ನವದೆಹಲಿ : ಪ್ರಧಾನಿ ನರೇಂದ್ರ ಮೋದಿಯವರಿಗೆ ಪಾಕಿಸ್ತಾನದ ಸಹೋದರಿ ಖಮರ್ ಮೊಹ್ಸಿನ್ ಶೇಖ್ ರಾಖಿ ಕಳುಹಿಸಿದ್ದು, 2024ರಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಗೆ ಶುಭ ಹಾರೈಸಿದ್ದಾರೆ.

ಈ ಬಾರಿ ಅವರು (ಪಿಎಂ ಮೋದಿ) ನನ್ನನ್ನು ದೆಹಲಿಗೆ ಕರೆಯುತ್ತಾರೆ ಎಂದು ನಾನು ಭಾವಿಸುತ್ತೇನೆ. ಎಲ್ಲ ಸಿದ್ಧತೆಗಳನ್ನ ಮಾಡಿಕೊಂಡಿದ್ದೇನೆ. ನಾನೇ ಈ ರಾಖಿಯನ್ನ ರೇಷ್ಮೆ ರಿಬ್ಬನ್‌ನಿಂದ ಕಸೂತಿ ವಿನ್ಯಾಸದೊಂದಿಗೆ ತಯಾರಿಸಿದ್ದೇನೆ. ಅವರ ದೀರ್ಘ ಮತ್ತು ಆರೋಗ್ಯಕರ ಜೀವನಕ್ಕಾಗಿ ನಾನು ಪತ್ರ ಬರೆದು ಪ್ರಾರ್ಥಿಸಿದ್ದೇನೆ. ಇನ್ನು ನೀವು ಈಗ ಮಾಡುತ್ತಿರುವಂತೆ ಉತ್ತಮ ಕೆಲಸವನ್ನ ಮುಂದುವರಿಸಿ. ಮೋದಿ ಮತ್ತೊಮ್ಮೆ ಪ್ರಧಾನಿಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ, ಅವ್ರು ಅದಕ್ಕೆ ಅರ್ಹರು. ಯಾಕಂದ್ರೆ, ಅವರು ಅಂತಹ ಸಾಮರ್ಥ್ಯಗಳನ್ನ ಹೊಂದಿದ್ದು, ಪ್ರತಿ ಬಾರಿಯೂ ಭಾರತದ ಪ್ರಧಾನಿಯಾಗಬೇಕೆಂದು ನಾನು ಬಯಸುತ್ತೇನೆ” ಎಂದಿದ್ದಾರೆ ಖಮರ್ ಮೊಹ್ಸಿನ್ ಶೇಖ್.

Share.
Exit mobile version