ಬೆಂಗಳೂರು : ರಾಜ್ಯದಲ್ಲಿ 340 ಆ್ಯಂಬುಲೆನ್ಸ್ ಗಳನ್ನು ಗುಜರಿಗೆ ತಳ್ಳಿರುವುದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅವರ ಕೈಯಲ್ಲಿ ಅರೋಗ್ಯ ಇಲಾಖೆಯೇ ಗುಜರಿಗೆ ಹೋಗುವ ಸ್ಥಿತಿ ತಲುಪಿದೆ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್,108 ಅಂಬುಲೆನ್ಸ್‌ಗಳಿಗೇ ತುರ್ತು ಚಿಕಿತ್ಸೆ ಅಗತ್ಯವಿದೆ, ಆರೋಗ್ಯ ಇಲಾಖೆಯೇ ಭ್ರಷ್ಟಾಚಾರದ ಸೋಂಕಿನಿಂದ ಅನಾರೋಗ್ಯ ಪೀಡಿತವಾಗಿದೆ. 108 ಆಂಬುಲೆನ್ಸ್ ಸೇವೆ ಅವ್ಯವಸ್ಥೆಯ ಕೂಪವಾಗಿದೆ. ಈಗ 340 ಆಂಬುಲೆನ್ಸ್‌ಗಳನ್ನು ಗುಜರಿಗೆ ತಳ್ಳಿರುವುದು ಸುಧಾಕರ್ ಅವರ ಕೈಯ್ಯಲ್ಲಿ ಆರೋಗ್ಯ ಇಲಾಖೆಯೇ ಗುಜರಿಗೆ ಹೋಗುವ ಸ್ಥಿತಿಗೆ ತಲುಪಿದೆ ಎಂದು ಕಿಡಿಕಾರಿದೆ.
40% ಸರ್ಕಾರದಲ್ಲಿ ಬಡ್ತಿಗೆ ಹಣವೇ ಅರ್ಹತೆ! ಹಣವೊಂದಿದ್ದರೆ ಆರೋಗ್ಯ ಇಲಾಖೆಯಲ್ಲಿ ಅನರ್ಹರಿಗೆ ಬಡ್ತಿ ಸಿಗಲಿದೆ. ಸಚಿವ ಸುಧಾಖರ್ ಕೂಡ ಅರ್ಹತೆ ಇಲ್ಲದ ಸಚಿವ, ಅವರು ನೇಮಿಸುವ ನಿರ್ದೇಶಕರೂ ಅನರ್ಹರಾಗಿರುತ್ತಾರೆ. ರಾಜಕೀಯ ಹೇಳಿಕೆ ನೀಡಲು ಮುಂದೆ ಬರುವ ಸಚಿವರಿಗೆ ಎಕ್ಸ್ ರೇ ಸಿಬ್ಬಂದಿಗಳ ಪ್ರತಿಭಟನೆಯನ್ನು ನಿಭಾಯಿಸಲಾಗದಿರುವುದೇಕೆ? ಎಂದು ವಾಗ್ದಾಳಿ ನಡೆಸಿದೆ.
BIGG NEWS : ಬೆಳಗಾವಿ ಜಿಲ್ಲಾ ಬಿಜೆಪಿಯಲ್ಲಿ ಯಾವುದೇ ಬಣ ರಾಜಕೀಯ ಇಲ್ಲ : ಅರುಣ್ ಸಿಂಗ್ ಹೇಳಿಕೆ