ಮಂಡ್ಯ: ಇಂದು ಮೇಲುಕೋಟೆಯಲ್ಲಿ ವಿಶ್ವ ವಿಖ್ಯಾತ ವೈರಮುಡಿ ಉತ್ಸವ ಹಿನ್ನಲೆಯಲ್ಲಿ ಜಿಲ್ಲಾಡಳಿತದ ಖಜಾನೆಯಿಂದ ರತ್ನಖಚಿತ ವೈರಮುಡಿ ಮೇಲುಕೋಟೆಗೆ ರವಾನೆ ಮಾಡಲಾಗಿದೆ.
ಚೆಲುವನಾರಾಯಣಸ್ವಾಮಿ ದೇಗುಲದ ಮೊದಲ ಸ್ಥಾನಿಕರ ನೇತೃತ್ವದಲ್ಲಿ ಆಭರಣಗಳನ್ನು ಮೇಲುಕೋಟೆಗೆ ಡಿಸಿ ಗೋಪಾಲಕೃಷ್ಣ, ಎಸ್ಪಿ ಎನ್.ಯತೀಶ್, ಎಡಿಸಿ ನಾಗರಾಜು ನೇತೃತ್ವದಲ್ಲಿ ವಜ್ರಖಚಿತ ಕಿರೀಟ ಆಭರಣಗಳನ್ನು ವಿಶೇಷ ಪೂಜೆ ಸಲ್ಲಿಸಿ ಮಂಡ್ಯ ಖಜಾನೆಯಿಂದ ಬಿಗಿ ಭದ್ರತೆಯೊಂದಿಗೆ ಮೇಲುಕೋಟೆಗೆ ಕಿರೀಟ ಮತ್ತು ಒಡವೆಗಳ ರವಾನೆ ಮಾಡಲಾಗಿದೆ.
ಮಂಡ್ಯ, ಶ್ರೀರಂಗಪಟ್ಟಣ, ಪಾಂಡವಪುರ, ಮೇಲುಕೋಟೆ ರಸ್ತೆಯ ಮೂಲಕ ಸಂಚಾರ ಮಾಡಲಿದ್ದು, ಊರೂರು ಸುತ್ತಿಕೊಂಡು ಭಕ್ತರಿಗೆ ದರ್ಶನ ನೀಡಲಿರುವ ಚೆಲುವನಾರಯಣನ ವೈರಮುಡಿ ಕಿರೀಟ. ಸಂಜೆ 6 ಗಂಟೆ ವೇಳೆಗೆ ಚೆಲುವನಾರಾಯಣಸ್ವಾಮಿ ಕಿರೀಟ ದೇಗುಲ ತಲುಪಲಿದೆ. ದೇವಸ್ಥಾನದಲ್ಲಿ ಸಂಪ್ರದಾಯದಂತೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.
BIGG NEWS : ಸಾರ್ವಜನಿಕರಿಗೆ ಬಿಗ್ ಶಾಕ್ : ಇಂದಿನಿಂದ ಈ ಔಷಧಿಗಳ ಬೆಲೆಯಲ್ಲಿ ಏರಿಕೆ| medicines Prices