ತುಮಕೂರು : ತುಮಕೂರಿನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮಾಯಸಂದ್ರ ಹೋಬಳಿಯ ಶೆಟ್ಟಿಗೊಂಡನ ಹಳ್ಳಿ ಬಳಿ ನಡೆದಿದೆ.
Good News : ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಮತ್ತೊಂದು ಸಿಹಿಸುದ್ದಿ : ಅಮೃತ್ ಯೋಜನೆಗೆ 9 ಸಾವಿರ ಕೋಟಿ ರೂ.ಮಂಜೂರು
ಶೆಟ್ಟಿಗೊಂಡನ ಹಳ್ಳಿ ಬಳಿ ಮೂರು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಹಿಂಡಿಸ್ಕೆರೆಯ ರಂಗನಾಥ (25), ಚಿಕ್ಕನಾಯಕನಹಳ್ಳಿ ತಾಲೂಕಿನ ಬುಕ್ಕಾಪಟ್ಟಣದ ಗಿನ್ನಪ್ಪನಹಟ್ಟಿಯ ನವೀನ್ (25), ಭೂತೇಶ್ (25) ಮತ್ತು ಶಶಿಧರ್ ಮೃತರು ಎಂದು ಗುರುತಿಸಲಾಗಿದೆ.
ಎಡೆಯೂರು ಕಡೆಗೆ ಹೊರಟಿದ್ದ ಬೈಕ್ ಗಳಿಗೆ ಸಿ.ಎಸ್.ಪುರದಿಂದ ಬರುತ್ತಿದ್ದ ಬೈಕ್ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದ್ದು,ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಲಡಾಖ್‌ನಲ್ಲಿರುವ ಪ್ಯಾಂಗೊಂಗ್ ತ್ಸೋ ಸರೋವರದ ಮೇಲೆ ಎರಡನೇ ಸೇತುವೆ ನಿರ್ಮಿಸಿದ ಚೀನಾ