ಬೆಂಗಳೂರು : ಬೆಂಗಳೂರಿನಲ್ಲಿ ಮತದಾರ ಪಟ್ಟಿ ಪರಿಷ್ಕರಣೆ ಅಕ್ರಮ ಪ್ರಕರಣದಲ್ಲಿ ಚಿಲುಮೆ ಸಂಸ್ಥೆಯ ಮುಖ್ಯಸ್ಥನೊಂದಿಗೆ ಸಚಿವ ಅಶ್ವತ್ಥ್ ನಾರಾಯಣ ಅವರ ಸಂಪರ್ಕ ಇದೆ ಎಂದು ರಾಜ್ಯ ಕಾಂಗ್ರೆಸ್ ಆರೋಪ ಮಾಡಿದೆ.

ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, ಚಿಲುಮೆ ಸಂಸ್ಥೆಗೆ 2018ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ನಂದೀಶ್ ರೆಡ್ಡಿ ಕಡೆಯಿಂದ ಹಣ ಸಂದಾಯವಾಗಿದೆ. ಹಾಗೂ ಸಂಸ್ಥೆಯ ಮುಖ್ಯಸ್ಥನೊಂದಿಗೆ ಅಶ್ವಥ್ ನಾರಾಯಣ ಅವರ ಸಂಪರ್ಕವಿದೆ. ಬಿಜೆಪಿಯ ನಾಯಕರೊಂದಿಗೆ ಚಿಲುಮೆ ಸಂಸ್ಥೆಗೆ ನೇರ ಸಂಪರ್ಕವಿರುವುದು ಜಗಜ್ಜಾಹೀರು. ಹೀಗಿರುವಾಗ ಅದೇ ಸಂಸ್ಥೆಯ “ಉಚಿತ ಸೇವೆ”ಗೆ ಸರ್ಕಾರ ಒಪ್ಪಿಗೆ ಕೊಟ್ಟಿದ್ದೇಕೆ? ಎಂದು ಪ್ರಶ್ನಿಸಿದೆ.

ಮತದಾರರ ಮಾಹಿತಿ ಕದ್ದ ಚಿಲುಮೆ ಸಂಸ್ಥೆಯ ಕೆಲಸಗಾರರನ್ನು ಬಂಧಿಸಿ ಕಣ್ಣೊರೆಸುತ್ತಾ ಕಿಂಗ್ ಪಿನ್‌ಗಳ ರಕ್ಷಣೆಗೆ ನೀತಿರುವವರು ಯಾರು? ಚಿಲುಮೆಗೆ ಯಾರ ಒಲುಮೆ? ಬರ್ತ್‌ಡೇ ಪಾರ್ಟಿಗೆ ಹೋಗಿದ್ದ ಕ್ಯಾಷ್‌ಲ್ಲೇ ಅಭಿವೃದ್ಧಿಯಾದ ಸಚಿವರೇ? ಜನಕ್ರೋಶದಿಂದ ಖಾಲಿ ಕುರ್ಚಿ ದರ್ಶನ ಪಡೆಯುತ್ತಿರುವ ಬಿಜೆಪಿ ಮತದಾರರನ್ನೇ ಖಾಲಿ ಮಾಡಿಸುವ ಹುನ್ನಾರ ನಡೆಸಿದೆ ಎಂದು ವಾಗ್ದಾಳಿ ನಡೆಸಿದೆ.

Share.
Exit mobile version