ಬೆಂಗಳೂರು: ರಾಜ್ಯದಲ್ಲಿ ಹೊಸದಾಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ( Primary School ) ಉನ್ನತೀಕರಿಸಿ, ಪ್ರೌಢಶಾಲೆಯನ್ನು ( High School ) ಆರಂಭಿಸೋದಕ್ಕೆ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ.

Bank Holidays in August : ಬ್ಯಾಂಕ್ ಗ್ರಾಹಕರೇ ಗಮನಿಸಿ : ಇಲ್ಲಿದೆ ಆಗಸ್ಟ್ ತಿಂಗಳ ಬ್ಯಾಂಕ್ ರಜೆ ದಿನಗಳ ಪಟ್ಟಿ

ಈ ಬಗ್ಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿಗಳನ್ನು ಹೊರಡಿಸಿದ್ದು, ರಾಜ್ಯ ಸರ್ಕಾರದಿಂದ 95 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳನ್ನು ಪ್ರೌಢಶಾಲೆಗಳನ್ನಾಗಿ ಉನ್ನತೀಕರಿಸಲು ಮಂಜೂರಾತಿ ನೀಡಿದೆ ಎಂದು ತಿಳಿಸಿದ್ದಾರೆ.

ಗ್ರಾಹಕರೇ ಗಮನಿಸಿ : ನಾಳೆಯಿಂದ ಬದಲಾಗಲಿವೆ ಈ ಎಲ್ಲಾ ನಿಯಮಗಳು|Changes From 1st August

ಸರ್ಕಾರದ ಆದೇಶದಂತೆ ಬಾಗಲಕೋಟೆಯ ಎರಡು, ಬಳ್ಳಾರಿಯ 11, ಬೆಂಗಳೂರು ಸೌಥ್ ನ 3 ಶಾಲೆ, ಬೆಳಗಾವಿಯ ಐದು ಶಾಲೆಗಳು, ಬೆಳಗಾವಿ ಚಿಕ್ಕೋಡಿ ವಿಭಾಗದಿಂದ 7, ಬೆಂಗಳೂರು ನಾರ್ಥ್ ನ 2, ಚಾಮರಾಜನಗರ ಒಂದು, ಚಿತ್ರದುರ್ಗ ಒಂದು, ದಾವಣಗೆರೆ ಒಂದು, ಧಾರವಾಡ ಮೂರು, ಗದಗ ಎರಡು, ಹಾವೇರಿಯ 16 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳನ್ನು ಪ್ರೌಢಶಾಲೆಯಾಗಿ ಉನ್ನತೀಕರಿಸಿದೆ.

ಕಲಬುರ್ಗಿ ಜಿಲ್ಲೆಯ ನಾಲ್ಕು, ಕೊಪ್ಪಳದ 6, ಮಂಡ್ಯ 1, ರಾಯಚೂರು 6, ಉತ್ತರ ಕನ್ನಡ ಸಿರಸಿ 1, ವಿಜಯಪುರ 5 ಮತ್ತು ಯಾದಗಿರಿಯ 18 ಶಾಲೆಗಳನ್ನು ಪ್ರೌಢ ಶಾಲೆಯಾಗಿ ಉನ್ನತೀಕರಿಸಲಾಗಿದೆ.

Share.
Exit mobile version