ಬೆಂಗಳೂರು: ಕೆಲಸಕ್ಕೆ ಸೇರಿದ ಅನೇಕರಿಗೆ ಪಿಎಫ್ ನೀಡಲಾಗುತ್ತದೆ. ಉದ್ಯೋಗದಾತರಿಂದ ನೀಡುವಂತ ಪಿಎಫ್ ಕೆಲಸ ಬಿಟ್ಟನಂತ್ರ ಉದ್ಯೋಗಿಗಳು ಹಿಂತೆಗೆದುಕೊಳ್ಳಬಹುದು, ಇಲ್ಲವೇ ಮತ್ತೊಂದು ಕಂಪನಿಗೆ ಸೇರಿದ ನಂತ್ರ ಅದೇ ಖಾತೆಯನ್ನು ಮುಂದುವರೆಸಬಹುದು. ಹೀಗೆ EPFOಗೆ ಸಂಬಂಧಿಸಿದಂತ ನಿಮ್ಮ ಯಾವುದೇ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಲು ಇಂದು ಪ್ರಾದೇಶಿಕ ಆಯುಕ್ತರ ಕಚೇರಿಗಳಲ್ಲಿ ನಿಧಿ ಆಪ್ಕೆ ನಿಕಾತ್ 2.0 ಕಾರ್ಯಕ್ರಮದಲ್ಲಿ ಭಾಗವಹಿಸಿ, ಸ್ಥಳದಲ್ಲಿಯೇ ಸಮಸ್ಯೆಗೆ ಪರಿಹಾರವನ್ನು ಪಡೆಯಬಹುದಾಗಿದೆ.
ಈ ಬಗ್ಗೆ ಬೆಂಗಳೂರಿನ ಕೆ ಆರ್ ಪುರಂ ಪ್ರಾದೇಶಿಕ ಭವಿಷ್ಯ ನಿಧಿ ಕಚೇರಿಯಿಂದ ( Regional Provident Fund Office – EPFO ) ಮಾಹಿತಿ ಹಂಚಿಕೊಳ್ಳಲಾಗಿದ್ದು, ಪ್ರತಿ ತಿಂಗಳ 27ರಂದು ಕೇಂದ್ರ ಕಚೇರಿಯ ಸೂಚನೆಯ ಮೇರೆಗೆ ನಿಧಿ ಆಪ್ಕೆ ನಿಕಾತ್ 2.0 ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಅದರಂತೆ ಮಾರ್ಚ್ 27ರ ಇಂದು ಕೆ ಆರ್ ಪುರಂ ಪ್ರಾದೇಶಿಕ ಕಚೇರಿ ಸೇರಿದಂತೆ ರಾಜ್ಯ, ದೇಶಾದ್ಯಂತ ಪ್ರಾದೇಶಿಕ ಭವಿಷ್ಯನಿಧಿ ಕಚೇರಿ ವ್ಯಾಪ್ತಿಯಲ್ಲಿ ನಡೆಯುತ್ತಿದೆ ಎಂಬುದಾಗಿ ಹೇಳಿದೆ.
ಉದ್ಯೋಗದಾತರು, ಉದ್ಯೋಗಿಗಳ ಈ ಸಮಸ್ಯೆಗಳಿಗೆ ಪರಿಹಾರ
ಮಾರ್ಚ್ 27ರ ಇಂದು ನಡೆಯುತ್ತಿರುವಂತ ನಿಧಿ ಆಪ್ಕೆ ನಿಕಾತ್ 2.0 ಕಾರ್ಯಕ್ರಮದಲ್ಲಿ ಇಪಿಎಫ್ಓಗೆ ಸಂಬಂಧಿಸಿದಂತೆ ಉದ್ಯೋಗದಾತರು, ಉದ್ಯೋಗಿಗಳು ತಮ್ಮ ಸಮಸ್ಯೆಗೆ ಪರಿಹಾರವನ್ನು ಸ್ಥಳದಲ್ಲಿಯೇ ಪಡೆಯಬಹುದು.
ಪಿಎಫ್ ಹಣ ಜಮೆ, ಪಿಎಫ್ ವರ್ಗಾವಣೆ, ಪಿಎಫ್ ಖಾತೆ ( PF Account ) ತೆರೆಯುವುದು ಸೇರಿದಂತೆ ವಿವಿಧ ಸಮಸ್ಯೆಗಳನ್ನು ಪ್ರಾದೇಶಿಕ ಆಯುಕ್ತರ ಕಚೇರಿ ವ್ಯಾಪ್ತಿಯಲ್ಲಿ ಮಾರ್ಚ್ 27ರ ಇಂದು ನಡೆಯುವಂತ ನಿಧಿ ಆಪ್ಕೆ ನಿಕಾತ್ 2.0 ಕಾರ್ಯಕ್ರಮದಲ್ಲಿ ಭಾಗವಹಿಸಿ ಸರಿಪಡಿಸಿಕೊಳ್ಳಬಹುದು.
ಪಿಎಫ್ ಹಣ ನಿಮ್ಮ ಖಾತೆಗೆ ಜಮೆ ಆಗದೇ ಇರುವ ಸಮಸ್ಯೆ ಆಗಲೀ, ಪಿಎಫ್ ಹಣ ಹಿಂತೆಗೆದುಕೊಳ್ಳಲು ಅರ್ಜಿ ಸಲ್ಲಿಸಿ ಇನ್ನೂ ಆಗದೇ ಇದ್ದರೂ, ಇಲ್ಲವೇ ಪಿಎಫ್ ಹಣ ಹಿಂತೆಗೆದುಕೊಳ್ಳಲು ಅರ್ಜಿ ಸಲ್ಲಿಸಿ ರಿಜೆಕ್ಟ್ ಆಗಿದ್ದರೂ ನಿಧಿ ಆಪ್ಕೆ ನಿಕಾತ್ 2.0 ಕಾರ್ಯಕ್ರಮಕ್ಕೆ ತೆರಳಿದರೇ, ನಿಮ್ಮ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬಹುದು.
ಸಹಾಯಕ ಆಯುಕ್ತರು, ಪ್ರಾದೇಶಿಕ ಆಯುಕ್ತರು ಭಾಗಿ
ಇಂದು ಕೆ ಆರ್ ಪುರಂ ಪ್ರಾದೇಶಿಕ ಭವಿಷ್ಯ ನಿಧಿ ಕಚೇರಿಯಿಂದ ಎರಡು ಕಡೆ ನಿಧಿ ಆಪ್ಕೆ ನಿಕಾತ್ 2.0 ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮದ ವೇಳೆಯಲ್ಲಿ ಭವಿಷ್ಯ ನಿಧಿಯ ಸಹಾಯಕ ಆಯುಕ್ತರಾದಂತ ಗೌರವ್ ಮೀನಾ, ಪ್ರಾದೇಶಿಕ ಆಯುಕ್ತರಾದ ಪಿ.ಚಂದ್ರಶೇಖರ್, ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತರು ಗ್ರೇಡ್ -2 ಆದಂತ ವೀರೇಶ್ ರಾಮಲಿಂಗಪ್ಪ ಕಾಮತ್ ಹಾಗೂ ಕೆ ಆರ್ ಪುರಂ ಪ್ರಾದೇಶಿಕ ಆಯುಕ್ತರ ಕಚೇರಿಯ ಜಿಲ್ಲಾ ಸಮನ್ವಯಾಧಿಕಾರಿ ನಿಶಾಂತ್ ಸೇರಿದಂತೆ ಇತರರು ಹಾಜರು ಇರಲಿದ್ದಾರೆ.
ಈ ಮೇಲ್ಕಂಡ ಅಧಿಕಾರಿಗಳು ಉದ್ಯೋಗದಾತರು, ಉದ್ಯೋಗಿಗಳಿಗೆ ಇಪಿಎಫ್ಓಗೆ ಸಂಬಂಧಿಸಿದಂತ ಯಾವುದೇ ಸಮಸ್ಯೆಗಳಿದ್ದರೇ ಸ್ಥಳದಲ್ಲಿಯೇ ಪರಿಹಾರವನ್ನು ನೀಡಲಿದ್ದಾರೆ. ಇಲ್ಲವೇ ಸಮಸ್ಯೆಯ ಸಂಬಂಧ ದೂರು ಪಡೆದು ಎರಡು ಮೂರು ದಿನಗಳಲ್ಲಿಯೇ ಪರಿಹರಿಸಿಕೊಡಲಿದ್ದಾರೆ.
ಕೆ ಆರ್ ಪುರಂ ಪ್ರಾದೇಶಿಕ ಆಯುಕ್ತರ ಕಚೇರಿಯ ಈ ಎರಡು ಕಡೆ ನಿಧಿ ಆಪ್ಕೆ ನಿಕಾತ್ 2.0 ಕಾರ್ಯಕ್ರಮ ಆಯೋಜನೆ
ಪ್ರತಿ ತಿಂಗಳು 27ರಂದು ನಡೆಯುವಂತ ನಿಧಿ ಆಪ್ಕೆ ನಿಕಾತ್ 2.0 ಕಾರ್ಯಕ್ರಮವನ್ನು ಬೆಂಗಳೂರಿನ ಕೆ ಆರ್ ಪುರಂ ವ್ಯಾಪ್ತಿಯ ಈ ಕೆಳಕಂಡ ಎರಡು ಕಡೆ ಆಯೋಜಿಸಲಾಗಿದೆ.
- ಮುಖ್ಯ ಜನರಲ್ ಮ್ಯಾನೇಜರ್ ಕಛೇರಿ, BSNL ಕರ್ನಾಟಕ ವೃತ್ತ, ನಂ.1, ಸ್ವಾಮಿ ವಿವೇಕಾನಂದ ರಸ್ತೆ, ಹಲಸೂರು, ಬೆಂಗಳೂರು-560008
- ಮೊಯ್ದು ಮಹಲ್, ಮುನ್ಸಿಪಲ್ ಕೋರ್ಟ್ ಎದುರು, ರಾಬರ್ಟ್‌ಸನ್‌ಪೇಟೆ, ಕೆಜಿಎಫ್, ಕೋಲಾರ-563122.
ಈ ಮೇಲ್ಕಂಡ ಕೆ ಆರ್ ಪುರಂ ಪ್ರಾದೇಶಿಕ ಪಿಎಫ್ ಕಚೇರಿಯ ಎರಡು ಕಡೆ ಇಂದು ನಿಧಿ ಅಪ್ಕೆ ನಿಕಾತ್ 2.0 ಕಾರ್ಯಕ್ರಮ ನಡೆಯುತ್ತಿದೆ. RO, KR ಪುರಂ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಉದ್ಯೋಗದಾತರು/ನೌಕರರು/ಪಿಂಚಣಿದಾರರು ಶಿಬಿರಕ್ಕೆ ಭೇಟಿ ನೀಡಿ ತಮ್ಮ ಕುಂದುಕೊರತೆಗಳನ್ನು ಇತ್ಯರ್ಥಪಡಿಸಿಕೊಳ್ಳಬಹುದು.
ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತವರು ಈ ಕೆಳಕಂಡ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ, ಮುಂಚಿತವಾಗಿಯೇ ನೋಂದಾಯಿಸಿಕೊಳ್ಳಬಹುದಾಗಿದೆ.
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ ಆರ್ ಪುರಂ ಭವಿಷ್ಯ ನಿಧಿ ಕಚೇರಿಯ 080-25658001 ಸಂಖ್ಯೆಗೆ ಕಚೇರಿಯ ಸಮಯದಲ್ಲಿ ಸಂಪರ್ಕಿ, ಪಡೆಯಬಹುದಾಗಿದೆ. ಇಲ್ಲವೇ sro.krpuram@epfindia.gov.in ಅಥವಾ do.kolar@epfindia.gov.in ಮಿಂಚಂಚೆಗೂ ಮೇಲ್ ಮಾಡಿ ಪಡೆಯಬಹುದಾಗಿದೆ.
ಅಂದಹಾಗೇ ಇಂದು ರಾಜ್ಯಾಧ್ಯಂತ ಪ್ರಾದೇಶಿಕ ಭವಿಷ್ಯನಿಧಿ ಆಯುಕ್ತರ ಕಚೇರಿಯಲ್ಲಿ ನಿಧಿ ಆಪ್ಕೆ ನಿಕಾತ್ 2.0 ಕಾರ್ಯಕ್ರಮ ನಡೆಯಲಿದೆ. ನೀವು ಭಾಗವಹಿಸಿ ನಿಮ್ಮ ಪಿಎಫ್ ಗೆ ಸಂಬಂಧಿಸಿದಂತ ಸಮಸ್ಯೆಯನ್ನು ಸರಿಪಡಿಸಿಕೊಳ್ಳಬಹುದಾಗಿದೆ. ಸೋ ಇಂದು ಪ್ರಾದೇಶಿಕ ಪಿಎಫ್ ಕಚೇರಿ ವ್ಯಾಪ್ತಿಯಲ್ಲಿನ ನಿಧಿ ಆಪ್ಕೆ ನಿಕಾತ್ 2.0 ಕಾರ್ಯಕ್ರಮದಲ್ಲಿ ಭಾಗವಹಿಸಿ, ನಿಮ್ಮ ಸಮಸ್ಯೆ ಸರಿ ಪಡಿಸಿಕೊಳ್ಳೋದು ಮರೆಯಬೇಡಿ.
ವರದಿ: ವಸಂತ ಬಿ ಈಶ್ವರಗೆರೆ