ಚಿಕ್ಕಬಳ್ಳಾಪುರ : ಇತ್ತೀಚೆಗೆ ಸುರಿದ ಧಾರಾಕಾರ ಮಳೆಯಿಂದಾದ ಬೆಳೆ  ಹಾನಿಗೆ ಪರಿಹಾರವಾಗಿ ಜಿಲ್ಲೆಯಲ್ಲಿ 1.19  ಕೋಟಿಗೂ  ಹೆಚ್ಚು ಪರಿಹಾರ ಹಣವನ್ನು  ರೈತರ ಖಾತೆಗೆ  ಸರ್ಕಾರ ಈಗಾಗಲೇ  ಜಮೆ  ಮಾಡಿದೆ. ಉಳಿದ ರೈತರಿಗೂ ಸದ್ಯದಲ್ಲೇ ಪರಿಹಾರ ಹಣ  ಜಮೆ ಆಗಲಿದೆ  ಎಂದು ಜಿಲ್ಲಾಧಿಕಾರಿ ಎನ್. ಎಂ. ನಾಗರಾಜ್ ಅವರು ತಿಳಿಸಿದ್ದಾರೆ .

JOBS ALEART: ಉದ್ಯೋಗಾಕಾಂಕ್ಷಿಗಳೇ ಗಮನಿಸಿ : 5008 ಬ್ಯಾಂಕ್ ಹುದ್ದೆಗಳಿಗೆ ಅರ್ಜಿ ಆಹ್ವಾನ|SBI Recruitment 2022

ಅವರು ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ಬಿಡುಗಡೆ ಮಾಡಿ ಮಾತನಾಡುತ್ತಾ,   ಸರ್ಕಾರದ  ನಿರ್ದೇಶನದಂತೆ ಕಳೆದೆರಡು  ತಿಂಗಳಿಂದ ಜಿಲ್ಲೆಯಲ್ಲಿ ಉಂಟಾದ ಮಳೆ ಹಾನಿಗೆ ಪರಿಹಾರ ನೀಡಲು  ಜಿಲ್ಲೆಯಾದ್ಯಂತ ಕೃಷಿ, ತೋಟಗಾರಿಕೆ, ಕಂದಾಯ ಹಾಗೂ ಇತರ ಇಲಾಖೆಗಳ ಅಧಿಕಾರಿಗಳು ತುರ್ತು ಜಂಟಿ ಸಮೀಕ್ಷೆ ನಡೆಸಿ ಪರಿಹಾರ ಪೋರ್ಟಲ್ ನಲ್ಲಿ ನೋಂದಣಿಯಾಗಿರುವ ಪೈಕಿ 1,326  ನೋಂದಣಿಗಳನ್ನು  ಅನುಮೋದನೆ ಮಾಡಿ ಈ ಪೈಕಿ ಈ ಜಿಲ್ಲೆಯ    866  ರೈತ ಫಲಾನುಭವಿಗಳ  37,756 ಗುಂಟೆ ನೀರಾವರಿ ಬೆಳೆ ಜಮೀನಿಗೆ ಹಾಗೂ   988 ಗುಂಟೆ ದೀರ್ಘಕಾಲಿಕ ತೋಟಗಾರಿಕೆ  ಬೆಳೆಗಳಿಗೆ ಮತ್ತು 16, 358  ಗುಂಟೆ  ಮಳೆಯಾಶ್ರಿತ  ಕೃಷಿ ಬೆಳೆಗಳಿಗೆ   ಒಟ್ಟಾರೆ ಜಿಲ್ಲೆಯಲ್ಲಿ ಮಳೆಹಾನಿಯಿಂದ ಬೆಳೆ ಹಾನಿಗೊಳಗಾದ ರೈತರಿಗೆ 1.19 ಕೋಟಿಗೂ ಹೆಚ್ಚು ಪರಿಹಾರ  ಹಣ ಈಗಾಗಲೇ ರೈತರ ಖಾತೆಗೆ ನೇರವಾಗಿ ಡಿಬಿಟಿ ಮುಖಾಂತರ ವರ್ಗಾವಣೆ ಮಾಡಲಾಗಿದೆ.ಇನ್ನು ಬಾಕಿ ಇರುವ ರೈತ ಸಂತ್ರಸ್ತರಿಗೆ ಸದ್ಯದಲ್ಲೇ ಪರಿಹಾರ ಹಣ ಜಮೆಯಾಗಲಿದೆ .ಪರಿಹಾರ ಹಣ ಜಮೆಯಾಗದ ರೈತರು ಯಾವುದೇ ಕಾರಣಕ್ಕೂ  ಹೆಚ್ಚಿನ ಆತಂಕಕ್ಕೆ ಒಳಗಾಗಬಾರದು.ಪರಿಹಾರ ಹಣ ಜಮೆ ಆಗುವ ಪ್ರಕ್ರಿಯೆ ನಿರಂತರ ಪ್ರಕ್ರಿಯೆಯಾಗಿದ್ದು ಹಂತಹಂತವಾಗಿ  ಮಳೆ ಹಾನಿ ಗೊಳಗಾದ ಎಲ್ಲಾ ರೈತ  ಸಂತ್ರಸ್ತರಿಗೂ ಸಹ ಪರಿಹಾರ ಹಣ ಶೀಘ್ರದಲ್ಲಿಯೇ  ಜಮೆಯಾಗಲಿದೆ  ಎಂದು  ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ

Share.
Exit mobile version