BIGG NEWS : ಅಂಜನಾದ್ರಿಯಲ್ಲಿ ಹನುಮಮಾಲೆ ವಿಸರ್ಜನೆ ಸುಸಜ್ಜಿತ : ಲಕ್ಷಕ್ಕಿಂತ ಹೆಚ್ಚು ಭಕ್ತರು ಭಾಗಿ

ಕೊಪ್ಪಳ  : ಅಂಜನಾದ್ರಿ ಬೆಟ್ಟದಲ್ಲಿ ಡಿಸೆಂಬರ್ 5ರಂದು ಹನುಮಮಾಲೆ ವಿಸರ್ಜನೆ ಕಾರ್ಯಕ್ರಮವು ಸುವ್ಯವಸ್ಥಿತವಾಗಿ ನಡೆಯಿತು. ಕಣ್ಣುಹಾಯಿಸಿದೆಲ್ಲೆಡೆ ಕೇಸರಿ ವಸ್ತ್ರಧಾರಿ ಭಕ್ತಗಣವೇ ಕಂಡು ಬಂದಿತು. ಕರ್ನಾಟಕದ ವಿವಿಧ ಜಿಲ್ಲೆಗಳು ಸೇರಿದಂತೆ ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ತಮಿಳುನಾಡು ಮತ್ತು ಇನ್ನೀತರ ಕಡೆಗಳಿಂದ ಶ್ರೀ ಆಂಜನೇಯ ಜನ್ಮಭೂಮಿ ಐತಿಹ್ಯದ ಅಂಜನಾದ್ರಿ ಪರ್ವತದ ಸ್ಥಳಕ್ಕೆ ಲಕ್ಷಕ್ಕಿಂತ ಹೆಚ್ಚು ಜನ ಭಕ್ತರು ಆಗಮಿಸಿ ಮಾಲೆಯನ್ನು ವಿಸರ್ಜನೆ ಮಾಡಿದರು. ಆಂಜನೇಯ ದೇವರ ದರ್ಶನ ಪಡೆದರು. ಹನುಮಮಾಲಾ ಅಭಿಯಾನವನ್ನು ಯಶಸ್ವಿಗೊಳಿಸುವ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲಾಡಳಿತವು ವಿವಿಧ ಇಲಾಖೆಗಳ … Continue reading BIGG NEWS : ಅಂಜನಾದ್ರಿಯಲ್ಲಿ ಹನುಮಮಾಲೆ ವಿಸರ್ಜನೆ ಸುಸಜ್ಜಿತ : ಲಕ್ಷಕ್ಕಿಂತ ಹೆಚ್ಚು ಭಕ್ತರು ಭಾಗಿ