ಸುಭಾಷಿತ :

Monday, February 24 , 2020 2:59 AM

‘ಬಿಗ್ ಬಾಸ್’ ಹಿಸ್ಟರಿಯಲ್ಲೇ ಇದೇ ಮೊದಲು : ಒಂದೇ ದಿನ ಮನೆಯಿಂದ ಹೊರಗೆ ಬಂದ ಸ್ಪರ್ಧಿಗಳು….!


Saturday, January 11th, 2020 9:32 pm

ಸಿನಿಮಾ ಡೆಸ್ಕ್ : ಹಿಂದಿಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಕೂಡ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಸಫಲವಾಗಿದೆ. ಇನ್ನೂ, ಬಿಗ್ ಬಾಸ್ ಮನೆಗೆ ಒಮ್ಮೆ ಎಂಟ್ರಿ ಕೊಟ್ಟರೇ ಸಾಕು ಎಲಿಮಿನೇಷನ್ ಆಗುವ ತನಕ ಯಾರೂ ಕೂಡ ಮನೆಯಿಂದ ಆಚೆ ಹೋಗೋ ಹಾಗಿಲ್ಲ, ಇದು ಬಿಗ್ ಬಾಸ್ ರೂಲ್ಸ್.

ಆದರೆ ಸಲ್ಮಾನ್ ಖಾನ್ ನಿರೂಪಣೆಯಲ್ಲಿ ಹಿಂದಿಯಲ್ಲಿ ಮೂಡಿ ಬರುತ್ತಿರುವ ಬಿಗ್ ಬಾಸ್ ಶೋ ನಲ್ಲಿ ಎಲ್ಲಾ ಸ್ಪರ್ಧಿಗಳು ಕೂಡ ಒಂದೇ ದಿನ ಮನೆಯಿಂದ ಹೊರ ಹೋಗಿದ್ದಾರೆ. ಯೆಸ್, ಮುಂದಿನ ಎಪಿಸೋಡ್ ಗೆ ಸಂಬಂಧಿಸಿದ ಈ ವಿಡಿಯೋ ಕ್ಲಿಪ್ಪಿಂಗ್ ಒಂದು ಹರಿದಾಡುತ್ತಿದ್ದು, ಸಿಕ್ಕಾಪಟ್ಟೆ ಕ್ಯುರಿಯಾಸಿಟಿ ಮೂಡಿಸಿದೆ.

, ಈ ವಾರದ ಎಪಿಸೋಡ್ ನಲ್ಲಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಕಾಣಿಸಿಕೊಳ್ಳಲಿದ್ದು, ದೀಪಿಕಾ ಪಡುಕೋಣೆ ಬಿಗ್ ಬಾಸ್ ಮನೆ ಪ್ರವೇಶಿಸಿ ಸ್ಪರ್ಧಿಗಳ ಜೊತೆ ಕಾಲ ಕಳೆಯಲಿದ್ದಾರೆ, ಅಲ್ಲದೇ ಟಾಸ್ಕ್ ನಲ್ಲಿ ಗೆದ್ದ ತಂಡವನ್ನು ಜಾಲಿರೈಡ್ ಗಾಗಿ ಹೊರಗೆ ಕರೆದುಕೊಂಡು ಕೂಡ ಹೋಗಲಿದ್ದಾರಂತೆ, ದೀಪಿಕಾ ಜೊತೆಗೆ ಛಪಾಕ್ ಸಿನಿಮಾದ ನಟ ವಿಕ್ರಾಂತ್ ಮಸ್ಸೆ ಕೂಡ ಸಾಥ್ ನೀಡಲಿದ್ದಾರೆ. ಈಗಾಗಲೇ ಬಿಗ್ ಬಾಸ್ ಸ್ಪರ್ಧಿಗಳು ದೀಪಿಕಾ ಜೊತೆ ರೈಡ್ ಹೋಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ವಾರದ ಎಪಿಸೋಡ್ ನಲ್ಲಿ ಇದು ಅಧಿಕೃತವಾಗಿ ಪ್ರಸಾರವಾಗಲಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Beauty Tips
books Corner
Current Affairs
Astrology
Cricket Score
Poll Questions