ನವದೆಹಲಿ : ಪೂರ್ವ ದೆಹಲಿಯ ಜನನಿಬಿಡ ಹೂವಿನ ಮಾರುಕಟ್ಟೆಯಲ್ಲಿ ಬಿಟ್ಟುಹೋದ ಚೀಲದಲ್ಲಿ 3 ಕೆಜಿ ತೂಕದ ಬಾಂಬ್ ಪತ್ತೆಯಾಗಿದ್ದು, ಅದು ಗರಿಷ್ಠ ಹಾನಿ ಉಂಟು ಮಾಡುವ ಸಾಮರ್ಥ್ಯ ಹೊಂದಿತ್ತು ಎನ್ನಲಾಗ್ತಿದೆ. ಗಾಜಿಪುರ ಮಾರುಕಟ್ಟೆಯಲ್ಲಿ ಇರಿಸಲಾದ ಬಾಂಬ್ ನಿಷ್ಕ್ರಿಯಗೊಳಿಸಲು ಪೊಲೀಸರು ನಿಯಂತ್ರಿತ ಸ್ಫೋಟ ನಡೆಸಿದ್ರು. ಇದು ದೊಡ್ಡ ಸ್ಫೋಟ ಮತ್ತು ಹೊಗೆಗೆ ಕಾರಣವಾಯ್ತು.
ದೆಹಲಿ ಮತ್ತು ಉತ್ತರ ಪ್ರದೇಶದ ಗಡಿಯ ಬಳಿ ಇರುವ ಮಾರುಕಟ್ಟೆಯಲ್ಲಿ ನಿಯಂತ್ರಿತ ಸ್ಫೋಟವನ್ನ ನಡೆಸಲು ಎಂಟು ಅಡಿ ಗುಂಡಿಯನ್ನ ಅಗೆಯಲಾಯಿತು. ಮಾರುಕಟ್ಟೆಯ ಬಳಿ ದೊಡ್ಡ ಸ್ಫೋಟ ಮತ್ತು ಹೊಗೆ ಏಳುವುದನ್ನ ದೃಶ್ಯ ತೋರಿಸುತ್ತಿದೆ.
ಸುಧಾರಿತ ಸ್ಫೋಟಕ ಸಾಧನ (ಐಇಡಿ) ಅಥವಾ ಕಚ್ಚಾ ಬಾಂಬ್ʼನ್ನ ಗ್ರಾಹಕರೊಬ್ಬರು ಬಿಟ್ಟುಹೋದ ಚೀಲದೊಳಗೆ ಇರಿಸಲಾಗಿದೆ ಎಂದು ದೆಹಲಿ ಪೊಲೀಸ್ ಆಯುಕ್ತ ರಾಕೇಶ್ ಅಸ್ತಾನಾ ತಿಳಿಸಿದ್ದಾರೆ. ಜನವರಿ 26ರ ಗಣರಾಜ್ಯೋತ್ಸವಕ್ಕೆ ಮುಂಚಿತವಾಗಿ ಇದು ಭಯೋತ್ಪಾದಕ ಪ್ರಯತ್ನ ಎಂದು ಪೊಲೀಸರು ಶಂಕಿಸಿದ್ದಾರೆ.
ಆ ವ್ಯಕ್ತಿ ಬೆಳಿಗ್ಗೆ 9.30ರ ಸುಮಾರಿಗೆ ಅಂಗಡಿಯಿಂದ ಹೂವುಗಳನ್ನ ಖರೀದಿಸಲು ಸ್ಕೂಟಿಯಲ್ಲಿ ಮಾರುಕಟ್ಟೆಗೆ ಹೋಗಿದ್ದು, ಅಲ್ಲೇ ಚೀಲ ಮತ್ತು ಸ್ಕೂಟಿ ಬಿಟ್ಟು ಹೋಗಿದ್ದಾನೆ. ಸ್ವಲ್ಪ ಸಮಯದ ನಂತ್ರ ಆತ ಬರದಿದ್ದನ್ನ ಕಂಡು ಅನುಮಾನಗೊಂಡ ಹೂವಿನ ಮಾರಾಟಗಾರ, ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾನೆ.
ಹಾಲಿ ಎಫ್-2 ಚಾಂಪಿಯನ್ ‘ಪ್ರೆಮಾ ರೇಸಿಂಗ್’ಗೆ ಭಾರತದ ಎಫ್1 ಭರವಸೆ ‘ಜೇಹನ್ ದಾರುವಾಲಾ’ ಸೇರ್ಪಡೆ
BIGG NEWS : ರಾಜ್ಯ ಸರ್ಕಾರದಿಂದ ʼಅತಿಥಿ ಉಪನ್ಯಾಸಕʼರಿಗೆ ಸಂಕ್ರಾಂತಿ ಗಿಫ್ಟ್ : ಮಾಸಿಕ ವೇತನ 32 ಸಾವಿರಕ್ಕೆ ಹೆಚ್ಚಳ