ನವದೆಹಲಿ : ಏಷ್ಯನ್ ಚಾಂಪಿಯನ್‌ಶಿಪ್ʼನಲ್ಲಿ ಕಂಚಿನ ಪದಕ ವಿಜೇತೆ ನಿಖತ್ ಜರೀನ್ (52 ಕೆಜಿ) ಅವರು ಇಸ್ತಾಂಬುಲ್‌ನಲ್ಲಿ ಸೋಮವಾರ ನಡೆದ ಐಬಿಎ ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯಶಿಪ್‌ನಲ್ಲಿ ಭಾರತಕ್ಕೆ ಮೊದಲ ಪದಕ ಗೆದ್ದುಕೊಟ್ಟಿದ್ದಾರೆ.
ಈ ವರ್ಷದ ಆರಂಭದಲ್ಲಿ ಚಿನ್ನ ಗೆದ್ದ ಪ್ರತಿಷ್ಠಿತ ಸ್ಟ್ರಾಂಡ್ಜಾ ಮೆಮೋರಿಯಲ್ ಟೂರ್ನಮೆಂಟ್‌ನಿಂದ ತನ್ನ ಅದ್ಭುತ ಓಟವನ್ನ ಮುಂದುವರಿಸಿದ ನಿಖತ್, ಇಂಗ್ಲೆಂಡ್‌ನ ಚಾರ್ಲಿ-ಸಿಯಾನ್ ಡೇವಿಸನ್ ಅವರನ್ನ 5-0 ಅಂತರದಿಂದ ಸೋಲಿಸಿದರು.
25 ವರ್ಷದ ತೆಲಂಗಾಣ ಬಾಕ್ಸರ್ ಡೇವಿಸನ್ ವಿರುದ್ಧದ ದೈಹಿಕ ಹೋರಾಟದಲ್ಲಿ ಮಿಂಚಿದ್ದು, ಮೊದಲ ಸುತ್ತಿನಲ್ಲಿ ಇಬ್ಬರೂ ಬಾಕ್ಸರ್ʼಗಳು ಒಬ್ಬರಿಗೊಬ್ಬರು ಕ್ರೂರವಾಗಿ ಆಕ್ರಮಣಕಾರಿ ಆಟ ಪ್ರದರ್ಶಿಸಿದರು. ಆದಾಗ್ಯೂ, ಮುಂದಿನ ಸುತ್ತಿನಲ್ಲಿ ನಿಖತ್ ಎದುರಾಳಿಗೆ ಭಯಾನಕ ಹೊಡೆತದಿಂದ ಕೆಂಗೆಡಿಸಿ, ವಿಜಯಶಾಲಿಯಾದ್ರು.