ಬೆಂಗಳೂರು : ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯ ಶಾಲಾ ಪಠ್ಯವನ್ನು ಹಿಂದಕ್ಕೆ ಪಡೆಯುವ ಪ್ರಶ್ನೆಯೇ ಇಲ್ಲ. ಪಠ್ಯಪರಿಷ್ಕರಣೆಯಲ್ಲಿ 7-8 ದೋಷಗಳಿದ್ದು, ಸರಿಪಡಿಸಿ 10 ದಿನದೊಳಗೆ ವಿದ್ಯಾರ್ಥಿಗಳಿಗೆ ವಿತರಿಸಲಾಗುವುದು ಎಂದು ರಾಜ್ಯ ಸರ್ಕಾರ ಘೋಷಿಸಿದೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಕಂದಾಯ ಸಚಿವ ಆರ್. ಅಶೋಕ್, ರೋಹಿತ್ ಚಕ್ರತೀರ್ಥ ಸಮಿತಿಯ ಪಠ್ಯ ಪರಿಷ್ಕರಣೆಯಲ್ಲಿ ಏಳೆಂಟು ಸಣ್ಣ ದೋಷಗಳಿದ್ದು, ಅವುಗಳನ್ನು ಸರಿಪಡಿಸಿ 10 ದಿನದೊಳಗೆ ವಿದ್ಯಾರ್ಥಿಗಳಿಗೆ ವಿತರಿಸಲಾಗುವುದು ಎಂದು ಹೇಳಿದ್ದಾರೆ.
BIGG NEWS : ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ಮಹಿಳಾ ನೌಕರರಿಗೂ `ಮಾತೃತ್ವ ರಜೆ’ : ರಾಜ್ಯ ಸರ್ಕಾರ ಆದೇಶ
ಈ ಹಿಂದೆ ಶಾಲಾ ಪಠ್ಯವನ್ನು ಪರಿಷ್ಕರಿಸಿದ್ದ ಪ್ರೊ. ಜಿ.ಎಸ್. ಮುಡಂಬಡಿತ್ತಾಯ ಸಮಿತಿ. ಪ್ರೊ. ಬರಗೂರು ರಾಮಚಂದ್ರಪ್ಪ ಸಮಿತಿ ಹಾಗೂ ತಮ್ಮ ಸರ್ಕಾರದ ಅವಧಿಯ ರೋಹಿತ್ ಚಕ್ರತೀರ್ಥ ಸಮಿತಿಗಳು ಯಾವ ರೀತಿ ಸಮಾಜ ವಿಜ್ಞಾನ ಹಾಗೂ ಕನ್ಡ ಭಾಷಾ ಪಠ್ಯವನ್ನು ಪರಿಷ್ಕರಣೆ ಮಾಡಿವೆ. ಈ ಎಲ್ಲಾ ಪಠ್ಯ ಸಮಿತಿಗಳ ನಡುವಿನ ಹೋಲಿಕೆ ಒಳಗೊಂಡ 200 ಕ್ಕೂಹೆಚ್ಚು ಪುಟಗಳ ಕೈಪಿಡಿಯನ್ನು ಬಿಡುಗಡೆಗೊಳಿಸಲಾಗಿದೆ.
BIG NEWS: ‘ದ್ವಿಚಕ್ರ ವಾಹನ’ ಖರೀದಿಸೋರಿಗೆ ಶಾಕಿಂಗ್ ನ್ಯೂಸ್: ಜುಲೈ.1ರಿಂದ ‘ಹೀರೋ ಬೈಕ್’ ಬೆಲೆ ಹೆಚ್ಚಳ