ಮೈಸೂರು : ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಬೇಕು ಎಂಬ ಸಚಿವ ಉಮೇಶ್ ಕತ್ತಿ ಹೇಳಿಕೆಗೆ ಮಾಜಿ ಸಚಿವ ಹೆಚ್.ಸಿ. ಮಹದೇವಪ್ಪ ಕಿಡಿಕಾರಿದ್ದು, ಅವನೊಬ್ಬ ಬುದ್ಧಿ ಇಲ್ಲದ ಅವಿವೇಕಿ. ಮಾಡೋದಕ್ಕೆ ಕೆಲಸ ಇಲ್ಲದೇ ಏನೇನೋ ಕೆರೆದುಕೊಳ್ಳುತ್ತಿದ್ದಾನೆ ಎಂದು ಆಕ್ರೋಶ ಹೊರಹಾಕಿದ್ದಾರೆ.
12 ಗಂಟೆಗಳ ಕಾಲ ಸತತ ಪ್ರಯತ್ನ: ವಿಷನ್ಸರ್ ಸರೋವರದ ಬಳಿ ಸಿಲುಕಿದ್ದ 17 ಚಾರಣಿಗರನ್ನು ರಕ್ಷಿಸಿದ ಭಾರತೀಯ ಸೇನೆ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಒಳ್ಳೆಯ ಸ್ನೇಹಿತ. ಆದರೆ ಅವನೊಬ್ಬ ಬುದ್ಧಿ ಇಲ್ಲದ ಅವಿವೇಕಿ. ಲಕ್ಷಾಂತರ ಜನರ ಹೋರಾಟದ ಫಲವಾಗಿ ಅಖಂಡ ಕರ್ನಾಟಕ ಸೃಷ್ಠಿಯಾಗಿದೆ. ಇದನ್ನು ಪದೇ ಪದೇ ಒಡೆಯುವ ಮಾತನಾಡಬೇಡಿ. ಚುನಾವಣೆ ಹತ್ತಿರ ಬಂದಾಗಲೆಲ್ಲಾ ಇಂತಹ ಬೇಜವಾಬ್ದಾರಿ ಕೂಗು ಶುರು ಮಾಡುತ್ತಾರೆ ಎಂದು ಕಿಡಿಕಾರಿದ್ದಾರೆ.
ಉಮೇಶ್ ಕತ್ತಿ ಮುಖ್ಯಮಂತ್ರಿ ಆಗುವ ಆಸೆ ಇದ್ರೆ ಇಲ್ಲೇ ಆಗಲಿ. ಅದಕ್ಯಾಕೆ ಪ್ರತ್ಯೇಕ ರಾಜ್ಯ ಬೇಕು ನಿನಗೆ. ಉತ್ತರ ಕರ್ನಾಟಕ ಅಭಿವೃದ್ಧಿ ಆಗಲಿಲ್ಲ ಅಂದ್ರೆ ಅದಕ್ಕೆ ಹೊಣೆ ಯಾರಪ್ಪ ಹೊಣೆ? ಅರಣ್ಯ ಇಲಾಖೆಯಂತ ಬಹುಮುಖ್ಯ ಖಾತೆ ಇದ್ದರೂ ಕೆಲಸ ಇಲ್ಲದಂತೆ ಇದ್ದಾನೆ ಎಂದರು.