ಬೆಂಗಳೂರು: ಒಂದು ವೇಳೆ ಆರೋಪಿ ಮೃತಪಟ್ಟರೆ ಆತನ ಆಸ್ತಿ ಅಥವಾ ವಾರಸುದಾರರಿಂದ ದಂಡ ವಸೂಲಿ ಮಾಡಬೋದು ಎಂದು ರಾಜ್ಯ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಹಾಸನದ ದಿವಂಗತ ತೋತಿಲ್ ಗೌಡ ಸಲ್ಲಿಸಿದ್ದ ಅರ್ಜಿಯನ್ನ ನ್ಯಾಯಮೂರ್ತಿ ಶಿವಶಂಕರ್ ಅಮರಣ್ಣವರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು. ಅಂದ್ಹಾಗೆ, ಅವ್ರು ಬದುಕಿದ್ದಾಗ ಈ ಅರ್ಜಿಯನ್ನ ಸಲ್ಲಿಸಿದ್ದರು.
ಆರೋಪಿಯ ಸಾವಿನಪ್ಪಿದ್ದರು, ನ್ಯಾಯಾಲಯದ ಆದೇಶದ ಪ್ರಕಾರ ದಂಡವನ್ನ ಪಾವತಿಸುವ ಹೊಣೆಗಾರಿಕೆಯಿಂದ ಅರ್ಜಿದಾರರಿಗೆ ವಿನಾಯಿತಿ ನೀಡಲಾಗುವುದಿಲ್ಲ ಎಂದು ನ್ಯಾಯಪೀಠ ಹೇಳಿದೆ.
ಅರ್ಜಿದಾರರ ಮರಣದ ನಂತರ, ಪ್ರಕರಣವನ್ನ ಮುಂದುವರಿಸಲು ಕುಟುಂಬದ ಯಾವುದೇ ಸದಸ್ಯರು ಅರ್ಜಿಯನ್ನ ಸಲ್ಲಿಸಿಲ್ಲ. ದಿವಂಗತ ತೋಟಿಲ್ ಗೌಡ ಅವರ ವಕೀಲರು ಕಾನೂನುಬದ್ಧ ಉತ್ತರಾಧಿಕಾರಿ ಅರ್ಜಿಯನ್ನ ಮುಂದುವರಿಸಲು ಬಯಸುವುದಿಲ್ಲ ಎಂದು ಸಲ್ಲಿಸಿದರು. ಹೀಗಾಗಿ ಆಸ್ತಿಯ ವಾರಸುದಾರರು ದಂಡವನ್ನ ಪಾವತಿಸಬೇಕು ಎಂದು ನ್ಯಾಯಪೀಠ ಹೇಳಿದೆ.
2011ರ ಡಿಸೆಂಬರ್ 12ರಂದು ಹಾಸನದ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ಅರ್ಜಿದಾರ ದಿವಂಗತ ತೋತಿಲ್ ಗೌಡ ಅವರಿಗೆ ವಿದ್ಯುತ್ ಕಾಯ್ದೆಯಡಿ 29,204 ರೂ.ಗಳ ದಂಡ ವಿಧಿಸಿತ್ತು.
ತೋತಿಲ್ ಗೌಡ ಹೈಕೋರ್ಟ್’ನಲ್ಲಿ ಮೇಲ್ಮನವಿ ಸಲ್ಲಿಸಿ ವಿಚಾರಣಾ ನ್ಯಾಯಾಲಯದ ಆದೇಶವನ್ನ ಪ್ರಶ್ನಿಸಿದರು. ಆದ್ರೆ, ಹೈಕೋರ್ಟ್’ನಲ್ಲಿ ಅರ್ಜಿಯ ವಿಚಾರಣೆಯ ಸಮಯದಲ್ಲಿ ತೋತಿಲ್ ಗೌಡ ನಿಧನರಾದರು.
ಅರ್ಜಿದಾರರ ಸಾವಿನ ಹಿನ್ನೆಲೆಯಲ್ಲಿ ಹೈಕೋರ್ಟ್ ಮೇಲ್ಮನವಿ ಅರ್ಜಿಯನ್ನ ವಜಾಗೊಳಿಸಿದೆ. ದಂಡದ ಮೊತ್ತವನ್ನ ಅಪರಾಧಿಯ ಆಸ್ತಿಯಿಂದ ಅಥವಾ ಆಸ್ತಿಯ ವಾರಸುದಾರರಿಂದ ವಸೂಲಿ ಮಾಡಲು ನ್ಯಾಯಾಲಯ ಆದೇಶಿಸಿದೆ.
BIGG NEWS: ‘ಅದಾನಿ ಗ್ರೂಪ್’ ವಿರುದ್ಧದ ವಂಚನೆ ಆರೋಪಗಳ ಕುರಿತು ತನಿಖೆಗೆ ಪ್ರತಿಪಕ್ಷಗಳು ಆಗ್ರಹ
BREAKING NEWS : ಶೋಧ ಕಾರ್ಯಾಚರಣೆ ವೇಳೆ ‘IED’ ಸ್ಫೋಟ, ಮೂವರು ‘CRPF’ ಯೋಧರಿಗೆ ಗಂಭೀರ ಗಾಯ |IED Blast