ಗುವಾಹಟಿ: ಬಾಂಗ್ಲಾದೇಶದಲ್ಲಿ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದೆ ಎಂದು ಆರೋಪಿಸಿ ಅಸ್ಸಾಂ ಸರ್ಕಾರ ಮದರಸಾವನ್ನ ನೆಲಸಮಗೊಳಿಸಿದ ಕೆಲವು ದಿನಗಳ ನಂತರ, ಎಐಯುಡಿಎಫ್ ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್ ಶನಿವಾರ ಮದರಸಾಗಳಲ್ಲಿನ ಕೆಟ್ಟ ಶಕ್ತಿಗಳ ಬಗ್ಗೆ ನನಗೆ ಸಹಾನುಭೂತಿ ಇಲ್ಲ ಮತ್ತು ಪ್ರಾಧಿಕಾರವು ಏನು ಬೇಕಾದರೂ ಮಾಡಬಹುದು ಎಂದು ಹೇಳಿದ್ದಾರೆ. ಅಂದ್ಹಾಗೆ. ಮದರಸಾವನ್ನು ಗುರುವಾರ ನೆಲಸಮ ಮಾಡಲಾಯಿತು.

ಕೆಲವು ಜನರಿಗಾಗಿ ಇಡೀ ಸಮುದಾಯವನ್ನ ದೂಷಿಸಬೇಡಿ
ಮದರಸಾಗಳಲ್ಲಿ ಅಂತಹ ಜನರು ಕಂಡುಬಂದ್ರೆ, ಕೊಂದು ಹಾಕಿ. ಅಂತಹವರ ಬಗ್ಗೆ ನಮಗೆ ಯಾವುದೇ ಸಹಾನುಭೂತಿ ಇಲ್ಲ. ಸರ್ಕಾರವು ಅಂತಹ ಅಂಶಗಳನ್ನ ಎಲ್ಲಿ ಕಂಡ್ರೂ ಶೂಟ್ ಮಾಡಬೇಕು. ಮದರಸಾಗಳಲ್ಲಿ 1-2 ಕೆಟ್ಟ ಶಿಕ್ಷಕರು ಕಂಡುಬಂದರೆ, ತನಿಖೆ ಮುಗಿದ ನಂತ್ರ ಸರ್ಕಾರ ಅವ್ರನ್ನ ಬಂಧಿಸಿ, ಏನು ಬೇಕಾದರೂ ಮಾಡಬೋದು ಎಂದರು.

ಆದ್ರೆ, ಅಂತಹವರ ಕಾರಣದಿಂದ ಇಡೀ ಮುಸ್ಲಿಂ ಸಮುದಾಯವನ್ನ ಜಿಹಾದಿ ಎಂದು ಕರೆಯಲಾಗುತ್ತಿದೆ, ಅದು ಸರಿಯಲ್ಲ. ಇದು ಜಿಹಾದ್ ಅಲ್ಲ, ಭಯೋತ್ಪಾದನೆ. ಸರ್ಕಾರವು ಅವರನ್ನ ನಿಲ್ಲಿಸಬೇಕು, ತಮ್ಮ ಗಡಿಗಳನ್ನ ರಕ್ಷಿಸಬೇಕು ಮತ್ತು ಅವ್ರ ಗುಪ್ತಚರವನ್ನ ಬಲಪಡಿಸಬೇಕು ಎಂದರು.

ಹಣದುಬ್ಬರವು 2024ರಲ್ಲಿ ಸರ್ಕಾರವನ್ನ ತಿನ್ನುತ್ತದೆ
ಎಐಯುಡಿಎಫ್ ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್ ಅವ್ರು ದೇಶದಲ್ಲಿ ಹೆಚ್ಚುತ್ತಿರುವ ಹಣದುಬ್ಬರದ ಬಗ್ಗೆ ಸರ್ಕಾರವನ್ನ ಟೀಕಿಸಿದರು. “ಭಾರತದ ಹಣ ಹಣಕಾಸು ಸಚಿವರ ಬಳಿ ಇದೆ. ಒಬ್ಬ ವ್ಯಕ್ತಿಯು ಒಂದು ಸರಕನ್ನು ಖರೀದಿಸಲು ಎಷ್ಟು ಖರ್ಚು ಮಾಡುತ್ತಾನೆಂದು ಅವರಿಗೆ ಹೇಗೆ ತಿಳಿದಿದೆ? ಯಾವುದೇ ಸಚಿವರಿಗೆ ಹಣದುಬ್ಬರವಿಲ್ಲ. ಬಿಜೆಪಿ ಸಂಸದರು ಅಡುಗೆ ಮನೆಯನ್ನ ಹೇಗೆ ನಡೆಸುತ್ತಿದ್ದಾರೆ ಎಂದು ತಮ್ಮ ಹೆಂಡತಿಯರನ್ನ ಕೇಳಬೇಕು. ಸರ್ಕಾರವು ಈ ಬಗ್ಗೆ ಗಮನ ಹರಿಸಬೇಕು, ಇಲ್ಲದಿದ್ದರೆ ಹಣದುಬ್ಬರವು 2024 ರಲ್ಲಿ ಅವರ ಸರ್ಕಾರವನ್ನ ನುಂಗಿಹಾಕುತ್ತದೆ” ಎಂದು ಹೇಳಿದರು.

Share.
Exit mobile version