ಬೆಂಗಳೂರು : ಸಿಎನ್ ಜಿ (CNG) ವಾಹನ ಮಾಲೀಕರಿಗೆ ಕರ್ನಾಟಕ ಸಾರಿಗೆ ಇಲಾಖೆ ಮಹತ್ವದ ಮಾಹಿತಿಯೊಂದನ್ನು ನೀಡಿದ್ದು, ರಾಜ್ಯದ ಎಲ್ಲಾ ಸಿಎನ್‌ಜಿ ವಾಹನ ಮಾಲೀಕರು ತಮ್ಮ ವಾಹನಗಳ ಸಿಲಿಂಡರ್‌ಗಳಿಗೆ ಕಡ್ಡಾಯ ಸುರಕ್ಷತಾ ಪರೀಕ್ಷೆಗಳನ್ನು ಮಾಡಿಸಬೇಕು ಎಂದು ಸಾರಿಗೆ ಇಲಾಖೆ ಸುತ್ತೋಲೆ ಹೊರಡಿಸಿದೆ.
ವಾಹನ ಮಾಲೀಕರು ಮೂರು ವರ್ಷಗಳಿಗೊಮ್ಮೆ ಪ್ರತಿಯೊಂದು ಸಿಲಿಂಡರ್ ಅನ್ನು ಹೈಡ್ರೋಸ್ಟಾಟಿಕ್ ಸ್ಟ್ರೆಚ್ ಪರೀಕ್ಷೆಗಳನ್ನು ನಡೆಸುವುದು ಕಡ್ಡಾಯ ಎಂದು ಸಾರಿಗೆ ಇಲಾಖೆ ತಿಳಿಸಿದೆ.
ಕೇಂದ್ರದ ಗ್ಯಾಸ್ ಸಿಲಿಂಡರ್ ನಿಯಮಗಳು 2016ರ ಪ್ರಕಾರ, ಬಿಐಎಸ್ ಮಾನದಂಡಗಳು 154975 ಮತ್ತು ಬಿಐಎಸ್ 8481 ಮಾನದಂಡಗಳ ಪ್ರಕಾರ ಸಿಲಿಂಡರ್ ನ ಜೀವಿತಾವಧಿ 20 ವರ್ಷಗಳಾಗಿದ್ದು ಪ್ರತಿ ಮೂರು ವರ್ಷಗಳಿಗೊಮ್ಮೆ ಸಿಲಿಂಡರ್ ಗಳ ಹೈಡ್ರೋಸ್ಟಾಟಿಕ್ ಸ್ಟ್ರೆಚ್ ಪರೀಕ್ಷೆಯನ್ನು ನಡೆಸುವುದು ಕಡ್ಡಾಯವಾಗಿದೆ.
BREAKING NEWS : ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಆಸ್ಟ್ರೇಲಿಯಾದ `ಆರೋನ್ ಫಿಂಚ್’ ವಿದಾಯ ಘೋಷಣೆ