ಮೈಸೂರು : ನನ್ನ ಅಧಿಕಾರವಧಿಯಲ್ಲಿ ಪಿಎಸ್ ಐ ನೇಮಕಾತಿ ಹಗರಣ ಆಗಿದ್ದರೆ ತನಿಖೆ ಆಗಲಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ  ರಾಜ್ಯ ಬಿಜೆಪಿ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಅವಧಿಯಲ್ಲಿ ಪಿಎಸ್ ಐ ನೇಮಕಾತಿ ಹಗರಣ ಆಗಿದ್ದರೆ ತನಿಖೆ ಆಗಲಿ, ತನಿಖೆ ಮಾಡಿಸದೇ ಬಿಜೆಪಿಯವರು ಮೂರುವರೆ ವರ್ಷದಿಂದ ಏನು ಮಾಡಿದ್ದರು. ಬಿಜೆಪಿಯರು ಯಾಕೇ ಪದೇಪದೆ ಆರೋಪ ಮಾಡುತ್ತಿದ್ದಾರೆ ಎಂದರು.

BIGG NEWS: ಸಿದ್ದರಾಮಯ್ಯಗೆ ತಾಕತ್ತಿದ್ದರೆ ಮಾಧುಸ್ವಾಮಿ ವಿರುದ್ಧ ನಿಲ್ಲಲಿ: ವೈ.ಎ ನಾರಾಯಣಸ್ವಾಮಿ ಸವಾಲ್‌

ಬಸ್ ಯಾತ್ರೆಗೆ ಇನ್ನೂ ದಿನಾಂಕ ನಿಗದಿಯಾಗಿಲ್ಲ. ಯಾತ್ರೆಗೆ ಬಸ್ ಸಿದ್ದವಾಗುತ್ತಿದ್ದು, ನಾನೊಂದು ಟೀಂ, ಡಿ.ಕೆ. ಶಿವಕುಮಾರ್ ಒಂದು ಟೀಂ ಹೋಗಿ ಪ್ರಚಾರ ಮಾಡುತ್ತೇವೆ. ಬಸ್ ಯಾತ್ರಗೆ ದಿನಾಂಕ ನಿಗದಿಗೆ ನಾನೇನು ಜ್ಯೋತಿಷ್ಯ ನೋಡಲ್ಲ ಎಂದಿದ್ದಾರೆ. ರಾಜ್ಯ ವಿಧಾನಸಭೆ ಚುನಾವಣೆಗೆ ಶೀಘ್ರವೇ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುತ್ತೇವೆ. ನವೆಂಬರ್ ಕೊನೆ ವಾರ ಅಥವಾ ಡಿಸೆಂಬರ್ ಮೊದಲ ವಾರ ಬಿಡುಗಡೆ ಮಾಡುತ್ತೇವೆ ಎಂದು ಹೇಳಿದ್ದಾರೆ.

BIGG NEWS : ಶೀಘ್ರವೇ ಕಾಂಗ್ರೆಸ್ ನ ಬಸ್ ಯಾತ್ರೆಗೆ ದಿನಾಂಕ ನಿಗದಿ : ಮಾಜಿ ಸಿಎಂ ಸಿದ್ದರಾಮಯ್ಯ

 

Share.
Exit mobile version