ಕೆಎನ್‌ಎನ್‌ಡಿಜಿಟಲ್‌ ಡೆಸ್ಕ್‌ : ಜಸ್ಟಿನ್ ಬೈಬರ್ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದ್ದು, ಜಸ್ಟಿನ್ ಬೈಬರ್ ತಮ್ಮ ವಿಶ್ವ ಪ್ರವಾಸವನ್ನ ಮಾಡುವುದಾಗಿ ಘೋಷಿಸಿದ್ದಾರೆ. ಅಂದ್ಹಾಗೆ, ಪಾಪ್ ತಾರೆ ಜಸ್ಟಿನ್ ಬೈಬರ್, ರಾಮ್ಸೇ ಹಂಟ್ ಸಿಂಡ್ರೋಮ್‌ನಿಂದ ಬಳಲುತ್ತಿರುವ ಬಗ್ಗೆ ಮಾಹಿತಿ ನೀಡಿದ್ದರು. ಅವರ ಮುಖದ ಒಂದು ಭಾಗವೂ ಪಾರ್ಶ್ವವಾಯುವಿಗೆ ಒಳಗಾಗಿತ್ತು. ಇದರಿಂದಾಗಿ ಜಸ್ಟಿನ್ ಬೈಬರ್ ತನ್ನ ವಿಶ್ವ ಪ್ರವಾಸವನ್ನ ರದ್ದುಗೊಳಿಸಬೇಕಾಯಿತು. ಆದ್ರೆ, ಈಗ ಮತ್ತೊಮ್ಮೆ ವಿಶ್ವ ಪ್ರವಾಸ ಮಾಡುವುದಾಗಿ ಪಾಪ್ ತಾರೆ ಘೋಷಿಸಿದ್ದಾರೆ. ಅದ್ರಂತೆ, ವಿಶ್ವ ಪ್ರವಾಸದಲ್ಲಿ ಭಾರತವೂ ಸೇರಿದೆ. ಈಗ ಈ ಘೋಷಣೆಯ ನಂತರ, ಜಸ್ಟಿನ್ ಬೈಬರ್ ಭಾರತದಲ್ಲೂ ಪ್ರದರ್ಶನ ನೀಡಲಿದ್ದಾರೆ.

‘ಜಸ್ಟೀಸ್ ವರ್ಲ್ಡ್ ಟೂರ್’ ಪ್ರಾರಂಭ
ಪಾಪ್ ಗಾಯಕ ಜಸ್ಟಿನ್ ಬೈಬರ್ ಅವ್ರ ವಿಶ್ವ ಪ್ರವಾಸ ‘ಜಸ್ಟೀಸ್ ವರ್ಲ್ಡ್ ಟೂರ್’ ಮತ್ತೊಮ್ಮೆ ಪ್ರಾರಂಭವಾಗಲಿದೆ. ಈ ಬಗ್ಗೆ ಸ್ವತಃ ಜಸ್ಟಿನ್ ಬೈಬರ್ ಮಾಹಿತಿ ನೀಡಿದ್ದಾರೆ. ಅದ್ರಂತೆ, ಅಕ್ಟೋಬರ್ 18 ರಂದು ನವದೆಹಲಿಯಲ್ಲಿ ಜಸ್ಟಿನ್ ಬೈಬರ್ ಕಾರ್ಯಕ್ರಮ ನಡೆಯಲಿದೆ. ಅದ್ರಂತೆ, ಜಸ್ಟಿನ್ ಪ್ರದರ್ಶನವು JLN ಅಂದರೆ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ನಡೆಯಲಿದೆ. ಇದಕ್ಕೂ ಮುನ್ನ ಜುಲೈ 31ರಂದು ಇಟಲಿಯಲ್ಲಿ ನಡೆಯಲಿರುವ ಲುಕ್ಕಾ ಸಮ್ಮರ್ ಫೆಸ್ಟಿವಲ್ʼನಲ್ಲಿ ಜಸ್ಟಿನ್ ಬೈಬರ್ ತಮ್ಮ ‘ವಿಶ್ವ ಪ್ರವಾಸ’ ಆರಂಭಿಸಲಿದ್ದಾರೆ.

ವಿಶ್ವ ಪ್ರವಾಸದ ಸಮಯದಲ್ಲಿ, ಪಾಪ್ ಗಾಯಕಿ ಭಾರತ ಮತ್ತು ಏಷ್ಯಾ, ದಕ್ಷಿಣ ಅಮೇರಿಕಾ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಲ್ಲಿ ಪ್ರದರ್ಶನಗಳೊಂದಿಗೆ ತನ್ನ ಅಂತರಾಷ್ಟ್ರೀಯ ವಿಶ್ವ ಪ್ರವಾಸದಲ್ಲಿ ಮುಂದುವರಿಯುತ್ತಾರೆ. ಇದರ ನಂತರ ಜಸ್ಟಿನ್ ಬೈಬರ್ ಮುಂದಿನ ವರ್ಷ 2023ರಲ್ಲಿ ನಮ್ಮ ದೇಶಕ್ಕೆ ಹಿಂತಿರುಗುತ್ತಾರೆ.

Share.
Exit mobile version