ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವ್ರ ಜನಪ್ರಿಯತೆಯು ವಿಶ್ವದಲ್ಲಿ ಮತ್ತೊಮ್ಮೆ ಹೆಚ್ಚಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವ್ರು ಶೇ.77ರಷ್ಟು ಅನುಮೋದಿತ ರೇಟಿಂಗ್’ನೊಂದಿಗೆ ವಿಶ್ವ ನಾಯಕರ ಪಟ್ಟಿಯಲ್ಲಿ ಮತ್ತೊಮ್ಮೆ ಅಗ್ರಸ್ಥಾನದಲ್ಲಿದ್ದಾರೆ.

ಮಾರ್ನಿಂಗ್ ಕನ್ಸಲ್ಟ್ ಪೊಲಿಟಿಕಲ್ ಇಂಟೆಲಿಜೆನ್ಸ್ ಈ ವರದಿಯನ್ನ ಬಿಡುಗಡೆ ಮಾಡಿದ್ದು, ಇದ್ರಲ್ಲಿ ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್ ಅವ್ರು 56% ಅನುಮೋದನೆ ರೇಟಿಂಗ್ ಹೊಂದಿದ್ದಾರೆ. ಅದೇ ಸಮಯದಲ್ಲಿ, ಯುಎಸ್ ಅಧ್ಯಕ್ಷ ಜೋ ಬಿಡೆನ್ ಮೂರನೇ ಸ್ಥಾನವನ್ನ ಪಡೆದಿದ್ದು, ಇನ್ನವ್ರ ಅನುಮೋದನೆ ರೇಟಿಂಗ್ 41% ಆಗಿದೆ. ಬಿಜೆಪಿ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್’ನಲ್ಲಿ ಈ ಪಟ್ಟಿಯನ್ನ ಬಿಡುಗಡೆ ಮಾಡಿದೆ.

ಅಧಿಕೃತ ಟ್ವಿಟ್ಟರ್ ಹ್ಯಾಂಡಲ್‍ನಲ್ಲಿ ಬಿಜೆಪಿ, “ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿ ಜಾಗತಿಕ ವೇದಿಕೆಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ವಿಶ್ವದ ಎಲ್ಲಾ ಪ್ರಮುಖ ನಾಯಕರಲ್ಲಿ ಪ್ರಧಾನಿ ಮೋದಿ ಅವರು ಅತ್ಯಧಿಕ ಅನುಮೋದನೆ ರೇಟಿಂಗ್ ಹೊಂದಿದ್ದಾರೆ. 77% ರೇಟಿಂಗ್’ನೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅತ್ಯಂತ ಜನಪ್ರಿಯ ಜಾಗತಿಕ ನಾಯಕರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ” ಎಂದಿದೆ.

ಮಾರ್ನಿಂಗ್ ಕನ್ಸಲ್ಟ್ ಪೊಲಿಟಿಕಲ್ ಇಂಟೆಲಿಜೆನ್ಸ್ ಎಂಬುದು ಆಸ್ಟ್ರೇಲಿಯಾ, ಆಸ್ಟ್ರಿಯಾ, ಬ್ರೆಜಿಲ್, ಜರ್ಮನಿ, ಭಾರತ, ಮೆಕ್ಸಿಕೋ, ನೆದರ್ಲ್ಯಾಂಡ್ಸ್, ದಕ್ಷಿಣ ಕೊರಿಯಾ, ಸ್ಪೇನ್, ಸ್ವೀಡನ್ ಮತ್ತು ಯುನೈಟೆಡ್ ಸ್ಟೇಟ್ಸ್ನ ನಾಯಕರ ರೇಟಿಂಗ್‍ಗಳನ್ನುಟ್ರ್ಯಾಕ್ ಮಾಡುವ ರೇಟಿಂಗ್ ಸಂಸ್ಥೆಯಾಗಿದೆ.

ಈ ಹಿಂದೆ, ಪ್ರಧಾನಿ ಮೋದಿ ಅವ್ರು 2022ರ ಜನವರಿ ಮತ್ತು ನವೆಂಬರ್ 2021ರಲ್ಲಿ ವಿಶ್ವದ ಅತ್ಯಂತ ಜನಪ್ರಿಯ ನಾಯಕರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರು. ಈ ವೇದಿಕೆಯು ಚುನಾವಣೆಗಳು, ಚುನಾಯಿತ ಸರ್ಕಾರಗಳು ಮತ್ತು ದೇಶದ ದೊಡ್ಡ ವಿಷಯಗಳ ಬಗ್ಗೆ ನೈಜ ದತ್ತಾಂಶವನ್ನ ಒದಗಿಸುತ್ತದೆ. ಮಾರ್ನಿಂಗ್ ಕನ್ಸಲ್ಟ್ ಪ್ರತಿದಿನ 20,000ಕ್ಕೂ ಹೆಚ್ಚು ಸಂದರ್ಶನಗಳನ್ನ ನಡೆಸುತ್ತದೆ.

 

SHOCKING NEWS : ಕಿರುಚುತ್ತಿದ್ರು ಬಿಡ್ಲಿಲ್ಲ, ತಂದೆಯನ್ನೇ 20 ಬಾರಿ ಇರಿದು ಕೊಂದ ಪಾಪಿ ಮಗ, ಅರ್ಧ ಗಂಟೆಯಲ್ಲೇ ಇಡೀ ಕುಟುಂಬ ಸರ್ವನಾಶ

BREAKING NEWS: ‘ಬೆಂಗಳೂರಿನ ವೋಟರ್ ಐಡಿ’ ಪರಿಷ್ಕರಣೆ ಅಕ್ರಮ: ‘ರಾಜ್ಯ ಚುನಾವಣಾ ಆಯೋಗ’ಕ್ಕೆ ಚಾಟಿ ಬಿಸಿದ ಸಿಇಸಿ

WATCH VIDEO: ‘ಮಹಿಳೆಯರು ಬಟ್ಟೆ ಹಾಕದಿದ್ದರೂ ಚೆನ್ನಾಗಿ ಕಾಣುತ್ತಾರೆ’: ವಿವಾದತ್ಮಕ ಹೇಳಿಕೆ ನೀಡಿದ ಬಾಬಾ ರಾಮ್‌ದೇವ್

Share.
Exit mobile version