ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ʼಬಿಲ್ ಗೇಟ್ಸ್ʼ ತಂದೆ ವಿಧಿವಶ..! – Kannada News Now


World

ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ʼಬಿಲ್ ಗೇಟ್ಸ್ʼ ತಂದೆ ವಿಧಿವಶ..!

ವಾಷಿಂಗ್ಟನ್: ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಅವರ ತಂದೆ ಬಿಲ್ ಗೇಟ್ಸ್ ಸೀನಿಯರ್ (94) ಸಿಯಾಟಲ್ ಪ್ರದೇಶದ ಹುಡ್ ಕೆನಾಲ್ ನಲ್ಲಿರುವ ತಮ್ಮ ಬೀಚ್ ಹೌಸ್ ನಲ್ಲಿ ನಿಧನರಾಗಿದ್ದಾರೆ.

ವಿಲಿಯಂ ಹೆನ್ರಿ ಗೇಟ್ಸ್ II ವಿಶ್ವದ ಅತಿದೊಡ್ಡ ಫಿಲಾಂಥ್ರೆಪಿಬಿಲ್ ಮೆಲಿಂಡಾ ಗೇಟ್ಸ್ ಫೌಂಡೇಶನ್ ಅನ್ನು ಸ್ಥಾಪಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು. ಇನ್ನು ಈ ವಿಷಯವನ್ನ ಸ್ವತಃ ಬಿಲ್‌ ಗೇಟ್‌ ದೃಢಪಡಿಸಿದ್ದು, “ನನ್ನ ತಂದೆ ‘ನಿಜವಾದ’ ಬಿಲ್ ಗೇಟ್ಸ್. ನಾನು ಏನಾಗಲು ಪ್ರಯತ್ನಿಸುತ್ತಿದ್ದೆನೋ ಎಲ್ಲವೂ ಅವರಾಗಲೇ ಆಗಿದ್ದಾರೆ. ಮತ್ತು ನಾನು ಅವರನ್ನು ಪ್ರತಿದಿನ ಕಾಣುವುದರಿಂದ ವಂಚಿತನಾಗಿದ್ದೇನೆ” ಟ್ವೀಟ್ ಮಾಡಿದ್ದಾರೆ.