ಚೆನ್ನೈ: ಚಲನಚಿತ್ರ ನಿರ್ದೇಶಕ ಮತ್ತು ನಾಮ್ ತಮಿಳರ್ ಕಚ್ಚಿ ನಾಯಕ ಸೀಮನ್ ವಿರುದ್ಧದ ಅತ್ಯಾಚಾರ ಮತ್ತು ಸುಲಿಗೆ ದೂರನ್ನು ಹಿಂಪಡೆಯುವುದಾಗಿ ಬಹುಭಾಶನಟಿ ನಟಿ ವಿಜಯಲಕ್ಷ್ಮಿ ಶನಿವಾರ ಚೆನ್ನೈನ ವಲಸರವಕ್ಕಂ ಪೊಲೀಸರಿಗೆ ಪತ್ರವನ್ನು ಸಲ್ಲಿಸಿದ್ದಾರೆ.
ಮನವಿ ಪತ್ರವನ್ನು ಸಲ್ಲಿಸಿದ ನಂತರ ಮಾತನಾಡಿರುವ ನಟಿ ಸೀಮನ್ಗೆ ತಮಿಳುನಾಡಿನಲ್ಲಿ ಸಾಕಷ್ಟು ಅಧಿಕಾರವಿದೆ ಆದರೆ ಅದು ಇರಲಿ ನಾನು ನನ್ನ ಸೋಲನ್ನು ಒಪ್ಪಿಕೊಳ್ಳುತ್ತೇನೆ” ಎಂದು ಅವರು ಹೇಳಿದ್ದಾರೆ.
ವಿಜಯಲಕ್ಷ್ಮಿ ಅವರು ಬೆಂಗಳೂರಿಗೆ ಹೋಗಿ ಸ್ವಲ್ಪ ಸಮಯ ಅಲ್ಲಿಯೇ ಇರುವುದಾಗಿ ಹೇಳಿದ್ದಾರೆ. ಇನ್ನೂ ನಟಿ ಈ ಹಿಂದೆ ತಿರುವಳ್ಳೂರಿನ ಮಹಿಳಾ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಿದ್ದರಿಂದ, ಅವರು ಪರಿಣಾಮಗಳನ್ನು ಎದುರಿಸಬೇಕಾಗಬಹುದು ಎಂದು ತನಿಖಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆಕೆಯ ಹಿಂತೆಗೆದುಕೊಳ್ಳುವ ಅರ್ಜಿಯನ್ನು ಸ್ವೀಕರಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. “ನಾವು ಅದನ್ನು ನ್ಯಾಯಾಲಯಕ್ಕೆ ಸಲ್ಲಿಸುತ್ತೇವೆ. ಅರ್ಜಿಯನ್ನು ಮುಕ್ತಾಯಗೊಳಿಸಲು ಕೆಲವು ವಾರಗಳು ಅಥವಾ ತಿಂಗಳುಗಳು ಬೇಕಾಗಬಹುದು. ನ್ಯಾಯಾಲಯವು ನಿರ್ಧರಿಸುತ್ತದೆ” ಎಂದು ಅಧಿಕಾರಿ ಹೇಳಿದ್ದಾರೆ.