ಬೆಂಗಳೂರು : ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ ಗುಡ್ ನ್ಯೂಸ್ ನೀಡಿದ್ದು, 1 ದಿನದ ಮತ್ತು 3 ದಿನದ ಪಾಸ್‌ಗಳನ್ನ ಪರಿಚಯಿಸುತ್ತಿದೆ. ಇನ್ನು ಇದರ ಜೊತೆಗೆ ಬಿಎಂಆರ್‌ಸಿಎಲ್ ಕ್ಲೈಮ್ ಮಾಡದ ಆನ್‌ಲೈನ್ ಸ್ಮಾರ್ಟ್ ಕಾರ್ಡ್ ರೀಚಾರ್ಜ್‌ಗಳು ಮತ್ತು ಆನ್‌ಲೈನ್ ಸ್ಮಾರ್ಟ್‌ಕಾರ್ಡ್ ಟಾಪ್ ಅಪ್‌ಗಳನ್ನ ಮರುಪಾವತಿ ಮಾಡಲಾಗುತ್ತೆ ಎಂದಿದೆ.
ಅಂದ್ಹಾಗೆ, ಇದೇ ಏಪ್ರಿಲ್ 4,2022ರಿಂದ ಚಾಲನೆಗೆ ಬರಲಿದ್ದು, ಒಂದು ದಿನದ ಪಾಸಿಗೆ 200 ಆಗಿದ್ದು, ಮರು ಪಾವತಿಸಬಹುದಾದ ಭದ್ರತಾ ಠೇವಣಿ 50 ರೂಪಾಯಿ ಒಳಗೊಂಡಿರುತ್ತೆ. ಇನ್ನು 3 ದಿನ ಪಾಸಿಗೆ 400 ರೂಪಾಯಿ ಮರು ಪಾವತಿಸಬಹುದಾದ ಭದ್ರತಾ ಠೇವಣಿ 50 ರೂಪಾಯಿ ಒಳಗೊಂಡಿರುತ್ತೆ. ಇನ್ನು ಈ ಪಾಸ್‌ಗಳು 1 ಮತ್ತು 3 ದಿನಗಳ ಅನಿಯಮಿತ ಪ್ರಯಾಣವನ್ನ ಅನುಮತಿಸುತ್ತೆ. ಇನ್ನು ಈ ಪಾಸ್‌ಗಳು ಟಿಕೆಟ್ ಕೌಂಟರ್‌ನಲ್ಲಿಯೇ ಲಭ್ಯವಾಗುತ್ತೆ ಎಂದು ಬಿಎಂಆರ್‌ಸಿಎಲ್ ಹೇಳಿದೆ.
BIGG BREAKING : ʼHALʼನಿಂದ ʼ15 ಲಘು ಯುದ್ಧ ಹೆಲಿಕಾಪ್ಟರ್ʼಗಳ ಖರೀದಿಗೆ ಪ್ರಧಾನಿ ನೇತೃತ್ವದ ಸಂಪುಟ ಸಮಿತಿ ಅನುಮೋದನೆ