ದುಬೈ : ಯುನೈಟೆಡ್ ಅರಬ್ ಎಮಿರೇಟ್ಸ್ (UAE) ಉಪಾಧ್ಯಕ್ಷ ಮತ್ತು ಪ್ರಧಾನಿ ಮತ್ತು ದುಬೈ ಆಡಳಿತಗಾರ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಭಾನುವಾರ ಅಲ್ ಮಿನ್ಹಾದ್ ಜಿಲ್ಲೆ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳ ಹೆಸರನ್ನ ‘ಹಿಂದ್ ಸಿಟಿ’ ಎಂದು ಬದಲಾಯಿಸಿದ್ದಾರೆ. ಎಮಿರೇಟ್ಸ್’ನ ಅಧಿಕೃತ ಸುದ್ದಿ ಸಂಸ್ಥೆ ಡಬ್ಲ್ಯುಎಎಂ ಈ ಮಾಹಿತಿಯನ್ನ ನೀಡಿದೆ.
ನಗರವನ್ನ ನಾಲ್ಕು ಪ್ರದೇಶಗಳಾಗಿ ವಿಂಗಡಿಸಲಾಗಿದ್ದು, ಯುಎಇ ನಿವಾಸಿಗಳಿಗೆ ನೆಲೆಯಾಗಿದೆ. ನಗರವು ಹಿಂದ್ 1, ಹಿಂದ್ 2, ಹಿಂದ್ 3 ಮತ್ತು ಹಿಂದ್ 4 ಎಂಬ ನಾಲ್ಕು ವಲಯಗಳನ್ನ ಒಳಗೊಂಡಿದೆ ಮತ್ತು ಇದು 83.9 ಕಿ.ಮೀ ಪ್ರದೇಶದಲ್ಲಿ ವ್ಯಾಪಿಸಿದೆ.
ದುಬೈ ಆಡಳಿತಗಾರರ ಸೂಚನೆಯಂತೆ ಅಲ್ ಮಿನ್ಹಾದ್ ಪ್ರದೇಶ ಮತ್ತು ಅದರ ನೆರೆಹೊರೆಯ ಪ್ರದೇಶಗಳನ್ನ ‘ಹಿಂದ್ ಸಿಟಿ’ ಎಂದು ಮರುನಾಮಕರಣ ಮಾಡಲಾಗಿದೆ. ಆದಾಗ್ಯೂ, ದುಬೈನಲ್ಲಿ ಸ್ಥಳವನ್ನು ಮರುನಾಮಕರಣ ಮಾಡುವುದು ಇದೇ ಮೊದಲಲ್ಲ. ಇದಕ್ಕೂ ಮೊದಲು 2010ರಲ್ಲಿ, ಯುನೈಟೆಡ್ ಅರಬ್ ಎಮಿರೇಟ್ಸ್ನ ಅಂದಿನ ಅಧ್ಯಕ್ಷ ಮತ್ತು ಅಬುಧಾಬಿಯ ಆಡಳಿತಗಾರ ಶೇಖ್ ಖಲೀಫಾ ಬಿನ್ ಜಾಯೆದ್ ಅಲ್ ನಹ್ಯಾನ್ ಅವರ ಹೆಸರಿನಲ್ಲಿ ಬುರ್ಜ್ ದುಬೈನ್ನ ಬುರ್ಜ್ ಖಲೀಫಾ ಎಂದು ಮರುನಾಮಕರಣ ಮಾಡಲಾಯಿತು. ಅವರು ಮೇ 13, 2022 ರಂದು ನಿಧನರಾದರು.
ಅಲ್ ಮಿನ್ಹಾದ್ ಜಿಲ್ಲೆಯನ್ನ ‘ಹಿಂದ್ ಸಿಟಿ’ ಎಂದು ಮರುನಾಮಕರಣ ಮಾಡಿದ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಅವರು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನ ಉಪಾಧ್ಯಕ್ಷ, ಪ್ರಧಾನಿ ಮತ್ತು ರಕ್ಷಣಾ ಸಚಿವ ಮತ್ತು ದುಬೈ ಆಡಳಿತಗಾರರಾಗಿದ್ದಾರೆ. ಅವರು ಯುನೈಟೆಡ್ ಅರಬ್ ಎಮಿರೇಟ್ಸ್ನ ಮಾಜಿ ಉಪಾಧ್ಯಕ್ಷ ಮತ್ತು ದುಬೈ ಆಡಳಿತಗಾರ ಶೇಖ್ ರಶೀದ್ ಬಿನ್ ಸಯೀದ್ ಅಲ್ ಮಕ್ತೌಮ್ ಅವರ ಮೂರನೇ ಮಗ.
ಫೆ.6ರಂದು ಬೆಂಗಳೂರಿಗೆ ಪ್ರಧಾನಿ ಮೋದಿ ಆಗಮನ – ಸಿಎಂ ಬಸವರಾಜ ಬೊಮ್ಮಾಯಿ
BIGG NEWS : ನನ್ನ ಬಳಿ ಡಿ.ಕೆ ಶಿವಕುಮಾರ್ ಸಿ.ಡಿ ಇದೆ : ಲಖನ್ ಜಾರಕಿಹೊಳಿ ಹೊಸ ಬಾಂಬ್