ಕರಾಚಿ : ಪಾಕಿಸ್ತಾನ ಸೂಪರ್ ಲೀಗ್ 7 ಆಯೋಜಿಸಿದ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಭರ್ಜರಿ ಹಣ ಗಳಿಸಿಕೊಂಡಿದ್ದು, ಕುಬೇರನ ಖಜಾನೆಯನ್ನು ತೆರೆದಿದೆ. ವರದಿಗಳ ಪ್ರಕಾರ, ಈ ವರ್ಷದ ಜನವರಿ-ಫೆಬ್ರವರಿ ಆರಂಭದಲ್ಲಿ ನಡೆದ ಪಿಎಸ್ಎಲ್‌ನ ಏಳನೇ ಆವೃತ್ತಿಯ ಮೂಲಕ ಪಿಸಿಬಿ 2.3 ಬಿಲಿಯನ್ ಪಾಕಿಸ್ತಾನಿ ರೂಪಾಯಿಗಳ (ಯುಎಸ್ $ 1,19,20,186) ಲಾಭವನ್ನ ಗಳಿಸಿದೆ.
ಪಿಸಿಬಿಯ ಅಧಿಕೃತ ವಕ್ತಾರರು ಪಿಎಸ್ಎಲ್‌ನಿಂದ ಮಂಡಳಿಯು ಸುಮಾರು 2.3 ಬಿಲಿಯನ್ ಪಾಕಿಸ್ತಾನಿ ರೂಪಾಯಿಗಳಿಂದ (ಸುಮಾರು 100 ಕೋಟಿ ಭಾರತೀಯ ರೂಪಾಯಿಗಳು) ಪ್ರಯೋಜನ ಪಡೆದಿದೆ ಎಂದು ದೃಢಪಡಿಸಿದ್ದಾರೆ. “ಇದು ಪಿಸಿಬಿಯ ನಿವ್ವಳ ಲಾಭ ಮತ್ತು ಪಿಎಸ್ಎಲ್‌ನಲ್ಲಿ ಭಾಗವಹಿಸಿದ ಆರು ಫ್ರಾಂಚೈಸಿಗಳ ಲಾಭವು ವಿಭಿನ್ನವಾಗಿದೆ ಎಂದು ನಾನು ಸ್ಪಷ್ಟವಾಗಿ ಹೇಳಬಲ್ಲೆ. ಆದ್ರೆ, ಅವರು ಲಾಭದಿಂದ ಆರು ತಂಡಗಳಿಗೆ ನೀಡಬೇಕಾದ ಪಾಲನ್ನ ಬಹಿರಂಗಪಡಿಸಲು ನಿರಾಕರಿಸಿದರು.
ಪಿಎಸ್ಎಲ್‌ನಿಂದ ಇದುವರೆಗಿನ ಅತಿದೊಡ್ಡ ಆದಾಯ
2016ರಲ್ಲಿ ಪಿಎಸ್ಎಲ್ ಪ್ರಾರಂಭವಾದ ನಂತ್ರ ಈ ಟಿ20 ಲೀಗ್ ಆಯೋಜಿಸುವುದರಿಂದ ಪಿಸಿಬಿ ಮಾಡಿದ ಅತಿದೊಡ್ಡ ಗಳಿಕೆ ಇದಾಗಿದೆ. ಪಿಸಿಬಿ ಲೀಗ್ ತಂಡಗಳೊಂದಿಗೆ ಲಾಭವನ್ನ ಹಂಚಿಕೊಳ್ಳುವ 5-95 ಸೂತ್ರವನ್ನು ಹೊಂದಿದೆ. ಪಿಸಿಬಿಯ ಆದಾಯವು ಪ್ರಸಾರ, ಪ್ರಾಯೋಜಕತ್ವ, ಟಿಕೆಟ್ ಮಾರಾಟ ಮತ್ತು ಇತರ ಹಕ್ಕುಗಳಿಂದ ಬರುತ್ತದೆ.
ಕಳೆದ ಎರಡು ಋತುಗಳಲ್ಲಿನ ನಷ್ಟ ಸರಿದೂಗಿಸಿದ ಪಿಎಸ್‌ಎಲ್
ಕರೋನಾ ಸಾಂಕ್ರಾಮಿಕ ರೋಗದಿಂದಾಗಿ ಪಿಎಸ್ಎಲ್‌ನ ಐದು ಮತ್ತು ಆರನೇ ಋತುಗಳಲ್ಲಿ ಉಂಟಾದ ನಷ್ಟವನ್ನ 1 ಬಿಲಿಯನ್ ಪಾಕಿಸ್ತಾನಿ ರೂಪಾಯಿಗಳ ಮೂಲಕ ಸರಿದೂಗಿಸಲಾಗುವುದು ಎಂದು ಪಿಸಿಬಿ ಅಧಿಕಾರಿ ಒಪ್ಪಿಕೊಂಡಿದ್ದಾರೆ. ಈ ಬಾರಿ ಪಿಎಸ್ಎಲ್ʼನ 6 ತಂಡಗಳಲ್ಲಿ ಐದು ತಂಡಗಳು ಪ್ರಯೋಜನ ಪಡೆಯಲಿವೆ ಎಂದು ಅವರು ಹೇಳಿದರು.
ಲಾಹೋರ್ ಖಲಂದರ್ಸ್ʼಗೆ ಪ್ರಶಸ್ತಿ..!
ಪಾಕಿಸ್ತಾನ ಸೂಪರ್ ಲೀಗ್‌ನ ಸೂಪರ್ ಹಿಟ್ ಋತುವಿನ ಪ್ರಶಸ್ತಿಯನ್ನ ಶಾಹೀನ್ ಶಾ ಅಫ್ರಿದಿ ನಾಯಕತ್ವದ ಲಾಹೋರ್ ಖಲಂದರ್ಸ್ ತಂಡವು ಗೆದ್ದುಕೊಂಡಿತು. ಲಾಹೋರ್ ಫೈನಲ್ʼನಲ್ಲಿ ಹಾಲಿ ಚಾಂಪಿಯನ್ ಮುಲ್ತಾನ್ ಸುಲ್ತಾನ್ ಅವ್ರನ್ನ 42 ರನ್ʼಗಳಿಂದ ಸೋಲಿಸಿ ಪ್ರಶಸ್ತಿಯನ್ನ ಗೆದ್ದುಕೊಂಡಿತು. ಲಾಹೋರ್ʼನ ವಿಜಯದ ನಾಯಕ ಮೊಹಮ್ಮದ್ ಹಫೀಜ್ ಆಗಿದ್ದಾರೆ.
Russia-Ukraine Crisis: ಯುದ್ದದಲ್ಲಿ ಸತ್ತ ರಷ್ಯಾದ ಸೈನಿಕರ ದೇಹಗಳನ್ನು ಮನೆಗೇ ಕಳಿಸಲಿರುವ ಉಕ್ರೇನ್