ಚಿತ್ರದುರ್ಗ : ರಾಜ್ಯದಲ್ಲಿ ಭಾರೀ ಮಳೆಗೆ 1.37 ಲಕ್ಷ ಹೆಕ್ಟರ್ ಪ್ರದೇಶದ ಬೆಳೆ ಹಾನಿಯಾಗಿದೆ. ಪರಿಹಾರ ನೀಡಲು 145 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.

BIGG BREAKING NEWS : ಜಮ್ಮುಕಾಶ್ಮೀರದ ಸೇನಾ ಶಿಬಿರದ ಮೇಲೆ ಉಗ್ರರ ಆತ್ಮಾಹುತಿ ದಾಳಿ : ಮೂವರು ಯೋಧರು ಹುತಾತ್ಮ

ಬುಧವಾರ ಮೊಳಕಾಲ್ಮೂರು ಪಟ್ಟಣದಲ್ಲಿ ನಡೆದ ತಾಲೂಕು ಆಡಳಿತ ಸೌಧ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,  ರಾಜ್ಯದಲ್ಲಿ 14 ಜಿಲ್ಲೆಯ 160 ತಾಲೂಕುಗಳಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಈ ಭಾರಿಯ ಮಳೆಗೆ 17,750 ಮನೆಗಳು ಬಿದ್ದಿವೆ. 1.37 ಲಕ್ಷ ಹೆಕ್ಟೇರ್ ಬೆಳೆ ನಾಶವಾಗಿದೆ. ಹಿಂದೆ ನೀಡುತ್ತಿದ್ದ ನೆರೆ ಪರಿಹಾರ ಮೊತ್ತವನ್ನು ಸರ್ಕಾರ ಹೆಚ್ಚಿಸಿದೆ. ಕೃಷಿ ಬೆಳೆಗೆ ನೀಡುತ್ತಿದ್ದ ರೂ.6800 ಪರಿಹಾರ ಮೊತ್ತವನ್ನು ರೂ.13,800 ಕ್ಕೆ ಹೆಚ್ಚಿಸಲಾಗಿದೆ. ಬಹುವಾರ್ಷಿಕ ತೋಟಗಾರಿಕೆ ಬೆಳೆಗಳಿಗೆ ನೀಡುತ್ತಿದ್ದ ರೂ.18,000 ಪರಿಹಾರ ಮೊತ್ತವನ್ನು 28,000 ಕ್ಕೆ ಹೆಚ್ಚಿಸಲಾಗಿದೆ. ಕಳೆದ ಬಾರಿ ಒಟ್ಟು ರೂ.2500 ಕೋಟಿ ಬೆಳೆ ಪರಿಹಾರ ಮೊತ್ತವನ್ನು ರೈತರ ಖಾತೆಗೆ ನೇರವಾಗಿ ಜಮೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

BIGG NEWS : ಕೊರೊನಾ ಹೆಚ್ಚಳ ಭೀತಿ : ಗಣೇಶ ಹಬ್ಬಕ್ಕೆ ಕಠಿಣ ನಿಯಮ ಜಾರಿಗೆ ರಾಜ್ಯ ಸರ್ಕಾರ ಚಿಂತನೆ

ಚಿತ್ರದುರ್ಗ ಜಿಲ್ಲೆಯಲ್ಲಿ 2316 ಮನೆಗಳು ಮಳೆಯಿಂದ ಹಾನಿಗೆ ಒಳಗಾಗಿದ್ದು ಸುಮಾರು ರೂ.12 ಕೋಟಿ ಹಣ ಬಿಡುಗಡೆ ಮಾಡಲಾಗಿದೆ. ಕೋವಿಡ್‌ನಿಂದ ಮೃತಪಟ್ಟ ವ್ಯಕ್ತಿಯ ಕುಟುಂಬದವರಿಗೆ ರೂ.1 ಲಕ್ಷ ಪರಿಹಾರ ಧನ ನೀಡಲಾಗಿದೆ. ಒಟ್ಟು ರೂ.6.50 ಕೋಟಿ ಹಣವನ್ನು ಜಿಲ್ಲೆ ಬಿಡುಗಡೆ ಮಾಡಲಾಗಿದೆ. ರೂ.145 ಕೋಟಿ ರೂಪಾಯಿಗಳ ಬೆಳೆ ಪರಿಹಾರ ಹಣವನ್ನು ಬಿಡುಗಡೆ ಮಾಡಲಾಗಿದೆ. ಜಿಲ್ಲೆಯ 278 ಜನ ವಸತಿ ಪ್ರದೇಶಗಳನ್ನು ಕಂದಾಯ ದಾಖಲೆಗಳಲ್ಲಿ ತರಲಾಗುವುದು ಎಂದರು.

BIGG NEWS : ಕೋವಿಡ್ ನಿಂದ ಸಿಎಂ ಬಸವರಾಜ ಬೊಮ್ಮಾಯಿ ಗುಣಮುಖ : ಇಂದು ಮೈಸೂರು, ಮಂಡ್ಯ ಜಿಲ್ಲೆ ಪ್ರವಾಸ

BREAKING NEWS : ಸೇನಾ ಶಿಬಿರಕ್ಕೆ ನುಸುಳಲು ಯತ್ನ : ಭಾರತೀಯ ಸೇನೆಯ ಗುಂಡಿಗೆ ಇಬ್ಬರು ಉಗ್ರರು ಬಲಿ

Share.
Exit mobile version