ಬಳ್ಳಾರಿ : ಜನಾರ್ಧನ ರೆಡ್ಡಿ ಅವರು ಹೊಸ ಪಕ್ಷ ಕಟ್ಟುವ ವಿಚಾರದ ಕುರಿತಂತೆ ಸಾರಿಗೆ ಸಚಿವ ಬಿ.ಶ್ರೀರಾಮಲು ಪ್ರತಿಕ್ರಿಯೆ ನೀಡಿದ್ದು, ಜನಾರ್ದನ ರೆಡ್ಡಿ ಅವರು ಹೊಸ ಪಕ್ಷ ಕಟ್ಟುವ ಬಗ್ಗೆ ನನ್ನ ಜೊತೆಗೆ ಚರ್ಚಿಸಿಲ್ಲ ಎಂದು ಹೇಳಿದ್ದಾರೆ.

BIG NEWS : ʻಭಾರತ್ ಜೋಡೋ ಯಾತ್ರೆʼಯಲ್ಲಿ ಭಾಗವಹಿಸಿದ ಶಿಕ್ಷಕನಿಗೆ ಅಮಾನತು ಶಿಕ್ಷೆ | Bharat Jodo Yatra

ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀರಾಮುಲು, ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ಹೊಸ ಪಕ್ಷ ಕಟ್ಟುವ ವಿಚಾರ ಅವರ ವಿವೇಚನೆಗೆ ಬಿಟ್ಟಿದ್ದು, ಹೊಸ ಪಕ್ಷ ಕಟ್ಟುವ ಕುರಿತು ನನ್ನ ಜೊತೆಗೆ ಚರ್ಚಿಸಿಲ್ಲ. ರಾಜಕೀಯ ಹೊರತುಪಡಿಸಿ ನಾವಿಬ್ಬರೂ ಒಳ್ಳೆಯ ಸ್ನೇಹಿತರು. ಅವರು ಪಕ್ಷ ಕಟ್ಟಿದರೆ ಅವರಿಗೆ ಒಳ್ಳೆಯದಾಗಲಿ ಎಂದು ಹೇಳಿದ್ದಾರೆ.

BIGG NEWS : ನಾವು ಪ್ರತಿಭಟನೆ ಮಾಡಿದ್ರೆ ಸಿ.ಟಿ. ರವಿ ಹೊರಗೆ ಬರಲ್ಲ : ಮಾಜಿ ಸಚಿವ ಎಂ.ಬಿ.ಪಾಟೀಲ್ ಎಚ್ಚರಿಕೆ

ಜನಾರ್ಧನರೆಡ್ಡಿ ಅವರು ಹೊಸ ಪಕ್ಷ ನೋಂದಣಿ ಮಾಡಿರುವ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ. ಜನಾರ್ಧನ ರೆಡ್ಡಿ ಅವರು ಬಿಜೆಪಿಯಲ್ಲಿ ಅಸಮಾಧನಾಗೊಂಡಿದ್ದಾರೆ.ಈಗಾಗಲೇ ಬಿಜೆಪಿ ವರಿಷ್ಠರ ಗಮನಕ್ಕೆ ತಂದಿದ್ದೇನೆ ಎಂದು ತಿಳಿಸಿದ್ದಾರೆ.

BIGG NEWS : ಇಂದಿನ ರೌಡಿಗಳೇ ಮುಂದಿನ ರಾಜ್ಯ ಬಿಜೆಪಿಯ ಮುಖಂಡರು : ಮಾಜಿ ಸಚಿವ ಹೆಚ್.ಸಿ. ಮಹದೇವಪ್ಪ ಕಿಡಿ

Share.
Exit mobile version