ವಿಜಯಪುರ : ಸರ್ಕಾರಿ ಗೌರವ ಮುಗಿದ ಮೇಲೂ ಸಿದ್ದೇಶ್ವರ ಶ್ರೀಗಳ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.

ವಿಜಯಪುರದಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ ಭಕ್ತರು ಆತಂಕಪಡುವುದು ಬೇಡ, ಸಂಜೆ 5:15 ಕ್ಕೆ ಶ್ರೀಗಳಿಗೆ ಸರ್ಕಾರಿ ಗೌರವ ಸಲ್ಲಿಸಲಾಗುತ್ತದೆ. ಸೂರ್ಯಾಸ್ತದ ಮೊದಲು ಗೌರವ ಸಲ್ಲಿಸಬೇಕಾಗುತ್ತದೆ, ಸರ್ಕಾರಿ ಗೌರವ ಮುಗಿದ ಮೇಲೂ ಸಿದ್ದೇಶ್ವರ ಶ್ರೀಗಳ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ, ಭಕ್ತರು ಗಾಬರಿಪಡಬೇಡಿ, ಆತುರಪಡಬೇಡಿ ಶಾಂತವಾಗಿ ದರ್ಶನ ಪಡೆದು ಬೇರೆಯವರಿಗೂ ದರ್ಶನಕ್ಕೆ ಅವಕಾಶ ನೀಡಿ ಎಂದು ಭಕ್ತರಲ್ಲಿ ಮನವಿ ಮಾಡಿದ್ದಾರೆ.

ಜ್ಞಾನಯೋಗಾಶ್ರಮದ ಪರಮಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು ಲಿಂಗೈಕ್ಯರಾಗಿದ್ದಾರೆ.ಸೈನಿಕ ಶಾಲೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.ಸಿದ್ದೇಶ್ವರ ಶ್ರೀ’ ಗಳ ಅಂತಿಮ ದರ್ಶನಕ್ಕೆ ಜನಸಾಗರವೇ ಹರಿದು ಬರುತ್ತಿದ್ದು, ಕಿ.ಮೀಗಟ್ಟಲೇ ಕ್ಯೂ ನಿಂತಿದೆ.. ಇದುವರೆಗೂ 12 ಲಕ್ಷಕ್ಕೂ ಹೆಚ್ಚು ಜನರು ಅಂತಿಮ ದರ್ಶನ ಪಡೆದಿದ್ದಾರೆ.

ಸಿದ್ದೇಶ್ವರ ಶ್ರೀಗಳ ಅಂತಿಮ ದರ್ಶನಕ್ಕೆ ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದು, ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ ಈ ಸಂದರ್ಭದಲ್ಲಿ ವಿಷಲ್ ಹೊಡೆದು ಭಕ್ತರನ್ನು ನಿಯಂತ್ರಿಸಲು ಮುಂದಾದ ಸಚಿವ ಶ್ರೀರಾಮುಲು ಮುಂದಾಗಿದ್ದಾರೆ.ಶ್ರೀಗಳ ಅಂತಿಮ ದರ್ಶನಕ್ಕೆ ಲಕ್ಷಾಂತರ ಮಂದಿ ಭಕ್ತರು ಆಗಮಿಸಿದ್ದಾರೆ. ಪ್ರತಿ ಮೂಲೆ ಮೂಲೆ, ಹಳ್ಳಿಗಳಿಂದಲೂ ಜನರು ಆಗಮಿಸುತ್ತಿದ್ದಾರೆ. ಇನ್ನು ಅಪಾರ ಸಂಖ್ಯೆ ಜನರು ಬರುವ ಸಾಧ್ಯತೆ ಇದೆ. ಇನ್ನು ಇಂದು ಸಂಜೆ 5 ಗಂಟೆಗೆ ಸಿದ್ದೇಶ್ವರ ಸ್ವಾಮೀಜಿ ಅಂತ್ಯಕ್ರಿಯೆ ನಡೆಯಲಿದೆ. ಅಂತಿಮ ದರ್ಶನ ಮುಗಿಯದಿದ್ಗರೇ ನಾಳೆಯೂ ದರ್ಶಕ್ಕೆ ಅವಕಾಶ ನೀಡಲಾಗುತ್ತದೆ. ಯಾರು ಆತಂಕ ಪಡುವ ಅಗತ್ಯವಿಲ್ಲ ಎಂದು ವಿಜಯಪುರ ಡಿಸಿ ವಿಜಯ್ ಮಹಾಂತೇಶ್ ಆದೇಶ ನೀಡಿದ್ದಾರೆ.

Siddeshwara Swamiji: ಸಿದ್ದೇಶ್ವರ ಶ್ರೀಗಳ ಅಂತಿಮ ದರ್ಶನಕ್ಕೆ ಹರಿದುಬಂದ ಭಕ್ತಸಾಗರ: ಕಿಲೋ ಮೀಟರ್ ಗಟ್ಟಲೇ ಕ್ಯೂ

BIGG NEWS : ‘ಸಿದ್ದೇಶ್ವರ ಶ್ರೀ’ ಗಳ ಅಂತಿಮ ದರ್ಶನಕ್ಕೆ ಹರಿದು ಬರುತ್ತಿರುವ ಜನಸಾಗರ : ಕಿ.ಮೀಗಟ್ಟಲೇ ಕ್ಯೂ

Share.
Exit mobile version