ಬೆಂಗಳೂರು: ವಿವಾಹಿತ ಹೆಣ್ಣು ಮಕ್ಕಳಿಗೆ ಪರಿಹಾರದಲ್ಲೂ ಹಕ್ಕಿದೆ ಅಂತ ರಾಜ್ಯ ಹೈಕೋರ್ಟ್ ತೀರ್ಪು ನೀಡಿದೆ. ನ್ಯಾಯಮೂರ್ತಿಗಳಾದ ಹೆಚ್.ಪಿ.ಸಂದೇಶ್ ಅವರಿದ್ದ ಏಕ ಸದ್ಯಸ ಪೀಠ ಈ ಆದೇಶವನ್ನು ನೀಡಿದೆ. ಇದೇ ವೇಳೆ ನ್ಯಾಯಾಪೀಠ ವಿವಾಹಿತ ಹೆಣ್ಣುಮಕ್ಕಳು ಸಹ ವಿಮಾ ಕಂಪನಿಯಿಂದ ಮರಣದ ನಂತರ ಎಲ್ಲಾ ತಲೆಗಳಿಗೆ ಪರಿಹಾರವನ್ನು ಪಡೆಯಲು ಅರ್ಹರಾಗಿರುತ್ತಾರೆ ಎಂದು ಹೇಳಿದೆ.
2014ರ ಮೇ 9ರಂದು ಮೋಟಾರು ಅಪಘಾತಗಳ ಕ್ಲೇಮ್ ಟ್ರಿಬ್ಯೂನಲ್ ನೀಡಿದ ಆದೇಶವನ್ನು ಪ್ರಶ್ನಿಸಿ ರಿಲಯನ್ಸ್ ಜನರಲ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿದ ನ್ಯಾಯಮೂರ್ತಿ ಎಚ್.ಪಿ.ಸಂದೇಶ್ ಅವರಿದ್ದ ಏಕಸದಸ್ಯ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಮೃತರ ಕಾನೂನುಬದ್ಧ ಪ್ರತಿನಿಧಿಗಳು ಪರಿಹಾರಕ್ಕಾಗಿ ಅರ್ಜಿ ಸಲ್ಲಿಸುವ ಹಕ್ಕನ್ನು ಹೊಂದಿದ್ದಾರೆ ಅಂತ ನ್ಯಾಯಾಪೀಠ ಹೇಳಿದ್ದು, ಮೃತನ ಪ್ರಮುಖ ವಿವಾಹಿತ ಮತ್ತು ಸಂಪಾದನೆಯ ಮಕ್ಕಳು ಸಹ ಕಾನೂನುಬದ್ಧ ಪ್ರತಿನಿಧಿಗಳಾಗಿದ್ದು, ಪರಿಹಾರಕ್ಕಾಗಿ ಅರ್ಜಿ ಸಲ್ಲಿಸುವ ಹಕ್ಕನ್ನು ಹೊಂದಿರುತ್ತಾರೆ ಅಂತ ತಿಳಿಸಿದೆ.