ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರದಲ್ಲಿ ಘೋರ ದುರಂತವೊಂದು ಸಂಭವಿಸಿದ್ದು, ಫೋಟೋ ಶೂಟ್ ಮಾಡುವಾಗ ಜಲಾಶಯದಲ್ಲಿ ಮುಳುಗಿ ಮೂವರು ವಿದ್ಯಾರ್ಥಿಗಳು ಸಾವನ್ನಪ್ಪಿರುವ ಘಟನೆ ನಡೆದಿದೆ.
ಚಿಕ್ಕಬಳ್ಳಾಪುರ ತಾಲೂಕಿನ ಶ್ರೀನಿವಾಸ ಸಾಗರ ಜಲಾಶಯದಲ್ಲಿ ಫೋಟೋ ಶೂಟ್ ಗೆ ತೆರಳಿದ್ದ ಮೂವರು ವಿದ್ಯಾರ್ಥಿಗಳು ನೀರಿಗೆ ಬಿದ್ದು ಸಾವನ್ನಪ್ಪಿದ್ದಾರೆ. ರಾಧಿಕಾ(21), ಇಮ್ರಾನ್(21), ಪೂಜಾ(21) ಮೃತಪಟ್ಟಿದ್ದಾರೆ.ಮೂವರು ಬೆಂಗಳೂರಿನ ಸಾರಾಯಿಪಾಳ್ಯದ ನಿವಾಸಿಗಳಾಗಿದ್ದು ಬಿ ಫಾರ್ಮ ವಿದ್ಯಾರ್ಥಿಗಳು ಎಂದು ಗುರುತಿಸಲಾಗಿದೆ.
ಬೆಂಗಳೂರಿನಿಂದ ಶ್ರೀನಿವಾಸ ಸಾಗರ ಜಲಾಶಯಕ್ಕೆ ರಾಧಿಕಾ, ಇಮ್ರಾನ್, ಪೂಜಾ ಸೇರಿ ಒಟ್ಟು ಆರು ಬಂದಿದ್ದಾರೆ. ಕ್ಯಾಮೆರಾದಲ್ಲಿ ಶೂಟ್ ಶೂಟ್ ಮಾಡುತ್ತಿದ್ದ ವೇಳೆ ಒಬ್ಬರ ಹಿಂದರಂತೆ ಒಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
BIG NEWS : UPI ವ್ಯವಹಾರದಲ್ಲಿ ದಾಖಲೆ ಏರಿಕೆ; ಮಾರ್ಚ್ನಲ್ಲಿ 14 ಲಕ್ಷ ಕೋಟಿ ರೂ. ವಹಿವಾಟು | UPI transactions