತಿಲ್ಲ ಎಂದು ಆರೋಪಿಸಿ ಪೊಲೀಸರ ಬಳಿ ದೂರು ನೀಡಿದ್ದಾನೆ.
ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಸಿಡ್ಲಿಪುರ ಗ್ರಾಮದವರಾದ ರಾಮಯ್ಯ ಎಂಬ ರೈತ, ತನ್ನ ಹಸುಗಳ ವಿರುದ್ಧ ದೂರು ದಾಖಲಿಸುವಂತೆ ಹೊಳೆಹೊನ್ನೂರು ಪೊಲೀಸ್ ಠಾಣೆಯ ಪೊಲೀಸರಿಗೆ ತಿಳಿಸಿದ್ದಾನೆ. ಮೇವು ಒದಗಿಸಿದ್ದರೂ ಹಸುಗಳು ಹಾಲು ನೀಡುತ್ತಿಲ್ಲ ಎಂದು ಆರೋಪಿಸಿದರು.
ಪ್ರತಿದಿನ ಬೆಳಿಗ್ಗೆ 8:00 ರಿಂದ 11:00 ರವರೆಗೆ ಮತ್ತು ಸಂಜೆ 4:00 ರಿಂದ ಸಂಜೆ 6:00 ರವರೆಗೆ ಹಸುಗಳನ್ನು ಮೇಯಲು ಕರೆದೊಯ್ಯುತ್ತೇನೆ ಎಂದು ರೈತ ತನ್ನ ದೂರಿನಲ್ಲಿ ತಿಳಿಸಿದ್ದಾನೆ.
“ಆದರೆ ಹಸುಗಳು ಕಳೆದ ನಾಲ್ಕು ದಿನಗಳಿಂದ ಹಾಲು ಕೊಡುತ್ತಿಲ್ಲ. ಆದ್ದರಿಂದ, ಹಾಲು ನೀಡುವಂತೆ ಪೊಲೀಸರು ಅವುಗಳನ್ನ ಮನವೊಲಿಸಬೇಕು” ಎಂದವ್ರು ಸುದ್ದಿ ಮಾಧ್ಯಮ ಒಂದಕ್ಕೆ ತಿಳಿಸಿದರು.
ಇನ್ನು ದೂರಿನ ಕುರಿತಂತೆ ಪ್ರತಿಕ್ರಿಯಿಸಿದ ಪೊಲೀಸರು, “ಅಂತಹ ವಿಲಕ್ಷಣ ದೂರನ್ನ ನೋಂದಾಯಿಸಲು ಸಾಧ್ಯವಿಲ್ಲ. ನಾವು ಈ ಬಗ್ಗೆ ರೈತನಿಗೆ ಮನವರಿಕೆ ಮಾಡಿದ್ದೇವೆ” ಎಂದು ಅವ್ರು ಹೇಳಿದರು.
ಎಲ್ಲ ಮಾದರಿಯ ಕ್ರಿಕೆಟ್ʼಗೆ ಹರ್ಭಜನ್ ಸಿಂಗ್ ಗುಡ್ ಬೈ? : ಈ ʼIPL ತಂಡʼದ ಕೋಚ್ ಆಗಲಿದ್ದಾರಂತೆ ಭಜ್ಜಿ : ವರದಿ
BIG BREAKING NEWS: ರಾಜ್ಯ ಸರ್ಕಾರದಿಂದ ‘ವಿಮಾನ ನಿಲ್ದಾಣ’ಗಳಲ್ಲಿ ‘ಕೋವಿಡ್ ಪರೀಕ್ಷೆ’ ದರ ಪ್ರಕಟ: ಹೀಗಿದೆ ದರ ಪಟ್ಟಿ