ಜೋಹಾನ್ಸ್ ಬರ್ಗ್ : ವಿಶ್ವದಾದ್ಯಂತ ಆತಂಕ ಸೃಷ್ಟಿಸಿರುವ ಒಮಿಕ್ರಾನ್ ಸೋಂಕಿನ (omicron variant) ಕುರಿತಂತೆ ನೆಮ್ಮದಿಯ ಸುದ್ದಿಯೊಂದು ಸಿಕ್ಕಿದ್ದು, ಒಮಿಕ್ರಾನ್ ಸೋಂಕಿನ (omicron variant) ಲಕ್ಷಣಗಳು ಮೊದಲ ಮೂರು ಅಲೆಗಳಿಗಿಂತ ಸೌಮ್ಯವಾಗಿರಲಿವೆ ಎಂದು ದಕ್ಷಿಣ ಆಫ್ರಿಕಾದ ತಜ್ಞರು (South African experts) ಮಾಹಿತಿ ನೀಡಿದ್ದಾರೆ.
ದಕ್ಷಿಣ ಆಫ್ರಿಕಾದ ತಜ್ಞರು ನಡೆಸಿರುವ ಅಧ್ಯಯನದ ಪ್ರಕಾರ, ಗೌಟೆಂಗ್ ಪ್ರಾಂತ್ಯದಲ್ಲಿ ಪ್ರಸ್ತುತ ನಾಲ್ಕನೇ ಅಲೆ ಶುರುವಾಗಿದೆ. ಆಸ್ಪತ್ರೆಗಳಲ್ಲಿ ದಾಖಲಾಗಿರುವ ರೋಗಿಗಳಲ್ಲಿ ಕಂಡುಬಂದಿರುವ ರೋಗ ಲಕ್ಷಣಗಳು ಕಳೆದ ಮೂರು ಅಲೆಗಳಿಗಿಂತ ಸೌಮ್ಯವಾಗಿವೆ ಎಂಬುದು ತಿಳಿದುಬಂದಿದೆ.
ಉದ್ಯಾನವನಗಳಲ್ಲಿ ಸಾಕುಪ್ರಾಣಿಗಳು: ಕರ್ನಾಟಕ ಹೈಕೋರ್ಟ್ ಸ್ವಯಂಪ್ರೇರಿತ ಅರಿವು
ಮೊದಲ ಮೂರು ಅಲೆ ಸಂದರ್ಭದಲ್ಲಿ ಹೆಚ್ಚಿನ ಕೊರೊನಾ ಸೋಂಕಿನ ಪ್ರಕರಣಗಳು ಕಂಡುಬರುತ್ತಿದ್ದವು. ಓಮಿಕ್ರಾನ್ ರೂಪಾಂತರದ ರೋಗಲಕ್ಷಣಗಳು ಹಿಂದಿನ ತಳಿಗಳಿಗಿಂತ ಭಿನ್ನವಾಗಿರಬಹುದು. ರೋಗಿಗಳಲ್ಲಿ ಹೆಚ್ಚು ಆಯಾಸ, ಮೈ ಕೈ ನೋವು ಮತ್ತು ತಲೆನೋವು ಕಂಡುಬರುತ್ತಿದೆ. ಕೆಲವು ರೋಗಿಗಳಲ್ಲಿ ದೌರ್ಬಲ್ಯದ ಲಕ್ಷಣಗಳು ಕೂಡಾ ವರದಿಯಾಗಿವೆ. ಇಲ್ಲಿಯವರೆಗೆ ಯಾವುದೇ ರೋಗಿಗಿಯಲ್ಲಿ ವಾಸನೆಯ ನಷ್ಟ ಅಥವಾ ನಾಲಗೆ ರುಚಿ ನಷ್ಟ ತೀವ್ರ ಜ್ವರದಂತಹ ಸಮಸ್ಯೆ ಕೇಳಿ ಬಂದಿಲ್ಲ ಎಂದು ದಕ್ಷಿಣ ಆಫ್ರಿಕಾದ ವೈದ್ಯಕೀಯ ಸಂಘದ ಅಧ್ಯಕ್ಷ ಡಾ ಏಂಜೆಲಿಕ್ ಕೊಯೆಟ್ಜಿ ಮಾಹಿತಿ ನೀಡಿದ್ದಾರೆ.