ಸುಭಾಷಿತ :

Tuesday, February 18 , 2020 1:52 PM

‘ಬಿಗ್ ಬಾಸ್’ ಮನೆಯಿಂದ ಹೊರಬಂದು ಚಂದನಾ ಜೊತೆಗಿನ ‘LOVE’ ಗುಟ್ಟು ಬಿಚ್ಚಿಟ್ಟ ಕಿಶನ್…!


Sunday, January 19th, 2020 8:40 pm

ಸಿನಿಮಾ ಡೆಸ್ಕ್ಕಿಶನ್ ಬಿಳಗಲಿ ಬಿಗ್ ಬಾಸ್ ಮನೆಯಿಂದ ಈಗಾಗಲೇ ಹೊರ ಬಿದ್ದಿದ್ದಾರೆಕಿಶನ್ ಫಿನಾಲೆಗೆ ಹೋಗುತ್ತಾರೆ ಎಂದು ಹಲವರು ಅಂದುಕೊಂಡಿದ್ದರು, ಆದರೆ ವೀಕ್ಷಕರ ಲೆಕ್ಕಾಚಾರ ಉಲ್ಟಾ ಆಗಿದೆ. ಬಿಗ್ ಬಾಸ್ ಮನೆಯಿಂದ ಕಿಶನ್ ಹೊರಬಿದ್ದಿದ್ದಾರೆ.

ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ ವೇಳೆ ಕಿಶನ್ ಚಂದನಾ ಜೊತೆಗಿನ ಪ್ರೀತಿಯ ಬಗ್ಗೆ ಮಾತನಾಡಿದ್ದಾರೆ. ಚಂದನಾರದ್ದು ಒಂಥರ ಮೃದು ಸ್ವಭಾವದ ವ್ಯಕ್ತಿತ್ವ, ನನಗೆ ಬಿಗ್ ಬಾಸ್ ಮನೆಯಲ್ಲಿ ಹೆಚ್ಚು, ಸಹಾಯ ಮಾಡ್ತಿದ್ದರು. ತದನಂತರದಲ್ಲಿ ನನ್ನ ಭಾವನೆ ಚೇಂಜ್ ಆಗಿದ್ದು ನಿಜ. ಅವರಿಗೆ ಇಷ್ಟ ಇಲ್ಲ ಅಂತ ಗೊತ್ತಾದಾಗ ನಾನು ಒಂದು ಹೆಜ್ಜೆ ಹಿಂದೆ ಇಟ್ಟೆ. ಅವರ ಮೇಲಿದ್ದ ಭಾವನೆ ಯಾವುದೂ ಸ್ಟ್ರಾಟಜಿ ಅಲ್ಲ, ಗೇಮ್ ಅಲ್ಲ, ಅದೊಂದು ನಿಜವಾದ ಭಾವನೆ ಎಂದು ಕಿಶನ್ ಹೇಳಿದ್ದಾರೆ.

ದೀಪಿಕಾ ಬಗ್ಗೆ ಕಿಶನ್ ಹೇಳಿದ್ದೇನು….?

ನನ್ನದು ಮತ್ತು ದೀಪಿಕಾದು ಒಳ್ಳೆಯ ಗೆಳೆತನ. ಅವರನ್ನು ಕಂಡರೆ ಬಹಳ ಇಷ್ಟ,,ಅವರು ಹಾಗೂ ನನ್ನದ್ದು ಬೆಸ್ಟ್ ಫ್ರೆಂಡ್ ಶಿಫ್… ಮನೆಯ ಒಳಗೂ ಮತ್ತು ಹೊರಗೂ ಅವರು ನನಗೆ ಒಳ್ಳೆಯ ಸ್ನೇಹಿತರಾಗಿರುತ್ತಾರೆ. ನಾನು ಮನೆಯಿಂದ ಹೊರಬಂದಾಗ ಅವರ ಕಣ್ಣಲ್ಲಿ ನೀರು ಚಿಮ್ಮಿತ್ತು ಎಂದು ಕಿಶನ್ ಭಾವುಕರಾಗಿ ಮಾತನಾಡಿದ್ದಾರೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Beauty Tips
books Corner
Current Affairs
Astrology
Cricket Score
Poll Questions