ನವದೆಹಲಿ : ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL) ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ (CMD) ಮುಖೇಶ್ ಅಂಬಾನಿ ಅವ್ರು ಕಳೆದ ಹಣಕಾಸು ವರ್ಷದಲ್ಲಿ ಸತತ ಎರಡನೇ ವರ್ಷವೂ ತಮ್ಮ ಕಂಪನಿ ಆರ್‌ಐಎಲ್‌ನಿಂದ ಯಾವುದೇ ವೇತನವನ್ನ ಪಡೆದಿಲ್ಲ. ಯಾಕಂದ್ರೆ, ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಸ್ವಯಂಪ್ರೇರಿತರಾಗಿ ವೇತನವನ್ನ ತ್ಯಜಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

ತನ್ನ ಇತ್ತೀಚಿನ ವಾರ್ಷಿಕ ವರದಿಯ ಪ್ರಕಾರ, 2020-21ರ ಹಣಕಾಸು ವರ್ಷದಲ್ಲಿ ಮುಕೇಶ್ ಅಂಬಾನಿ ಅವ್ರ ಸಂಭಾವನೆ “ಶೂನ್ಯ” ಎಂದು ರಿಲಯನ್ಸ್ ಹೇಳಿದೆ. ಜೂನ್ 2020ರಲ್ಲಿ, ಆರ್‌ಐಎಲ್‌ನಿಂದ ಸಿಎಂಡಿ ಸ್ವಯಂಪ್ರೇರಿತವಾಗಿ ಭಾರತದಲ್ಲಿ ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಹಣಕಾಸು ವರ್ಷ 20-21ರ ತಮ್ಮ ವೇತನವನ್ನ ತ್ಯಜಿಸಲು ನಿರ್ಧರಿಸಿದರು. ಇದು ದೇಶದ ಸಾಮಾಜಿಕ, ಆರ್ಥಿಕ ಮತ್ತು ಕೈಗಾರಿಕಾ ಆರೋಗ್ಯದ ಮೇಲೆ ಭಾರಿ ಪರಿಣಾಮ ಬೀರಿತು. 2021-22ನೇ ಹಣಕಾಸು ವರ್ಷದಲ್ಲಿಯೂ ತಮ್ಮ ಸಂಬಳವನ್ನ ತ್ಯಜಿಸಿದ್ದಾರೆ.

ಈ ಎರಡೂ ವರ್ಷಗಳಲ್ಲಿ, ಅಂಬಾನಿ ಸಿಎಂಡಿಯಾಗಿ ತಮ್ಮ ಪಾತ್ರಕ್ಕಾಗಿ ರಿಲಯನ್ಸ್‌ನಿಂದ ಯಾವುದೇ ಭತ್ಯೆಗಳು, ಪರ್ಕ್ವಿಸೈಟ್‌, ನಿವೃತ್ತ ಪ್ರಯೋಜನಗಳು, ಕಮಿಷನ್ ಅಥವಾ ಸ್ಟಾಕ್ ಆಯ್ಕೆಗಳನ್ನ ಪಡೆದಿಲ್ಲ. ಅಂದ್ಹಾಗೆ,
2008-09ರಿಂದ ಅಬಾನಿ ವೇತನವನ್ನ 15 ಕೋಟಿ ರೂ.ಗೆ ಮಿತಿಗೊಳಿಸಲಾಗಿದೆ. ಹಣಕಾಸು ವರ್ಷ 19-20 ರಲ್ಲಿ 15 ಕೋಟಿ ರೂ.ಗಳ ವೇತನವು ಹಿಂದಿನ 11 ವರ್ಷಗಳಂತೆಯೇ ಇತ್ತು.

Share.
Exit mobile version