ಉಡುಪಿ : ಉಡುಪಿ ಜಿಲ್ಲೆಯ ಮಳೆಯ ಅಬ್ಬರಕ್ಕೆ ಭಾರೀ ಅನಾಹುತ ಸಂಭವಿಸಿದ್ದು, ರಾಷ್ಟ್ರೀಯ ಹೆದ್ದಾರಿಯಿಂದ ಸಮುದ್ರಕ್ಕೆ ಕಾರು ಬಿದ್ದ ಪರಿಣಾಮ ಚಾಲಕ ಸಾವನ್ನಪ್ಪಿದ್ದು, ಓರ್ವ ನಾಪತ್ತೆಯಾಗಿರುವ ಘಟನೆ ನಡೆದಿದೆ.

ದಕ್ಷಿಣ ಚೀನಾದ ಕರಾವಳಿಯಲ್ಲಿ ಮುಳುಗಿದ ತೇಲುವ ಕ್ರೇನ್: 27 ಮಂದಿ ನಾಪತ್ತೆ

ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಮರವಂತೆ ಸಮುದ್ರಕ್ಕೆ ಕಾರೊಂದು ಉರುಳಿ ಬಿದ್ದು, ಓರ್ವ ಮೃತಪಟ್ಟಿದ್ದು, ಇನ್ನೋರ್ವನಿಗಾಗಿ ಹುಡುಕಾಟ ನಡೆಯುತ್ತಿದೆ. ಇಬ್ಬರನ್ನು ರಕ್ಷಣೆ ಮಾಡಲಾಗಿದೆ.

ಮರವಂತೆಯ ಮಾರಸ್ವಾಮಿ ದೇವಸ್ಥಾನದ ಬಳಿ ಹೆದ್ದಾರಿ ಮೇಲಿನಿಂದ ಕಳೆದ ರಾತ್ರಿ ಕಾರು ಸಮುದ್ರಕ್ಕೆ ಬಿದ್ದಿದೆ. ಆ ಕಾರಿನಲ್ಲಿ ನಾಲ್ವರಿದ್ದರು. ಓರ್ವ ಕಾರಿನೊಳಗೆ ಸಾವನ್ನಪ್ಪಿದ್ದು, ಮತ್ತೊಬ್ಬರು ನೀರಲ್ಲಿ ಮುಳುಗಿ ನಾಪತ್ತೆಯಾಗಿದ್ದಾರೆ. ಆತನಿಗಾಗಿ ಅಗ್ನಿಶಾಮಕದಳ, ಮೀನುಗಾರರು ಹುಡುಕಾಟ ನಡೆಸುತ್ತಿದ್ದಾರೆ.

Share.
Exit mobile version