ಬೆಂಗಳೂರು/ಮಂಗಳೂರು: ಮಂಗಳೂರು ಕುಕ್ಕರ್‌ ಬಾಂಬ್‌ ಸ್ಪೋಟಕ್ಕೆ ಸಂಬಂಧಪಟ್ಟಂತೆ ದಿನದಿಂದ ದಿನಕ್ಕೆ ಸ್ಪೋಟಕ್ಕೆ ಮಾಹಿತಿ ಬರುತ್ತಿದೆ. ಈ ನಡುವೆ ಶಂಕಿತ ಉಗ್ರ ತಾರೀಖ್‌, ಕುಕ್ಕರ್‌ ಬಾಂಬ್‌ ಅನ್ನು ಮೈಸೂರಿನಲ್ಲಿ ತಯಾರಿಸಿ, ಅದನ್ನು ಮಡಿಕೇರಿ ಮೂಲಕ ಮಂಗಳೂರಿಗೆ ಕೆಎಸ್‌ಆರ್‌ಟಿಸಿ ಬಸ್‌ ಮೂಲಕ ಬಂದಿದ್ದಾನೆ ಎನ್ನಲಾಗಿದೆ. ಒಂದು ವೇಳೆ ಬಸ್‌ನಲ್ಲಿ ಬಾಂಬ್‌ ಸ್ಪೋಟವಾಗಿದ್ದರೇ ದೊಡ್ಡ ಪ್ರಮಾಣದಲ್ಲಿ ಅನಾಹುತಾ ಆಗುತಿತ್ತು ಎನ್ನಲಾಗಿದೆ. ಇದಲ್ಲದೇ ಶಂಕಿತ ಉಗ್ರ ತಾರೀಖ್‌ ಇತ್ತೀಚಿಗೆ ಕೊಯತ್ತಮತ್ತೂರಿನಲ್ಲಿ ನಡೆದ ಬಾಂಬ್‌ ಸ್ಪೋಟದಲ್ಲಿ ಕೂಡ ತೊಡಗಿಸಿಕೊಂಡಿದ್ದ ಎನ್ನಲಾಗಿದೆ. ಇದಲ್ಲದೇ ಕದ್ರಿಯಲ್ಲಿ ಗೋಡೆ ಮೇಲೆ ಬರೆದಿದ್ದ ಪ್ರಚೋದನಕಾರಿ ಬರಹದ ಪ್ರಕರಣದಲ್ಲಿ ಈತ ಜಾಮೀನು ಪಡೆದುಕೊಂಡಿದ್ದ ಎನ್ನಲಾಗಿದೆ.

ಇದಲ್ಲದೇ ರಾಜ್ಯದ ನಾನಾ ಕಡೆ ಬಾಂಬ್‌ ಸ್ಪೋಟಕ್ಕೆ ಮುಂದಾಗಿದ್ದ ಶಂಕಿತ ಉಗ್ರ ಮುಂದಾಗಿದ್ದ ಎನ್ನಲಾಗಿದ್ದು, ಇದರ ಪ್ರಾರಂಭ ಭಾಗವಾಗಿ ಸದ್ಯ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ತಾರೀಕ್‌ ನಡೆಸಿರುವ ಕುಕ್ಕರ್ ಬಾಂಬ್‌ ಸ್ಪೋಟ ಮೊದಲ ಭಾಗ ಎನ್ನಲಾಗಿದೆ. ಈ ನಡುವೆ ಶಿವಮೊಗ್ಗದ ತುಂಗ ತೀರದಲ್ಲಿ ಕೂಡ ಬಾಂಬ್‌ ಸ್ಪೋಟದ ಟ್ರಯಲ್‌ ಕೂಡ ನಡೆದದ್ದು ಹಲವು ಅನುಮಾನಗಳನ್ನು ಮೂಡಿಸಿದೆ.

ಈ ನಡುವೆ ನಗರದಲ್ಲಿ ಆಟೋದಲ್ಲಿ ಕುಕ್ಕರ್‌ ಬಾಂಬ್‌ ಬ್ಲಾಸ್ಟ್‌ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌ ಸಿಕ್ಕಿದೆ. ಮಂಗಳೂರು ಬ್ಲಾಸ್ಟ್‌ ಹಿಂದೆ ಶಾರಿಕ್‌ ಕೈವಾಡವಿರುವುದು ಕನ್ಫರ್ಮ್‌ ಆಗಿದೆ.

ಗಾಯಾಳು ಶಾರಿಕ್‌ ನನ್ನು ಪೋಷಕರು ಗುರುತು ಪತ್ತೆ ಹಚ್ಚಿದ್ದಾರೆ. ಗಾಯಾಳು ಶಾರಿಕ್‌ ಎಂದು ಪೋಷಕರು ಖಚಿತಪಡಿಸಿದ್ದಾರೆ. ಪೊಲೀಸರ ಎದುರೇ ಶಾರಿಕ್‌ ಎಂದು ಪೋಷಕರು ಖಚಿತಪಡಿಸಿದ್ದಾರೆ. ಶಾರಿಕ್‌ ಗೆ ತಿಂಡಿ, ನೀರಿನ ಬಾಟಲ್‌ ಅನ್ನು ಪೋಷಕರು ನೀಡಿದ್ದಾರೆ. ಇನ್ನು ಶಂಕಿತ ಆರೋಪಿ ಶಾರೀಕ್ ಗುರುತು ಪತ್ತೆ ಹಚ್ಚಲು ತಡರಾತ್ರಿ ಶಿವಮೊಗ್ಗದಿಂದ ಮಂಗಳೂರಿಗೆ ಆತನ ಪೋಷಕರನ್ನು ಪೊಲೀಸರು ಕರೆತಂದಿದ್ದಾರೆ.

ಮಂಗಳೂರಿನ ಕಂಕನಾಡಿ ಆಸ್ಪತ್ರೆಯಲ್ಲಿ ಶಾರೀಕ್ ಚಿಕಿತ್ಸೆ ಪಡೆಯುತ್ತಿದ್ದಾನೆ. ಶೇ.40 ರಷ್ಟು ಶಾರೀಕ್ ದೇಹ ಸುಟ್ಟು ಹೋಗಿದ್ದು, ಮಂಗಳೂರಿನ ಕಂಕನಾಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾನೆ. ಮುಖ ಬಾವು ಬಂದಿದ್ದ ಕಾರಣ ಪೊಲೀಸರಿಗೆ ಗುರುತು ಪತ್ತೆ ಮಾಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಅನುಮಾನದ ಹಿನ್ನೆಲೆಯಲ್ಲಿ ಶಾರೀಕ್ ಹೆತ್ತವರನ್ನು ಕರೆಸಿದ್ದಾರೆ. ಪೋಷಕರಿಗೂ ಶಾರೀಕ್ ಗುರುತು ಪತ್ತೆಯಾಗಲಿಲ್ಲ ಎಂದರೆ ಕೊನೆಗೆ ಡಿಎನ್‍ಎ ಟೆಸ್ಟ್ ಮಾಡಿಸುವ ಸಾಧ್ಯತೆ ಇದೆ.

Share.
Exit mobile version