ಬೆಂಗಳೂರು: ರಾಜ್ಯ ಸರ್ಕಾರದಿಂದ ( Karnataka Government ) ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸೋ ಸಲುವಾಗಿ, 11 ಐಪಿಎಸ್ ಹಾಗೂ 8 ಐಎಎಸ್ ಅಧಿಕಾರಿಗಳನ್ನು ( IPS, IAS Officer Transfer ) ವರ್ಗಾವಣೆ ಮಾಡಿ ಆದೇಶಿಸಿದೆ.

ಈ ಕುರಿತಂತೆ ರಾಜ್ಯ ಸರ್ಕಾರದಿಂದ ಅಧಿಸೂಚನೆ ಹೊರಡಿಸಲಾಗಿದ್ದು, ಐಪಿಎಸ್ ಅಧಿಕಾರಿ ( IPS Officer ) ಮಾಲಿನಿ ಕೃಷ್ಣಮೂರ್ತಿ ಅವರನ್ನು ಬೆಂಗಳೂರಿನ ಆಂತರೀಕ ವಿಭಾಗ ಎಡಿಜಿಪಿಯಾಗಿ ವರ್ಗಾವಣೆ ಮಾಡಲಾಗಿದೆ.

ಬೆಂಗಳೂರಿನ ಎಸಿಬಿ ಎಡಿಜಿಪಿಯಾಗಿದ್ದಂತ ಸೀಮಂತ್ ಕುಮಾರ್ ಸಿಂಗ್ ಅವರನ್ನು ವರ್ಗಾವಣೆ ಮಾಡಿ, ಬೆಂಗಳೂರಿನ ಕೆ ಎಸ್ ಆರ್ ಪಿ ಎಡಿಜಿಪಿ ಆಗಿ ನೇಮಿಸಲಾಗಿದೆ. ಕೆಎಸ್ ಆರ್ ಪಿಯ ಎಡಿಜಿಪಿ ರವಿ ಎಸ್ ಅವರನ್ನು ಬೆಂಗಳೂರಿನ ಪಿ ಸಿ ಎ ಎಸ್ ಐಜಿಪಿಯನ್ನಾಗಿ ವರ್ಗಾವಣೆ ಮಾಡಲಾಗಿದೆ.

ಹುದ್ದೆ ನಿರೀಕ್ಷೆಯಲ್ಲಿದ್ದಂತ ಅಜಯ್ ಹೀಲೋರಿ ಅವರನ್ನು ಡಿಸಿಆರ್ ಇ ಯ ಎಸ್ಪಿಯಾಗಿ ನೇಮಿಸಲಾಗಿದೆ. ಬೆಂಗಳೂರಿನ ಎಸಿಬಿಯ ಎಸ್ಪಿಯಾಗಿದ್ದಂತ ಯತೀಶ್ ಚಂದ್ರ ಜಿ ಹೆಚ್ ಅವರನ್ನು ಕ್ರೈಂ-3 ವಿಭಾಗದ ಡಿಸಿಪಿಯಾಗಿ ನೇಮಿಸಿದೆ.

ಕಲಬುರ್ಗಿಯ ಎಸಿಬಿಯ ಎಸ್ಪಿಯಾಗಿದ್ದಂತ ಅಮರನಾಥ್ ರೆಡ್ಡಿ ವೈ ಅವರನ್ನು ಕಲಬುರ್ಗಿಯ ಗುಪ್ತಚರ ವಿಭಾಗದ ಎಸ್ಪಿಯಾಗಿ ನೇಮಿಸಲಾಗಿದೆ. ಬಳ್ಳಾರಿಯ ಎಸಿಬಿ ಎಸ್ಪಿ ಶ್ರೀಹರಿ ಬಾಬು ಬಿಎಲ್ ಅವರನ್ನು ಕರ್ನಾಟಕ ಲೋಕಾಯುಕ್ತ ಎಸ್ಪಿಯಾಗಿ ನೇಮಕ ಮಾಡಿದೆ.

2016ನೇ ಕರ್ನಾಟಕ ಕೇಟರ್ ಐಪಿಎಸ್ ಅಧಿಕಾರಿ ಶ್ರೀಹರಿ ಬಾಬು ಬಿಎಲ್ ಅವರನ್ನು ಬಳ್ಳಾರಿಯ ಎಸಿಬಿ ಎಸ್ಪಿಯಿಂದ ವರ್ಗಾವಣೆ ಮಾಡಿ, ಕರ್ನಾಟಕ ಲೋಕಾಯುಕ್ತ ಎಸ್ಪಿಯನ್ನಾಗಿ ನೇಮಕ ಮಾಡಲಾಗಿದೆ. ಬೆಂಗಳೂರು ಎಸಿಬಿಯ ಎಸ್ಪಿಯಾಗಿದ್ದಂತ ಡಾ.ಶೋಭಾರಾಣಿ ವಿ ಜೆ ಅವರನ್ನು ವರ್ಗಾವಣೆ ಮಾಡಿ ಬಿಎಂಟಿಎಫ್ ಎಸ್ಪಿಯನ್ನಾಗಿ ನೇಮಕ ಮಾಡಲಾಗಿದೆ.

ಮೈಸೂರು ವಿಭಾಗದ ಎಸಿಬಿ ಎಸ್ಪಿಯಾಗಿದ್ದಂತ ಸಜೀತ್ ವಿಜೆ ಅವರನ್ನು ಕರ್ನಾಟಕ ಲೋಕಾಯುಕ್ತ ( Karnataka Lokayukta ) ಎಸ್ಪಿಯನ್ನಾಗಿ ನೇಮಿಸಿದೆ. ರಾಂ ಎಲ್ ಅರಶಿದ್ದಿ ಅವರನ್ನು ವಿಜಯಪುರ ಜಿಲ್ಲೆಯ ಹೆಚ್ಚುವರಿ ಎಸ್ಪಿಯಿಂದ ವರ್ಗಾವಣೆ ಮಾಡಿ ಕರ್ನಾಟಕ ಲೋಕಾಯುಕ್ತ ಎಸ್ಪಿಯನ್ನಾಗಿ ನೇಮಿಸಿದೆ. ಬೆಳಗಾವಿಯ ಎಸಿಬಿ ಎಸ್ಪಿ ಬಾಬಸಾಬ್ ನೇಮಗೌಡ ಅವರನ್ನು ಬೆಳಗಾವಿಯ ಗುಪ್ತಚರದ ಎಸ್ಪಿಯಾಗಿ ವರ್ಗಾವಣೆ ಮಾಡಿ ಆದೇಶಿಸಲಾಗಿದೆ.

8 ಐಎಎಸ್ ಅಧಿಕಾರಿಗಳ ವರ್ಗಾವಣೆ

ಇನ್ನೂ ರಾಜ್ಯ ಸರ್ಕಾರವು ಇಂದು ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ಎನ್ನುವಂತೆ ಐಪಿಎಸ್ ಅಧಿಕಾರಿಗಳ ಬೆನ್ನಲ್ಲೇ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶಿಸಿದೆ.

ಹುದ್ದೆಯ ನಿರೀಕ್ಷೆಯಲ್ಲಿದ್ದಂತ 2008ರ ಕರ್ನಾಟಕ ಕೇಡರ್ ಐಎಎಸ್ ಅಧಿಕಾರಿ ಶೆಟ್ಟೆಣ್ಣನವರ್ ಎಸ್ ಬಿ ಅವರನ್ನು ಹಟ್ಟಿ ಗೋಲ್ಡ್ ಮೈನಿಂಗ್ ನ ಎಂಡಿ ಆಗಿ ನೇಮಕ ಮಾಡಲಾಗಿದೆ. ಮಂಜುನಾಥ್ ಜೆ ಅವರನ್ನು ಆರೋಗ್ಯ ಇಲಾಖೆಯ ಜಂಟಿ ಕಾರ್ಯದರ್ಶಿಯನ್ನಾಗಿ ನೇಮಿಸಿದೆ.

ರಾಜ್ಯದಲ್ಲಿ ಪ್ರೌಢ ಶಾಲೆಗಳನ್ನು ಉನ್ನತೀಕರಣ: 29 ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾರಂಭ

ಅನ್ನೀಸ್ ಕಣ್ಮಿ ಜೋಯ್ ಅವರನ್ನು ಬೆಂಗಳೂರಿನ ಕಮರ್ಷಿಯಲ್ ಟ್ಯಾಕ್ ನ ಹೆಚ್ಚುವರಿ ಕಮೀಷನರ್ ಆಗಿ ನೇಮಿಸಿದೆ. ಹುದ್ದೆಯ ನಿರೀಕ್ಷೆಯಲ್ಲಿದ್ದಂತ ಚಾರುಲತಾ ಸೋಮಲ್ ಅವರನ್ನು ನವದೆಹಲಿಯ ಕರ್ನಾಟಕ ಭವನದ ಎಆರ್ ಸಿ ಆಗಿ ನೇಮಿಸಿದೆ.

ಹುದ್ದೆಯ ನಿರೀಕ್ಷೆಯಲ್ಲಿದ್ದಂತ ಐಎಎಸ್ ಅಧಿಕಾರಿ ಬಸವರಾಜೇಂದ್ರ ಹೆಚ್ ಅವರನ್ನು ಸ್ಕಿಲ್ ಡೆಲವೆಲಪ್ ಮೆಂಟ್, ಎಂಟರ್ ಪ್ರೈನರ್ ಮತ್ತು ಲೈವ್ಲಿ ಹುಡ್ ಇಲಾಖೆಯ ಜಾಯಿಂಟ್ ಸೆಕ್ರೇಟರಿಯಾಗಿ ನೇಮಕ ಮಾಡಿದೆ.

ರಾಜೀವ್ ಗಾಂಧಿ ವಿವಿಯ ರಿಜಿಸ್ಟರ್ ಆಗಿದ್ದಂತ ರವಿಕುಮಾರ್ ಎಂ ಆರ್ ಅವರನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯನ್ನಾಗಿ ನೇಮಕ ಮಾಡಿದೆ. ಇಲ್ಲಿದ್ದಂತ ಡಾ. ಕುಮಾರ ಅವರನ್ನು ವರ್ಗಾವಣೆ ಮಾಡಿದೆ.

ಡಾ.ವಾಸಂತಿ ಅಮರ್ ಬಿವಿ, ಕೆ ಎಸ್ ಎಂ ಸಿ ಎಲ್ ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಹುದ್ದೆಯಿಂದ ಬೆಂಗಳೂರು ನಗರ ನಾರ್ಥ್ ವಿಭಾಗದ ವಿಶೇಷ ಡೆಪ್ಯೂಟಿ ಕಮೀಷನರ್ ಆಗಿ ನೇಮಕ ಮಾಡಲಾಗಿದೆ.

ವರದಿ: ವಸಂತ ಬಿ ಈಶ್ವರಗೆರೆ

Share.
Exit mobile version