ಬೆಂಗಳೂರು : ಜನವರಿ 26 ರ ಇಂದು ಗಣರಾಜ್ಯೋತ್ಸವ ದಿನಾಚರಣೆ ಹಿನ್ನೆಲೆಯಲ್ಲಿ ಜಿಲ್ಲಾ ಕೇಂದ್ರಗಳಲ್ಲಿ ನಡೆಯುವ ಗಣರಾಜ್ಯೋತ್ಸವದ ದಿನದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ಮಾಡುವ ಸಚಿವರು ಮತ್ತು ಜಿಲ್ಲಾಧಿಕಾರಿಗಳ ಪಟ್ಟಿಯನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ.
ಭಾರತೀಯ ಗಣರಾಜ್ಯೋತ್ಸವ ಪ್ರತಿ ವರ್ಷದ ಜನವರಿ 26 ರಂದು ಆಚರಿಸಲಾಗುವ ದಿನಾಚರಣೆ. ಭಾರತೀಯ ಸoವಿಧಾನ ಜಾರಿಗೆ ಬಂದು ಭಾರತವು ಗಣರಾಜ್ಯವಾದದ್ದು ಜನವರಿ 26, 1950 ರಂದು. ಇದರ ಪ್ರಯುಕ್ತ ಈ ದಿನವನ್ನು ಗಣರಾಜ್ಯೋತ್ಸವವಾಗಿ ಆಚರಿಸಲಾಗುತ್ತದೆ.ಜನವರಿ 26 ಗಣರಾಜ್ಯೋತ್ಸವ ದಿನ ಅದ್ದೂರಿ ಸಮಾರಂಭಕ್ಕೆ ಬೆಂಗಳೂರಿನ ಮಾಣಿಕ್ ಷಾ ಪೆರೆಡ್ ಗ್ರೌಂಡ್ ಪೂರ್ವ ಸಿದ್ದತೆ ನಡೆಸಿದೆ.
ಗಣರಾಜ್ಯೋತ್ಸವ ದಿನ ಯಾವ ಸಚಿವರು , ಯಾವ ಜಿಲ್ಲೆಯಲ್ಲಿ ಧ್ವಜಾರೋಹಣ ಇಲ್ಲಿದೆ ಮಾಹಿತಿ
ಎಸ್.ಅಂಗಾರ-ಉಡುಪಿ
ಆರಗ ಜ್ಞಾನೇಂದ್ರ-ತುಮಕೂರು
ಕೋಟ ಶ್ರೀನಿವಾಸ ಪೂಜಾರಿ-ಉತ್ತರ ಕನ್ನಡ
ಪ್ರಭು ಚೌಹಾಣ್-ಯಾದಗಿರಿ
ಗೋವಿಂದ ಕಾರಜೋಳ-ಬೆಳಗಾವಿ,
ಬಿ.ಶ್ರೀರಾಮುಲು-ಬಳ್ಳಾರಿ
ವಿ.ಸೋಮಣ್ಣ-ಚಾಮರಾಜನಗರ
ಸಿ.ಸಿ.ಪಾಟೀಲ್-ಗದಗ
ಆನಂದ್ ಸಿಂಗ್-ಕೊಪ್ಪಳ
ಮುರುಗೇಶ್ ನಿರಾಣಿ-ಕಲಬುರಗಿ
ಶಿವರಾಂ ಹೆಬ್ಬಾರ್-ಹಾವೇರಿ
ಎಸ್.ಟಿ.ಸೋಮಶೇಖರ್-ಮೈಸೂರು
ಬಿ.ಸಿ.ಪಾಟೀಲ್-ಚಿತ್ರುದುರ್ಗ
ಭೈರತಿ ಬಸವರಾಜ್-ದಾವಣಗೆರೆ
ಕೆ.ಸುಧಾಕರ್-ಬೆಂಗಳೂರು ಗ್ರಾಮಾಂತರ
ಕೆ.ಗೋಪಾಲಯ್ಯ-ಹಾಸನ
ಹಾಲಪ್ಪ ಆಚಾರ್-ಧಾರವಾಡ)ಶಶಿಕಲಾ ಜೊಲ್ಲೆ-ವಿಜಯನಗರ
ಎಂಟಿಬಿ ನಾಗರಾಜ್-ಚಿಕ್ಕಬಳ್ಳಾಪುರ
ಮುನಿರತ್ನ-ಕೋಲಾರ
ಆರ್.ಅಶೋಕ್-ಮಂಡ್ಯ
ಕೆ.ಸಿ.ನಾರಾಯಣಗೌಡ-ಶಿವಮೊಗ್ಗ
ಬಿ.ಸಿ.ನಾಗೇಶ್-ಕೊಡಗು
ವಿ.ಸುನೀಲ್ ಕುಮಾರ್-ದಕ್ಷಿಣ ಕನ್ನಡ
ಶಂಕರ ಪಾಟೀಲ ಮುನೇನಕೊಪ್ಪ-ರಾಯಚೂರು
ವಿಜಯಪುರ-ಡಿಸಿಯಿಂದ ಧ್ವಜಾರೋಹಣ
ಬೀದರ್, ಚಿಕ್ಕಮಗಳೂರು, ಬಾಗಲಕೋಟೆಯಲ್ಲಿ ಡಿಸಿ ಧ್ವಜಾರೋಹಣ