ಬೆಂಗಳೂರು: ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಕೆಗೆ ಒತ್ತಾಯಿಸಿ ರಾಜ್ಯ ಸರ್ಕಾರದ ವಿರುದ್ಧ ಆರೋಗ್ಯ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆಯ ನೌಕರರು ಫೆಬ್ರವರಿ 6, 2023ರಿದಂ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಈ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಸಿಡಿದೆದ್ದಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವಂತ ರಾಜ್ಯ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ಗುತ್ತಿಗೆ, ಹೊರಗುತ್ತಿಗೆ ನೌಕರರ ಸಂಘವು, ನಮ್ಮ ಬೇಡಿಕೆಗಳ ಈಡೇರಿಕೆಗಾಗಿ KSHCOEA ವತಿಯಿಂದ ಸಂಘದ ಗೌರವ ಅಧ್ಯಕ್ಷರಾದ ಆಯನೂರು ಮಂಜುನಾಥರವರ, ಸಂಯೋಜಿತ ಸಂಘವಾದ ಭಾರತೀಯ ಮಜ್ದೂರ್ ಸಂಘದ ಮಾರ್ಗದರ್ಶನ, ರಾಜ್ಯ ಸಂಘ ಹಾಗೂ ಜಿಲ್ಲೆಗಳ ಪ್ರಮುಖರು ಸೇರಿ ಚರ್ಚಿಸಿ ನಿರ್ಧಾರ ಮಾಡಿದಂತೆ ದಿನಾಂಕ 06.02.2023 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಅನಿರ್ದಿಷ್ಟ ಅವಧಿಗೆ ಮುಷ್ಕರಕ್ಕೆ ಕರೆ ನೀಡಲಾಗಿದೆ.
ಆರೋಗ್ಯ ಇಲಾಖೆ ವೈದ್ಯಕೀಯ ಶಿಕ್ಷಣ ಇಲಾಖೆ ಮತ್ತು ರಾಷ್ಟೀಯ ಆರೋಗ್ಯ ಅಭಿಯಾನದ ಗುತ್ತಿಗೆ ಮತ್ತು ಹೊರಗುತ್ತಿಗೆ ಪ್ರಮುಖ ಬೇಡಿಕೆಗಳಾದ
1. ನೌಕರರ ಸೇವೆ ಖಾಯಂಗೊಳಿಸುವುದು
2. ಸಮಾನ ಕೆಲಸಕ್ಕೆ, ಸಮಾನ ವೇತನ ಜಾರಿ
3. ಹೊರಗುತ್ತಿಗೆ ನೌಕರರಿಗೆ ಸರ್ಕಾರದಿಂದ ಸಂಸ್ಥೆ ಮತ್ತು ನೇರ ವೇತನ ಪಾವತಿ.
4. ಸಾಮಾಜಿಕ ಭದ್ರತೆ ಯೋಜನೆಗಳನ್ನು ಜಾರಿಗೊಳಿಸುವುದು
5. ನೌಕರರ ಕುಟುಂಬಕ್ಕೆ Compensatory Job
6. ಕೃಪಾಂಕ ಹೆಚ್ಚಳ: ಶೇ.20ಕ್ಕೆ ನಿಗದಿಯಾಗಿದ್ದ, ಕೃಪಾಂಕ ಶೇ.30ಕ್ಕೆ ಹೆಚ್ಚಿಸಿದ ಆದೇಶ ನೀಡುವುದು.
7. ಜಿಲ್ಲೆಯಿಂದ ಜಿಲ್ಲೆಗೆ ವರ್ಗಾವಣೆ, ವಿಮೆ ಸೇರಿ ಇತರೆ ಪ್ರಮುಖ ಬೇಡಿಕೆಗಳು ಈಡೇರಿಕೆಗೆ ಹಾಗೂ ಶ್ರೀ ಶ್ರೀನಿವಾಸ ಚಾರಿ ವರದಿಯ ಪ್ರಮುಖ ಅಂಶಗಳ ಜಾರಿಗಾಗಿ ಆಗ್ರಹಿಸಿ ಸಂಘದ ನಿರ್ಣಯದಂತೆ ಈ ಮುಷ್ಕರದಲ್ಲಿ ಸರ್ವ ನೌಕರರು ಭಾಗಿ ಆಗುವಂತೆ ಈ ಮೂಲಕ ಅಧಿಕೃತವಾಗಿ ಕರೆ ನೀಡಿದೆ ಎಂದು ಹೇಳಿದೆ.
ಇನ್ನೂ ನಮ್ಮದು ಚುನಾವಣೆಯ ಸಮಯ ಮಾಡು ಇಲ್ಲವೇ ಮಡಿ ಹೋರಾಟವಾಗಿದೆ. ನಮ್ಮ ಬೇಡಿಕೆ ಈಡೇರಿಸೋವರೆಗೆ ಅನಿರ್ಧಿಷ್ಟಾವಧಿಯ ಮುಷ್ಕರ ಮುಂದುವರೆಯಲಿದೆ ಎಂಬುದಾಗಿ ತಿಳಿಸಿದೆ.