ದಾವಣಗೆರೆ : 2022-23ನೇ ಸಾಲಿನ ಇಲಾಖೆಯ ಆಧಾರ ಸಾಲ ಯೋಜನೆಯಡಿ ಸ್ವಯಂ ಉದ್ಯೋಗ ಕೈಗೊಳ್ಳುವ ವಿಕಲಚೇತನರಿಗೆ ಸಾಲ ಸೌಲಭ್ಯ ನೀಡಲು ಅರ್ಜಿ ಆಹ್ವಾನಿಸಲಾಗಿರುತ್ತದೆ.  ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:20-08-2022ರಂದು ನಿಗಧಿಪಡಿಸಲಾಗಿದ್ದು. ಜಿಲ್ಲೆಗೆ 16 ಗುರಿ ನೀಡಲಾಗಿರುತ್ತದೆ.

ಅರ್ಜಿ ಸಲ್ಲಿಸುವರು ಅರ್ಜಿದಾರರ ವಯಸ್ಸು 18 ರಿಂದ 55 ವರ್ಷದೊಳಗಿರಬೇಕು. ವಿಕಲಚೇತನರ ವಿಶಿಷ್ಟ ಗುರುತಿನ ಚೀಟಿ (ಯು.ಡಿ.ಐ.ಡಿ) ಹೊಂದಿರಬೇಕು.ವಿಕಲಚೇತನರು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಕ್ಕೆ ಸೇರಿದವರಿರಬೇಕು ಹಾಗೂ ಇದಕ್ಕೆ ಸಂಬಂಧಪಟ್ಟಂತೆ ಆದಾಯ ಪ್ರಮಾಣ ಪತ್ರ/ಬಿ.ಪಿ.ಎಲ್ ಕಾರ್ಡ್‍ನ್ನು ಸಲ್ಲಿಸುವುದು. ಅರ್ಜಿದಾರರು ಕೈಗೊಳ್ಳಬಹುದಾದ ವ್ಯಾಪಾರ, ಉದ್ಯಮ ಈಗಾಗಲೇ ಅಸ್ಥಿತ್ವದಲ್ಲಿದೇಯೇ? ಅಥವಾ ಹೊಸತಾಗಿ ಪ್ರಾರಂಭಿಸಲಿರುವರೇ? ಎಂಬ ಬಗ್ಗೆ ಸಂಬಂಧ ಪಟ್ಟ ಖಾತೆ ಹೊಂದಿರುವ ಬ್ಯಾಂಕಿನಿಂದ ದೃಢೀಕರಣ ಸಲ್ಲಿಸುವುದು. ಅರ್ಜಿದಾರರು ಈ ಕೆಳಕಾಣಿಸಿದ ದಾಖಲಾತಿಗಳೊಂದಿಗೆ ಅರ್ಜಿಯನ್ನು ಸಲ್ಲಿಸಿರಬೇಕು. ಇತ್ತೀಚಿನ ಭಾವಚಿತ್ರ ಆದಾಯ ಪ್ರಮಾಣ ಪತ್ರ/ಬಿ.ಪಿ.ಎಲ್ ಕಾರ್ಡ್ ಅನ್ನು ಸಾಮಾನ್ಯ ವರ್ಗ: ಎಸ್.ಸಿ: ಎಸ್.ಟಿ  ಪಂಗಡದವರು ಸಂಬಂಧಪಟ್ಟ ತಹಶಿಲ್ದಾರ್‍ರಿಂದ ದೃಢೀಕರಿಸಿ ಸಲ್ಲಿಸತಕ್ಕದ್ದು ಅಭ್ಯರ್ಥಿಯು ಕೈಗೊಳ್ಳಬಹುದಾದ ಉದ್ದಿಮೆ: ವ್ಯಾಪಾರಗಳ ಬಗ್ಗೆ ಯೋಜನಾ ವರದಿಯನ್ನು ಸಲ್ಲಿಸಿರಬೇಕೆಂದು ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣಾಧಿಕಾರಿಗಳು, ಡಾ.ಕೆ.ಕೆ. ಪ್ರಕಾಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Share.
Exit mobile version