ನವದೆಹಲಿ : ಕೋವಿಡ್-19 ವಿರುದ್ಧ ಇದುವರೆಗೆ ಹತ್ತು ಕೋಟಿ ಜನರು ಮುನ್ನೆಚ್ಚರಿಕೆ ಡೋಸ್ ತೆಗೆದುಕೊಂಡಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಶುಕ್ರವಾರ ತಿಳಿಸಿದ್ದಾರೆ.

ಸಾರ್ವಜನಿಕ ಲಸಿಕಾ ಕೇಂದ್ರಗಳಲ್ಲಿ 18 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಎಲ್ಲರಿಗೂ ಮುನ್ನೆಚ್ಚರಿಕೆಯ ಡೋಸ್‌ಗಳನ್ನು ಉಚಿತವಾಗಿ ನೀಡಲು ಸರ್ಕಾರ ಜುಲೈ 15 ರಂದು 75 ದಿನಗಳ ವಿಶೇಷ ಅಭಿಯಾನವನ್ನು ಪ್ರಾರಂಭಿಸಿತ್ತು.

“10 ಕೋಟಿ ಜನರು ಈಗ ಸುರಕ್ಷತೆಯ ಹೆಚ್ಚುವರಿ ಪದರವನ್ನ ಹೊಂದಿದ್ದಾರೆ” ಪ್ರಧಾನಿ ನರೇಂದ್ರ ಮೋದಿಜಿ ಅವ್ರ ನಾಯಕತ್ವದಲ್ಲಿ, ಎಲ್ಲಾ ವಯಸ್ಕರಿಗೆ ಉಚಿತ ಮುನ್ನೆಚ್ಚರಿಕೆ ಡೋಸ್ ಒದಗಿಸಲು ‘ಕೋವಿಡ್ ವ್ಯಾಕ್ಸಿನೇಷನ್ #AmritMahotsav’ ಭರದಿಂದ ಸಾಗುತ್ತಿದೆ” ಎಂದು ಮಾಂಡವಿಯಾ ಟ್ವೀಟ್ ಮಾಡಿದ್ದಾರೆ.

ಜುಲೈ 26ರಂದು, ಆರೋಗ್ಯ ಸಚಿವಾಲಯವು ಕೇವಲ 7,30,96,284 ಜನರಿಗೆ ಮಾತ್ರ, ಅಂದರೆ 18 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಸುಮಾರು 69 ಕೋಟಿ ಅರ್ಹ ವ್ಯಕ್ತಿಗಳಲ್ಲಿ ಶೇಕಡಾ 11ರಷ್ಟು ಜನರಿಗೆ ಮಾತ್ರ ಮುನ್ನೆಚ್ಚರಿಕೆ ಡೋಸ್ ನೀಡಲಾಗಿದೆ ಎಂದು ಹೇಳಿತ್ತು.

ಇನ್ನು ನಿಧಾನಗತಿಯ ಏರಿಕೆಗೆ ಸಂತೃಪ್ತಿ ಮತ್ತು ಜನರಲ್ಲಿ ಭಯ ಕಡಿಮೆಯಾಗಲು ಕಾರಣ ಎಂದು ಅಧಿಕಾರಿಗಳು ಹೇಳಿದ್ದರು.

ಜುಲೈ 14 ರವರೆಗೆ 64,89,99,721 ಅರ್ಹ ಜನರಲ್ಲಿ ಮುನ್ನೆಚ್ಚರಿಕೆ ಡೋಸ್ ಕವರೇಜ್ ಕೇವಲ ಶೇಕಡಾ 8 ರಷ್ಟಿತ್ತು.

ಭಾರತದ ಸ್ವಾತಂತ್ರ್ಯದ 75ನೇ ವಾರ್ಷಿಕೋತ್ಸವವನ್ನ ಆಚರಿಸಲು ಸರ್ಕಾರದ ‘ಆಜಾದಿ ಕಾ ಅಮೃತ ಮಹೋತ್ಸವ’ದ ಭಾಗವಾಗಿ 75 ದಿನಗಳ ವಿಶೇಷ ಅಭಿಯಾನ ‘ಕೋವಿಡ್ ಲಸಿಕೆ ಅಮೃತ ಮಹೋತ್ಸವ’ಕ್ಕೆ ಚಾಲನೆ ನೀಡಲಾಯಿತು.

Share.
Exit mobile version