ಕೆಎನ್ಎನ್ ಡಿಜಿಟಲ್ ಡೆಸ್ಕ್ : ನಮ್ಮ ದೇಶದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ದಿನದಿಂದ ದಿನಕ್ಕೆ ಹೊಸ ಬದಲಾವಣೆಗಳು ಆಗುತ್ತಿವೆ. ದೇಶವನ್ನ ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುವ ಪ್ರಯತ್ನವೂ ನಡೆಯುತ್ತಿದೆ. ಈ ಕ್ರಮದಲ್ಲಿ ದೇಶದ ಹೆಚ್ಚು ಜನರನ್ನ ಸಾಕ್ಷರರನ್ನಾಗಿಸಲು ಯುಜಿಸಿ ಹೊಸ ನಿಯಮ ತಂದಿದೆ.
ಈ ನಿಯಮದ ಪ್ರಕಾರ, ಈಗ ವಿಶ್ವವಿದ್ಯಾನಿಲಯದಲ್ಲಿ ಪ್ರತಿ ವಿದ್ಯಾರ್ಥಿಯು ಪ್ರತಿ ವರ್ಷ ಕನಿಷ್ಠ ಐವರು ಅನಕ್ಷರಸ್ಥರಿಗೆ ಓದುವುದನ್ನ ಕಲಿಸಬೇಕು. ಅಲ್ದೇ ಅವ್ರು ಓದು ಮುಂದುವರೆಸಬೇಕು. ಇದರಿಂದ ದೇಶದಲ್ಲಿ ಅನಕ್ಷರಸ್ಥರ ಸಂಖ್ಯೆ ಕಡಿಮೆಯಾಗಲಿದೆ ಎಂದು ಯುಜಿಸಿ ಹೇಳಿದ್ದು, 2047ರ ವೇಳೆಗೆ ನಮ್ಮ ದೇಶವೂ ಅಭಿವೃದ್ಧಿ ಹೊಂದಿದ ದೇಶಗಳ ಪಟ್ಟಿಗೆ ಸೇರಲಿದೆ ಎಂದಿದೆ. ಇನ್ನು ಇದಕ್ಕೆ ಶಿಕ್ಷಣ ಮುಖ್ಯವಾಗಿರುವುದರಿಂದ ಈ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿವೆ.
ಈ ನಿಬಂಧನೆಯು ವಿಶ್ವವಿದ್ಯಾನಿಲಯಗಳಲ್ಲಿ ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಅನ್ವಯಿಸಲಿದ್ದು, ವಿದ್ಯಾರ್ಥಿಗಳು ಇದರ ಪ್ರತಿಯಾಗಿ ಕ್ರೆಡಿಟ್ ಸ್ಕೋರ್ ಪಡೆಯಲಿದ್ದಾರೆ.
ಈ ವಿದ್ಯಾರ್ಥಿಗಳು ಪ್ರತಿ ವರ್ಷ ಐವರು ಅನಕ್ಷರಸ್ಥರನ್ನ ಆಯ್ಕೆ ಮಾಡಿ ಅವರಿಗೆ ಶಿಕ್ಷಣ ನೀಡಬೇಕು. ಅಂದರೆ ಅವರಿಗೆ ಓದಲು ಮತ್ತು ಬರೆಯಲು ಕಲಿಸಬೇಕು. ಪ್ರತಿಯಾಗಿ, ಅವರಿಗೆ ಕ್ರೆಡಿಟ್ ಸ್ಕೋರ್ ಕೂಡ ಸಿಗುತ್ತದೆ. ಇನ್ನಿದರ ಸ್ಕೋರ್ ಕೋರ್ಸ್ನ ಕೊನೆಯಲ್ಲಿ ಅವ್ರ ಫಲಿತಾಂಶಕ್ಕೆ ಸೇರಿಸಲಾಗುತ್ತದೆ.
ಹೊಸ ಅಧಿವೇಶನದಿಂದ ಈ ನಿಯಮ ಜಾರಿ.!
ಹೊಸ ಅಧಿವೇಶನದಿಂದ ಈ ನಿಯಮವು ಅನ್ವಯಿಸುತ್ತದೆ. ಸೆಮಿಸ್ಟರ್ ಅಥವಾ ಹೊಸ ಶೈಕ್ಷಣಿಕ ವರ್ಷದ ಆರಂಭವಾಗಲಿದ್ದು, ಇದಕ್ಕಾಗಿ ಯುಜಿಸಿ ವಿವರವಾದ ಮಾರ್ಗಸೂಚಿಗಳನ್ನು ಸಹ ಹೊರಡಿಸಿದೆ. ಇನ್ನಿದನ್ನ ಕಾರ್ಯಗತಗೊಳಿಸಲು, ಪ್ರತಿ ಯೋಜನೆಯ ಕೆಲಸ ಮತ್ತು ನಿಯೋಜನೆಯನ್ನ ಲಿಂಕ್ ಮಾಡಲು ಚರ್ಚೆ ಇದೆ.
ಇದು ಪದವಿ ಮತ್ತು ಸ್ನಾತಕೋತ್ತರ ಕೋರ್ಸ್ಗಳನ್ನ ಒಳಗೊಂಡಿದ್ದು, ಈ ಯೋಜನೆಯಡಿಯಲ್ಲಿ ಅನಕ್ಷರಸ್ಥರಿಗೆ ಶಿಕ್ಷಣ ಕಲಿಸಿದ ಒಬ್ಬ ವಿದ್ಯಾರ್ಥಿಗೆ ಐದು ಕ್ರೆಡಿಟ್ ಸ್ಕೋರ್ಗಳನ್ನ ನೀಡಲಾಗುತ್ತದೆ. ಆದ್ರೆ, ಕಲಿಯುವವರು ಅಕ್ಷರಸ್ಥರಾದಾಗ ಮಾತ್ರ ಸ್ಕೋರ್ ನೀಡಲಾಗುತ್ತೆ. ಅಂದ್ರೆ, ಆತ ಸಾಕ್ಷರತಾ ಪ್ರಮಾಣ ಪತ್ರವನ್ನ ಪಡೆದಾಗ ಮಾತ್ರ ವಿದ್ಯಾರ್ಥಿಗಳಿಗೆ ಕ್ರೆಡಿಟ್ ಸ್ಕೋರ್ ನೀಡಲಾಗುತ್ತದೆ.
ಯುಜಿಸಿ ಪ್ರಕಾರ, ಈ ಉಪಕ್ರಮವು ದೇಶದಲ್ಲಿ ಸಾಕ್ಷರತೆಯ ಹರಡುವಿಕೆಯನ್ನ ವೇಗಗೊಳಿಸುತ್ತದೆ. ಪ್ರಸ್ತುತ ದೇಶದಲ್ಲಿ ಸಾಕ್ಷರತೆ ಪ್ರಮಾಣ ಶೇ.78 ರಷ್ಟಿದೆ. 100 ಪರ್ಸೆಂಟ್ ಮಾಡುವ ಯೋಚನೆ ಇದ್ದು, ಇದು ಯುಜಿಸಿಯ ಉದ್ದೇಶವೂ ಹೌದು.
ಮನೆ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್: 5 ಲಕ್ಷ ಮನೆಗಳು ಅಂತಿಮ ಹಂತದಲ್ಲಿವೆ ಎಂದ ಸಿಎಂ ಬೊಮ್ಮಾಯಿ
ಫೆ.6ರಂದು ಬೆಂಗಳೂರಿಗೆ ಪ್ರಧಾನಿ ಮೋದಿ ಆಗಮನ – ಸಿಎಂ ಬಸವರಾಜ ಬೊಮ್ಮಾಯಿ