ನವದೆಹಲಿ: ಅಗ್ನಿವೀರ್ ಯೋಜನೆ ಅಡಿಯಲ್ಲಿ ನಮ್ಮ ನೇಮಕಾತಿ ಕ್ಯಾಲೆಂಡರ್ ಅನ್ನು ಜೂನ್ 25 ರಿಂದ ಶುರು ಮಾಡಲು ನಿರ್ಧಾರಿಸಲಾಗಿತ್ತು, ಆದರೆ ಅದು ಜೂನ್ 22 ರವರೆಗೆ ಪ್ರಾರಂಭವಾಗಲಿದೆ. ಜುಲೈ 1ಕ್ಕೆ ಕೊನೆಯಾಗಲಿದೆ ಅಂತ (ಸಿಒಪಿ), ಭಾರತೀಯ ನೌಕಾಪಡೆ ವೈಸ್ ಅಡ್ಮಿರಲ್ ದಿನೇಶ್ ಕೆ ತ್ರಿಪಾಠಿ ಹೇಳಿದ್ದಾರೆ.
ಭಾರತದಲ್ಲಿ ರಕ್ಷಣಾ ನೇಮಕಾತಿಯಲ್ಲಿ ಮೊದಲ ಬಾರಿಗೆ, ಅಗ್ನಿವೀರ್ ಯೋಜನೆಯಡಿ ಮಹಿಳಾ ನಾವಿಕರನ್ನು ನೇಮಿಸಿಕೊಳ್ಳಲಾಗುವುದು ಎಂದು ಅವರು ಇದೇ ವೇಳೇ ಹೇಳಿದರು. ಇನ್ನೂ ಈ ನೇಮಕಾತಿಯ ಮತ್ತೊಂದು ವಿಶೇಷವೆಂದರೆ, ನೌಕಾಪಡೆ, ಭೂಸೇನೆ ಮತ್ತು ವಾಯುಪಡೆಗಳಲ್ಲಿ ಮಹಿಳಾ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳಲಾಗಿದ್ದರೂ, ಇದೇ ಮೊದಲ ಬಾರಿಗೆ ಅಧಿಕಾರಿಗಳ ಶ್ರೇಣಿಗಿಂತ ಕೆಳಗಿರುವ ಸಿಬ್ಬಂದಿ (ಪಿಬಿಒಆರ್) ಪ್ರಕಾರ ಅವರನ್ನು ಸೇರಿಸಿಕೊಳ್ಳಲಾಗುವುದು ಅಂತ ಹೇಳಿದ್ದಾರೆ.
“ಅಗ್ನಿಪಥ್ ಯೋಜನೆಯ ಮೂಲಕ ನೇಮಕಗೊಳ್ಳಬೇಕಾದ ಮಹಿಳಾ ನಾವಿಕರನ್ನು ನಾವು ಇನ್ನೂ ನಿಖರವಾಗಿ ರೂಪಿಸುತ್ತಿದ್ದೇವೆ” ಎಂದು ವೈಸ್ ಅಡ್ಮಿರಲ್ ತ್ರಿಪಾಠಿ ಭಾನುವಾರ ರಕ್ಷಣಾ ಸಚಿವಾಲಯದಲ್ಲಿ ನಡೆದ ತ್ರಿ-ಸೇವಾ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು. ಅಗ್ನಿವೀರ್ ಗಳ ಮೊದಲ ಬ್ಯಾಚ್ ಈ ವರ್ಷದ ನವೆಂಬರ್ ನಲ್ಲಿ ತಮ್ಮ ತರಬೇತಿಯನ್ನು ಪ್ರಾರಂಭಿಸಲಿದೆ.
ಪ್ರಮುಖ ದಿನಾಂಕಗಳು ಹೀಗಿದೆ
ಆನ್ಲೈನ್ ನೋಂದಣಿ ಜುಲೈ 1, 2022 ರಿಂದ ಎಲ್ಲಾ ಅಭ್ಯರ್ಥಿಗಳಿಗೆ ತೆರೆದಿರುತ್ತದೆ.
ಜುಲೈ 9, 2022 ರಂದು ವಿವರವಾದ ಅಧಿಸೂಚನೆ ಹೊರಬೀಳಲಿದೆ.
ಅಗ್ನಿವೀರ್ 2022 ಬ್ಯಾಚ್ಗೆ ಅಪ್ಲಿಕೇಶನ್ ವಿಂಡೋ ಓಪನ್: ಜುಲೈ 15-30, 2022ರ ತನಕ ಇರಲಿದೆ
ಪರೀಕ್ಷೆ ಮತ್ತು ದೈಹಿಕ ಸಾಮರ್ಥ್ಯ ಪರೀಕ್ಷೆಗಳು: ಅಕ್ಟೋಬರ್ ಮಧ್ಯಭಾಗ, 2022
ವೈದ್ಯಕೀಯ ತಪಾಸಣೆ ಮತ್ತು ಸೇರ್ಪಡೆ ಐಎನ್ಎಸ್ ಚಿಲ್ಕಾದಲ್ಲಿ : ನವೆಂಬರ್ 21, 2022 ರಿಂದ ಆರಂಭ
New avenues of growth will open up for an #Agniveer after 4 years of #Agnipath yojana! #BharatKeAgniveer pic.twitter.com/1XVlpaE7nO
— MyGovIndia (@mygovindia) June 19, 2022